BengaluruPolitics

ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

ಬೆಂಗಳೂರು; ರಾಜ್ಯ ಸರ್ಕಾರದ ಮೇಲೆ ಹಲವು ಗಂಭೀರ ಆರೋಪಗಳು ಕೇಳಿಬಂದಿದೆ.. ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿದ್ದೆಗೆಡಿಸಿದೆ.. ಈ ನಡುವೆ ಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.. ಇದರ ನಡುವೆ ಕೆಲ ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ದೂರು ಹೇಳುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ರಾಜ್ಯ ಸಂಪುಟಕ್ಕೆ ಸರ್ಜರಿ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನಾಳೆ ಅಂದರೆ ಮಂಗಳವಾರ ದೆಹಲಿಗೆ ಹೋಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

ನಾಳೆ ದೆಹಲಿಗೆ ಭೇಟಿ ನೀಡಲಿದ್ದು ಹೈಕಮಾಂಡ್‌ ನಾಯಕ ಜೊತೆ ಮಾತುಕತೆಯಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರೇ ಹೇಳಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಹೈಕಮಾಂಡ್‌ನ ಕೆಲ ವೀಕ್ಷಕರು ಬಂದು ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕೆಲ ಹಿರಿಯರಿಂದ ಮಾಹಿತಿ ಪಡೆದುಕೊಂಡು ಬಂದಿದ್ದರು.. ಅನಂತರ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕರ ಸಭೆ ನಡೆಸಿ, ಶಾಸಕರ ಅಹವಾಲು ಆಲಿಸಿದ್ದರು.. ಈ ವೇಳೆ ಶಾಸಕರು ಏಳೆಂಟು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.. ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ ಮಾಡಿದ್ದರು..

ಇದನ್ನೂ ಓದಿ; 20 ಸೆಕೆಂಡ್‌ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!

ಇದೆಲ್ಲದರ ನಡುವೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಮುಂಚೂಣಿಗೆ ಬಂದಿತ್ತು.. ಹೀಗಾಗಿ, ನಾಳೆ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆ ನಡೆಯುವ ಸಾಧ್ಯತೆ ಇದೆ.. ಮುಖ್ಯವಾಗಿ ಸಂಪುಟಕ್ಕೆ ಸರ್ಜರಿ ಮಾಡುವ ಸಲುವಾಗಿ ಹೆಚ್ಚು ಚರ್ಚೆ ಸಾಧ್ಯತೆ ಇದೆ.. ಕೆಲ ಸಚಿವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡುವುದು, ಇಲ್ಲದೇ ಖಾತೆಗಳ ಬದಲಾವಣೆ ಮಾಡುವ ವಿಚಾರ ಸಂಬಂಧ ಚರ್ಚೆಯಾಗುತ್ತದೆ ಎಂದು ಹೇಳಲಾಗುತ್ತಿದೆ… ಕೆಲವರು ಅಸಮರ್ಥ ಸಚಿವರಿದ್ದು, ಅವರ ಸಿಎಂ, ಡಿಸಿಎಂಗೂ ಅಸಮಾಧಾನ ಇದೆ ಎನ್ನಲಾಗಿದೆ.. ಅಂತಹವರನ್ನು ಸಂಪುಟದಿಂದ ಕೈಬಿಡುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.. ಇನ್ನು ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಬೇರೆಯವರಿಗೆ ಹಂಚುವ ಬಗ್ಗೆಯೂ ಚರ್ಚಿಸಲಾಗುತ್ತದೆ ಎನ್ನಲಾಗಿದೆ..

ಇದನ್ನೂ ಓದಿ; ಆಂಧ್ರದ ಮದನಪಲ್ಲಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ!

Share Post