CrimeHealthNational

ರಾಂಚಿ ಬಳಿ ಹಳಿ ತಪ್ಪಿದ ಮುಂಬೈ-ಹೌರಾ ರೈಲು; ಭಾರೀ ನಷ್ಟ!

ರಾಂಚಿ; ಉತ್ತರ ಭಾರತದಲ್ಲಿ ರೈಲು ದುರ್ಘಟನೆಗಳು ನಡೆಯುತ್ತಲೇ ಇವೆ.. ಇತ್ತೀಚೆಗೆ ಎರಡು ಎಕ್ಸ್‌ಪ್ರೆಸ್‌ ರೈಲುಗಳು ಹಳಿ ತಪ್ಪಿ ದುರಂತ ನಡೆದಿತ್ತು.. ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ.. ಜಾರ್ಖಂಡ್‌ನ ರಾಂಚಿ ಬಳಿಯ ಬಾರಾ ಬಂಬು ಗ್ರಾಮದ ಬಳಿ ಮುಂಬೈ-ಹೌರಾ ರೈಲು ಹಳಿ ತಪ್ಪಿದೆ..

ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಸುಮಾರು 18 ಬೋಗಿಗಳು ಹಳಿ ತಪ್ಪಿದ್ದು, ಇದ್ರಲ್ಲಿ 16 ಬೋಗಿಗಳು ಪ್ಯಾಸೆಂಜರ್‌ ಬೋಗಿಗಳು ಎಂದು ತಿಳಿದುಬಂದಿದೆ.. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ..

ಇದನ್ನೂ ಓದಿ; ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

Share Post