LifestyleNational

ಏಲಿಯನ್‌ಗೆ ದೇಗುಲ ಕಟ್ಟಿದ ತಮಿಳುನಾಡಿನ ವ್ಯಕ್ತಿ!

ಸೇಲಂ; ಏಲಿಯನ್ಸ್‌ ಬಗ್ಗೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿವೆ.. ಅವು ಭೂಮಿಗೆ ಬಂದು ಹೋಗುತ್ತಿವೆ ಎಂಬ ಮಾತುಗಳೂ ಆಗಾಗ ಕೇಳಿಬರುತ್ತಿರುತ್ತವೆ.. ಆದ್ರೆ ಏಲಿಯನ್ಸ್‌ ಇದೆಯಾ, ಇಲ್ಲವಾ ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.. ಈ ನಡುವೆ, ಏಲಿಯನ್ಸ್‌ ಪೂಜಿಸೋ ಸಂಸ್ಕೃತಿ ಶುರುವಾಗಿಬಿಟ್ಟಿದೆ.. ಭಾರತದಲ್ಲಿ ಕೊರೋನಾ ಬಂದರೆ ಕರೋನಮ್ಮನ ದೇವಸ್ಥಾನ ಕಟ್ಟುತ್ತಾರೆ.. ಪ್ಲೇಗ್‌ ಬಂದರೆ ಪ್ಲೇಗ್‌ ಮಾರಿಯಮ್ಮ ಎಂದು ಪೂಜಿಸುತ್ತಾರೆ.. ಇಷ್ಟೇ ಏಕೆ ವ್ಯಕ್ತಿ ಪೂಜೆ ಕೂಡಾ ನಡೆಯುತ್ತೆ.. ರಾಜಕಾರಣಿಗಳು, ಸಿನಿಮಾ ಸ್ಟಾರ್‌ಗಳು, ತಂದೆ-ತಾಯಿಗಳಿಗೆ ಗುಡಿ ಕಟ್ಟಿಸಿ ಪೂಜೆ ಮಾಡುವವರಿದ್ದಾರೆ.. ಆದ್ರೆ ಇಲ್ಲೊಬ್ಬ ವ್ಯಕ್ತಿ ಏಲಿಯನ್‌ ದೇಗುಲ ಕಟ್ಟಿದ್ದಾನೆ.. ನಿತ್ಯ ಏಲಿಯನ್‌ಗೆ ಇಲ್ಲಿ ಪೂಜೆ ನಡೆಯುತ್ತೆ..

ಇದನ್ನೂ ಓದಿ; ವಯನಾಡು ದುರಂತ; ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

ತಮಿಳುನಾಡಿನ ಸೇಲಂ ಜಿಲ್ಲೆಯ ಮಲ್ಲಮೂಪ್ಪನ್ ಪಟ್ಟಿ ಬಳಿಯ ರಾಮಗೌಂಡನೂರಿನ ಲೋಗನಾಥನ್ ಎಂಬಾತ ಒಂದು ದೇವಸ್ಥಾನ ಕಟ್ಟಿದ್ದಾರೆ.. ಅದು ಶಿವನ ದೇವಾಲಯ.. ಶಿವನ ವಿಗ್ರಹದ ಜೊತೆಗೆ ಲೋಗನಾಥನ್‌ ಅವರು ಅಗಸ್ತ್ಯ ಮಹರ್ಷಿಗಳ ವಿಗ್ರಹ ಮತ್ತು ಇನ್ನೊಂದು ಮಂಟಪದಲ್ಲಿ ಅನ್ಯಲೋಕದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.. 2021ರಲ್ಲಿ ಪ್ರಾರಂಭವಾದ ಈ ದೇವಾಲಯದ ನಿರ್ಮಾಣ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದೆ.. ಇದೀಗ ದೇಗುಲದಲ್ಲಿ ಏಲಿಯನ್‌ ಮೂರ್ತಿ ಸ್ಥಾಪನೆ ಮಾಡಿರುವುದರಿಂದ ಇದು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಟ್ರೆಂಡಿಂಗ್‌ ಆಗಿದೆ..

ಇದನ್ನೂ ಓದಿ; ಹಾಸ್ಟೆಲ್‌ನಲ್ಲಿ ಇದೆಲ್ಲಾ ನಡೆಯುತ್ತಾ..?; ದಾಳಿ ನಡೆಸಿದ ಅಧಿಕಾರಿಗಳಿಗೇ ಶಾಕ್‌!

ಅನ್ಯಗ್ರಹದ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವುದು ವಿಶ್ವದಲ್ಲೇ ಇದೇ ಮೊದಲು. ಆದರೆ ಗ್ರಾಮಸ್ಥರೊಂದಿಗೆ ಮಾತನಾಡಿ ಅನುಮತಿ ಪಡೆದು ದೇವಸ್ಥಾನ ನಿರ್ಮಿಸಲಾಗಿದೆ ಎಂದು ಲೋಗನಾಥನ್ ಹೇಳಿದ್ದಾರೆ. ಪ್ರಪಂಚದಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳನ್ನು ತಡೆಯುವ ಶಕ್ತಿ ಏಲಿಯನ್ ಗಳಿಗೆ ಇದೆ ಎಂಬ ನಂಬಿಕೆ ಇದೆ ಎಂದರು.

Share Post