HealthLifestyle

ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು..?; ನೀವು ತಿನ್ನೋ ಉಪ್ಪು ಯಾವುದು..?

ಬೆಂಗಳೂರು; ಯಾವುದೇ ಆಹಾರ ಮಾಡಬೇಕಾದರೂ ಅದಕ್ಕೆ ಉಪ್ಪು ಬಹಳ ಮುಖ್ಯ.. ಆಹಾರಕ್ಕೆ ರುಚಿ ಬರಬೇಕಾದ ಉಪ್ಪು ಬೇಕೇಬೇಕು.. ಖಾರ ಮತ್ತು ಉಪ್ಪು ಸಮಯಪ್ರಮಾಣದಲ್ಲಿದ್ದಾಗ ಮಾತ್ರ ನಾವು ತಿನ್ನುವ ಆಹಾರಕ್ಕೆ ಟೇಸ್ಟ್‌ ಬರುತ್ತದೆ.. ಹಾಗಾದರೆ ನಾವು ಯಾವ ಉಪ್ಪನ್ನು ತಿನ್ನಬೇಕು..? ಈಗ ಮಾರುಕಟ್ಟೆಯಲ್ಲಿ ಮೂರು ರೀತಿಯ ಉಪ್ಪು ಸಿಗುತ್ತದೆ.. ಒಂದು ವೈಟ್‌ ಸಾಲ್ಟ್‌, ಎರಡನೇಯದು ಪಿಂಕ್‌ ಸಾಲ್ಟ್‌ ಹಾಗೂ ಮೂರನೆಯದು ಬ್ಲ್ಯಾಕ್‌ ಸಾಲ್ಟ್‌.. ಇದರಲ್ಲಿ ಯಾವುದು ಒಳ್ಳೆಯದು..? ಯಾವ ಉಪ್ಪಲ್ಲಿ ಯಾವ ಲವಣಗಳು ಇರುತ್ತವೆ..? ನೋಡೋಣ ಬನ್ನಿ..

ಇದನ್ನೂ ಓದಿ; ಗುರುವಾರವೇ ಸಿದ್ದರಾಮಯ್ಯ ಕೇಸ್‌ ವಿಚಾರಣೆ; ಶುರುವಾಯ್ತು ಢವಢವ!

ವೈಟ್‌ ಸಾಲ್ಟ್‌;
ಬಿಳಿ ಉಪ್ಪು ಅತ್ಯಂತ ಸುಲಭವಾಗಿ ಸಿಗುವ ಉಪ್ಪು.. ಸಾಮಾನ್ಯವಾಗಿ ಎಲ್ಲರೂ ಬಳಸುವ ಉಪ್ಪು ಇದೇ.. ಇದರಲ್ಲಿ ಯಾವುದೇ ಕಲ್ಮಶಗಳು ಇರುವುದಿಲ್ಲ.. ನುಣ್ಣಗಿನ ಉಪ್ಪು ಕೂಡಾ ಸಿಗುವುದರಿಂದ ಬಳಕೆ ತುಂಬಾ ಸುಲಭ.. ಇನ್ನು ಈ ಉಪ್ಪನ್ನು ಚೆನ್ನಾಗಿ ಸಂಸ್ಕರಿಸಿ ಪೂರೈಕೆ ಮಾಡಲಾಗುತ್ತದೆ.. ಅಯೋಡಿನ್‌ನೊಂದಿಗೆ ಈ ಉಪ್ಪನ್ನು ಸಂಸ್ಕರಿಸುವುದರಿಂದ ಥೈರಾಯ್ಡ್ ನಂತಹ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಉತ್ತಮ ಮೆದುಳಿನ ಬೆಳವಣಿಗೆಗೆ ಅಯೋಡಿನ್ ಸಹ ಉಪಯುಕ್ತವೆಂದು ಪರಿಗಣಿಸಲಾಗಿದೆ. ಆದರೆ ಈ ಉಪ್ಪಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ; 12ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

ಬ್ಲ್ಯಾಕ್‌ ಸಾಲ್ಟ್‌;
ಕಪ್ಪು ಬಣ್ಣದಲ್ಲಿರುವ ಉಪ್ಪು ಕೂಡಾ ಮಾರುಕಟ್ಟೆಯಲ್ಲಿದೆ.. ಇದನ್ನು ಸೋಡಾ ಜೊತೆ ಹಾಕಿ ಕೊಡುತ್ತಾರೆ.. ಕೆಲವರು ಆಹಾರ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.. ಸೂಪರ್‌ ಮಾರುಕಟ್ಟೆಗಳಲ್ಲಿ ಈ ಬ್ಲ್ಯಾಕ್‌ ಸಾಲ್ಟ್‌ ಸಿಗುತ್ತದೆ.. ಈ ಉಪ್ಪಿನ ತಯಾರಿಕೆಯಲ್ಲಿ ವಿವಿಧ ಮಸಾಲೆಗಳು, ಇದ್ದಿಲು, ಬೀಜಗಳು ಮತ್ತು ಮರಗಳ ತೊಗಟೆಯನ್ನು ಕೂಡಾ ಬಳಸಲಾಗುತ್ತದೆ. ಕಪ್ಪು ಉಪ್ಪನ್ನು ದೀರ್ಘಕಾಲದವರೆಗೆ ಒಲೆಯಲ್ಲಿ ಇರಿಸುವ ಮೂಲಕ ತಯಾರಿಸಲಾಗುತ್ತದೆ. ಆದ್ದರಿಂದ ಈ ಉಪ್ಪು ಈ ಬಣ್ಣವನ್ನು ಪಡೆಯುತ್ತದೆ. ಇದಲ್ಲದೆ, ಇದು ವಾಯು, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ; ನಟಿ ಕಂಗನಾ ರನೌತ್‌ಗೆ ಜೀವ ಬೆದರಿಕೆ!; ಕೊಲೆ ಮಾಡ್ತೀವಿ ಎಂದ ದುಷ್ಕರ್ಮಿಗಳು!

ಪಿಂಕ್‌ ಸಾಲ್ಟ್‌;
ಗುಲಾಬಿ ಬಣ್ಣದ ಉಪ್ಪು ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ.. ಇದು ಕಲ್ಲಿನ ರೂಪದಲ್ಲಿ ಸಿಗುತ್ತದೆ. ಈ ಉಪ್ಪನ್ನು ಹಿಮಾಲಯದ ದಡದಲ್ಲಿ ಗಣಿಗಾರಿಕೆ ಮೂಲಕ ಹೊರತೆಗೆಯಲಾಗುತ್ತದೆ.. ಈ ಉಪ್ಪನ್ನು ಶುದ್ಧ ಮತ್ತು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು 84 ಅಗತ್ಯ ಖನಿಜಗಳನ್ನು ಒಳಗೊಂಡಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನೀವು ಅನೇಕ ದೈಹಿಕ ಸಮಸ್ಯೆಗಳಿಂದ ರಕ್ಷಿಸಲ್ಪಡುತ್ತೀರಿ. ಕಲ್ಲು ಉಪ್ಪು ಅಥವಾ ಗುಲಾಬಿ ಉಪ್ಪು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಉಪ್ಪಿನಿಂದ ಮಾಡಿದ ಆಹಾರವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ.

ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!

Share Post