EconomyLifestyle

ತಿಂಗಳಿಗೆ 3 ಲಕ್ಷ ರೂ. ಉಳಿಯುತ್ತಿದೆ!; ಯಾರಿಗೆ ಕೊಡೋದು ಅಂತ ಕೇಳುತ್ತಿದ್ದಾರೆ ಟೆಕ್ಕಿ ದಂಪತಿ!

ಬೆಂಗಳೂರು; ಎಷ್ಟೇ ಸಂಪಾದನೆ ಮಾಡಿದರೂ ಸಾಲದು ಎನ್ನುವರೇ ಹೆಚ್ಚು.. ಆದ್ರೆ ಬೆಂಗಳೂರಿನ ಈ ಟೆಕ್ಕಿ ದಂಪತಿ ಅದಕ್ಕೆ ತದ್ವಿರುದ್ಧ.. ಯಾಕಂದ್ರೆ, ಈ ದಂಪತಿ ಇಬ್ಬರೂ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.. ಇವರಿಗೆ ಮಕ್ಕಳಿಲ್ಲ.. ಇವರಿಗೆ ಬರುವ ಸಂಬಳದಲ್ಲಿ ಎಷ್ಟು ಖರ್ಚು ಮಾಡಿದರೂ ಕೂಡಾ ಬ್ಯಾಂಕ್‌ ಅಕೌಂಟ್‌ ನಲ್ಲಿ ಹೆಚ್ಚು ಹಣ ಉಳಿದುಹೋಗುತ್ತಿದೆಯಂದೆ.. ಅದನ್ನು ಏನು ಮಾಡೋದು ಅಂತ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಕೇಳಿದ್ದಾರೆ..

ಇಬ್ಬರಿಗೂ ಸಂಬಳ ಬರುತ್ತದೆ.. ನಾವು ಖರ್ಚು ಮಾಡಿದ ಮೇಲೂ ತಿಂಗಳಿಗೆ ಕನಿಷ್ಠ 3 ಲಕ್ಷ ರೂಪಾಯಿ ಉಳಿಯುತ್ತದೆ.. ಹಲವು ತಿಂಗಳುಗಳಿಂದ ಹಾಗೆ ಉಳಿಯುತ್ತಲೇ ಬಂದಿದೆ.. ನಮ್ಮಿಬ್ಬರಿಗೂ ತಿಂಗಳಿಗೆ ತೆರಿಗೆ ಕಲೆದ ಮೇಲೆ 7 ಲಕ್ಷ ರೂಪಾಯಿ ಆದಾಯವಿದೆ.. ಇದರಲ್ಲಿ ನಮ್ಮ ತಿಂಗಳ ಖರ್ಚು 1.5 ಲಕ್ಷ ರೂಪಾಯಿ ಇದೆ.. ಇನ್ನು 2 ಲಕ್ಷ ರೂಪಾಯಿ ಮ್ಯೂಚ್ಯುಯಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ.. ಇನ್ನೂ ಮೂರು ಲಕ್ಷ ರೂಪಾಯಿ ಉಳಿಯುತ್ತಿದೆ.. ಅದನ್ನು ಹೇಗೆ ಖರ್ಚು ಮಾಡುವುದು ಎಂದು ತಿಳಿಯುತ್ತಿಲ್ಲ.. ಯಾರಾದರೂ ಸಲಹೆ ಕೊಡಿ ಎಂದು ಕೇಳಿದ್ದಾರೆ..

ಟೆಕ್ಕಿ ದಂಪತಿಯ ಈ ಪೋಸ್ಟ್‌ಗೆ ಸಾವಿರಾರು ಮಂದಿ ಕಮೆಂಟ್‌ ಮಾಡಿದ್ದಾರೆ.. ನಿಮಗೆ ಬೇಡವಾದರೆ ನಮಗೆ ಹಣ ಕೊಡಿ ಎಂದು ಕೇಳಿದವರೇ ಹೆಚ್ಚು.. ಕೆಲವರಂತೂ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನನಗೆ ಇಷ್ಟು ಹಣದ ಅವಶ್ಯಕತೆ ಇದೆ ಕೊಡಿ ಎಂದು ಕೇಳುತ್ತಿದ್ದಾರೆ..

 

Share Post