ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!
ನವದೆಹಲಿ; ಕೆಲವೊಬ್ಬರು ಪೂಜೆ ನೆಪದಲ್ಲಿ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.. ಮನೆಗೆ ಪೂಜೆ ಮಾಡಲೆಂದು ಬಂದ ಪೂಜಾರಿಯೊಬ್ಬ, ಆ ಮನೆಯ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ.. ನಿಮ್ಮ ಪೂಜೆಗೆ ಫಲ ಸಿಗಬೇಕಾದರೆ ನೀನು ನನ್ನ ಜೊತೆ ಒಮ್ಮೆ ಮಲಗಬೇಕು ಎಂದು ಪೂಜಾರಿ ಹೇಳಿದ್ದಾನೆ ಎನ್ನಲಾಗಿದೆ.. ಇದರಿಂದ ರೊಚ್ಚಿಗೆದ್ದ ಮನೆ ಮಂದಿ ಆ ಪೂಜಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ..
ಇದನ್ನೂ ಓದಿ; ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ನಿಷೇಧಕ್ಕೆ ಚಿಂತನೆ!
ಈ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ.. ಆದ್ರೆ, ರೇಖಾ ಅಂಬೇಡ್ಕರ್ (RekhaAmbedkar21) ಎಂಬುವವರು ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಘಟನೆ ಬಗ್ಗೆ ಹಂಚಿಕೊಂಡಿದ್ದಾನೆ.. ಈತ ಪೂಜೆ ಮಾಡಲು ಬಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.. ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ನಿನ್ನ ಪೂಜೆ ಸಫಲವಾಗಿತ್ತೆ ಎಂದು ಹೇಳಿದ್ದಾನೆ.. ಇದರಿಂದಾಗಿ ಆತನಿಗೆ ಮನೆಯವರು ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಆಕೆ ಬರೆದುಕೊಂಡಿದ್ದಾಳೆ..
ಇದನ್ನೂ ಓದಿ; ವಿಪರೀತ ಖರ್ಚು ಮಾಡಿಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ಪತಿ!
ಕೆಲವು ಮಹಿಳೆಯರು ಪೂಜಾರಿಗಳು, ಜ್ಯೋತಿಷಿಗಳು ಏನು ಹೇಳಿದರೂ ನಂಬುತ್ತಾರೆ.. ಅವರು ಹೇಳಿದಂತೆ ನಡೆಯುತ್ತಾರೆ.. ಹಾಸಿಗೆ ಹಂಚಿಕೊಳ್ಳಬೇಕೆಂದರೂ ಅದನ್ನೂ ಮಾಡುತ್ತಾರೆ.. ಇಂತಹ ಮೌಢ್ಯತೆ ಈಗಲೂ ಇರುವ ಕಾರಣದಿಂದಲೇ ಇಂತಹವರು ಇಷ್ಟು ಧೈರ್ಯವಾಗಿ ಮಹಿಳೆಯರ ಮುಂದೆ ಇಂತಹ ಬೇಡಿಕೆಗಳನ್ನು ಇಡುತ್ತಾರೆ.. ಇದು ನಿಜವಾಗಿಯೂ ನಡೆದಿದ್ದರೆ ಆತನಿಗೆ ತಕ್ಕ ಶಿಕ್ಷೆಯಾಗಬೇಕಿದೆ..