CrimeNational

12ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

ಮೀರತ್; ಅಪ್ರಾಪ್ತ ಮಕ್ಕಳಿಗೆ ಮತ್ತು ಬರುವ ಪಾನೀಯಗಳನ್ನು ನೀಡಿ, ಲೈಂಗಿಕ ದೌರ್ಜನ್ಯ ನಡೆಸಿ, ಅದರ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.. ಈತ 12ಕ್ಕೂ ಮಕ್ಕಳನ್ನು ಹೀಗೆ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಬಲವಂತವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ವಿಡಿಯೋ ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನಟಿ ಕಂಗನಾ ರನೌತ್‌ಗೆ ಜೀವ ಬೆದರಿಕೆ!; ಕೊಲೆ ಮಾಡ್ತೀವಿ ಎಂದ ದುಷ್ಕರ್ಮಿಗಳು!

ಉತ್ತರ ಪ್ರದೇಶದ ಮೀರತ್‌ನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.. 37 ವರ್ಷದ ವ್ಯಕ್ತಿ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಾನೆ.. ಈತ ಅಂಗಡಿ ಬಳಿ ಬಂದ ಅಪ್ರಾಪ್ತರಿಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ಕೊಡುತ್ತಿದ್ದ.. ಅವರು ಮತ್ತು ಬಂದು ಬಿದ್ದ ಮೇಲೆ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ.. ಹೀಗೆ ಮಾಡಿ ನಂತರ ವಿಡಿಯೋಗಳನ್ನಿಟ್ಟುಕೊಂಡು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ..
ಅಪ್ರಾಪ್ತ ಬಾಲಕರ ಮೇಲೆ ಈ ರೀತಿ ದೌರ್ಜನ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ.. ಸದ್ಯ ಬಾಲಕನೊಬ್ಬನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!

Share Post