CinemaCrime

ನಟಿ ಕಂಗನಾ ರನೌತ್‌ಗೆ ಜೀವ ಬೆದರಿಕೆ!; ಕೊಲೆ ಮಾಡ್ತೀವಿ ಎಂದ ದುಷ್ಕರ್ಮಿಗಳು!

ಮುಂಬೈ; ಬಿಜೆಪಿ ಸಂಸದೆ ಹಾಗೂ ಎಮರ್ಜೆನ್ಸಿ ಸಿನಿಮಾದ ನಟಿ ಕಂಗನಾ ರನೌತ್‌ಗೆ ಜೀವ ಬೆದರಿಕೆ ಬಂದಿದೆ.. ಎಮರ್ಜೆನ್ಸಿ ಸಿನಿಮಾದಲ್ಲಿ ನಟಿ ಕಂಗನಾ ರನೌತ್‌ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾ ಈಗ ರಿಲೀಸ್‌ಗೆ ಸಿದ್ಧವಾಗಿದೆ.. ಇದೇ ವೇಳೆಯಲ್ಲಿ ನಟಿ ಕಂಗನಾಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿವೆಯಂತೆ.. ಈ ಬಗ್ಗೆ ಕಂಗನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ..

ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!

ಸಿಖ್‌ ಸಮುದಾಯದ ಕೆಲ ವ್ಯಕ್ತಿಗೂ ಕೋಣೆಯೊಂದರಲ್ಲಿ ಕುಳಿತುಕೊಂಡು ವಿಡಿಯೋ ಮಾಡಿದ್ದಾರೆ.. ಆ ವಿಡಿಯೋದಲ್ಲಿ ಒಂದು ವೇಳೆ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾದರೆ ಪಂಜಾಬಿಯವರಿಂದ ಚಪ್ಪಲಿ ಏಟು ತಿಂದೇ ತಿನ್ನುತ್ತೀಯಾ ಎಂದು ಒಬ್ಬ ಹೇಳಿದ್ದಾನೆ.. ಮತ್ತೊಬ್ಬ, ಸಿನಿಮಾದಲ್ಲೇನಾದರೂ ಜರ್ನಲ್‌ ಸಿಂಗ್‌ ಅವರನ್ನು ಭಯೋತ್ಪಾದಕ ಎಂಬಂತೆ ಏನಾದರೂ ತೋರಿಸಿದ್ದರೆ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರು ಗತಿ ಏನಾಯಿತೋ ಅದೇ ಗತಿ ನಿನಗೂ ಆಗುತ್ತದೆ ಎಂದು ಹೇಳಿದ್ದಾರೆ.. ನಾವು ತಲೆ ಕಡಿಯಲೂ ರೆಡಿ, ಕಡಿಸಿಕೊಳ್ಳಲೂ ರೆಡಿ ಎಂದೂ ಹೇಳಿದ್ದಾರೆ.. ಈ ವಿಡಿಯೋವನ್ನು ನಟಿ ಕಂಗನಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..

ಇದನ್ನೂ ಓದಿ; ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ನಿಷೇಧಕ್ಕೆ ಚಿಂತನೆ!

Share Post