DistrictsHealth

Heart problem; ಒಂದೇ ತಾಲ್ಲೂಕಲ್ಲಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ!

ಕಲಬುರಗಿ; ಕೊರೊನಾ ನಂತರ ಚಿಕ್ಕಮಕ್ಕಳಲ್ಲೂ ಹೃದಯಾಘಾತಗಳು ಹೆಚ್ಚುಗುತ್ತಿದೆ.. ಕರ್ನಾಟಕದಲ್ಲೇ ಶಾಲೆಯಲ್ಲೇ ಮಕ್ಕಳು ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣಗಳು ನಡೆದಿವೆ.. ಶಾಲೆಗೆ ಹೋಗುವಾಗಲೂ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದವರಿದ್ದಾರೆ. ಮದುವೆ ಸಮಾರಂಭದಲ್ಲಿ ಚುರುಕಾಗಿ ಓಡಾಡುತ್ತಿದ್ದಾಗಲೇ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಳು.. ಹೀಗಿರುವಾಗಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ… ಪುಟ್ಟ ಶಾಲಾ ಮಕ್ಕಳಲ್ಲಿ ಹೆಚ್ಚು ಹೃದಯ ಸಂಬಂದಿ ಕಾಯಿಲೆ ಇರುವುದು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ತಪಾಸಣೆ ಮಾಡುವ ವೇಳೆ ಇಂತಹದ್ದೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ; Garlic; ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ..?

ಒಂದೇ ತಾಲ್ಲೂಕಲ್ಲಿ 90 ಮಕ್ಕಳಿಗೆ ಸಮಸ್ಯೆ!;

ಒಂದೇ ತಾಲ್ಲೂಕಲ್ಲಿ 90 ಮಕ್ಕಳಿಗೆ ಸಮಸ್ಯೆ!; ವಾರ್ಷಿಕ ಪರೀಕ್ಷೆಗೂ ಮೊದಲು ಶಾಲೆಗಳಿಗೆ ಹೋಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಾರೆ.. ಅದೇ ರೀತಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಈ ತಾಲ್ಲೂಕಿನಲ್ಲಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ.

ಚಿತ್ತಾಪುರದಲ್ಲಿ ನಡೆದ ಮಕ್ಕಳ ಆರೋಗ್ಯ ತಪಾಸಣೆ;

ಚಿತ್ತಾಪುರದಲ್ಲಿ ನಡೆದ ಮಕ್ಕಳ ಆರೋಗ್ಯ ತಪಾಸಣೆ; ತಾಲ್ಲೂಕು ಕೇಂದ್ರ ಚಿತ್ತಾಪುರದಲ್ಲಿ ಶಾಲಾ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.. ಈ ವೇಳೆ ತಾಲ್ಲೂಕಿನ ಎಲ್ಲಾ ಭಾಗಗಳಿಂದ ಶಾಲಾ ಮಕ್ಕಳನ್ನು ಕರೆತರಲಾಗಿತ್ತು.. ಈ ವೇಳೆ ಹೆಚ್ಚು ಹೃದಯ ಸಂಬಂಧಿ ಕಾಯುಲೆ ಇರುವ ಮಕ್ಕಳು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ;Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!

 

ಹೃದಯ ರಂಧ್ರ ಸಮಸ್ಯೆ ಹೆಚ್ಚು;

ಹೃದಯ ರಂಧ್ರ ಸಮಸ್ಯೆ ಹೆಚ್ಚು; ಸ್ವಸ್ವಸ್ಥ ಕಾರ್ಯಕ್ರಮದ ಅಡಿ ಈ ಶಿಬಿರ ಏರ್ಪಡಿಸಲಾಗಿತ್ತು. ಅಂಗನವಾಡಿ ಮಕ್ಕಳು, ಪ್ರಾಥಮಿಕ ಶಾಲಾ ಮಕ್ಕಳು, ಪ್ರೌಢ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ವೇಳೆ 170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಆ 90 ಮಕ್ಕಳ ಪೈಕಿ 41 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆ. ಇನ್ನುಳಿದ ಮಕ್ಕಳಿಗೆ ಔಷದೋಪಚಾರದ ಮೂಲಕ ಗುಣಪಡಿಸಬಹುದಾಗಿದೆ.

ವೈದೇಹಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ;

ವೈದೇಹಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ; ಹೆಚ್ಚು ಮಂದಿಗೆ ಹೃದಯ ರಂಧ್ರ ಸಮಸ್ಯೆ ಇದೆ ಎಂದು ಗೊತ್ತಾಗಿದೆ. ಬೆಂಗಳೂರಿನ ವೈದೇಹಿ ಆಸ್ಪತ್ರೆಯು ಹೃದಯದಲ್ಲಿನ ರಂಧ್ರ ಸಮಸ್ಯೆಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲು ಮುಂದೆ ಬಂದಿದೆ.

ಇದನ್ನೂ ಓದಿ; Dhruva Sarja; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ & ಮಾರ್ಟಿನ್‌ ಟೀಂ

 

Share Post