EconomyNational

ಇಂದು ಕೇಂದ್ರ ಬಜೆಟ್‌; ಕರ್ನಾಟಕಕ್ಕೆ ಸಿಗುತ್ತಾ ಬಂಪರ್‌ ಕೊಡುಗೆಗಳು..?

ನವದೆಹಲಿ; ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.. ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ ಇದಾಗಿದೆ.. ಈ ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.. ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಶುರು ಮಾಡಲಿದ್ದು, ಸುಮಾರು 3 ಗಂಟೆಗಳ ಕಾಲ ಬಜೆಟ್‌ ಮಂಡನೆ ಮಾಡುವ ಸಾಧ್ಯತೆ ಇದೆ..

ಇದನ್ನೂ ಓದಿ; ಮೆಟ್ರೋದಲ್ಲಿ ಯುವತಿಯ ಅಶ್ಲೀಲ ನೃತ್ಯ ಪ್ರದರ್ಶನ; ವಿಡಿಯೋ ವೈರಲ್‌

ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಕಿಸಾನ್‌ ಸಮ್ಮಾನ್‌ ನಿಧಿ ಹಾಗೂ ಪ್ರಧಾನಮಂತ್ರಿ ಕಿಸಾಣ್‌ ಯೋಜನೆಗೆ ಸಂಬಂಧಿಸಿ ಹಲವು ಪ್ರಮುಖ ಘೋಷಣೆಗಳನ್ನು ಮಾಡುವ ಎಲ್ಲಾ ಅವಕಾಶಗಳೂ ಇವೆ ಎಂದು ಹೇಳಲಾಗುತ್ತಿದೆ.. ಇನ್ನು ವಿಶೇಷವೆಂದರೆ ತೆರಿಗೆ ಸ್ಲ್ಯಾಬ್‌ಗಳ ವಿಷಯದಲ್ಲಿ ಸರ್ಕಾರ ಪ್ರಮುಖ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಆದಾಯ ತೆರಿಗೆದಾರರಿಗೆ ಖುಷಿ ಸುದ್ದಿ ಸಿಗುವ ನಿರೀಕ್ಷೆ ಮಾಡಲಾಗಿದೆ..

ಇದನ್ನೂ ಓದಿ; ಗ್ಯಾಸ್‌ ಗೀಜರ್‌ ಸೋರಿಕೆಯಿಂದ ದುರ್ಘಟನೆ; ತಾಯಿ-ಮಗ ಇಬ್ಬರೂ ದುರಂತ ಸಾವು!

ಇನ್ನು ಈ ಬಾರಿ ಕರ್ನಾಟಕಕ್ಕೆ ಹಲವು ಯೋಜನೆಗಳ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆ ಇದೆ.. ರಾಜ್ಯದ ಪಾಲಿನ ತೆರಿಗೆ ಪ್ರಮಾಣ ಹೆಚ್ಚಳದ ಮಾಡುವ ಸಾಧ್ಯತೆ ಇದೆ.. ಇನ್ನು ಮೇಕೆದಾಟು ಹಾಗೂ ಮಹದಾಯಿ ಯೋಜನೆಗೆ ಅನುಮತಿ ಸಿಗಬಹುದೇ ಎಂಬುದರ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ.. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಹಣ ಇನ್ನೂ ಬಂದಿಲ್ಲ.. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.. ಏಮ್ಸ್‌, ಹಾಸನ/ಮೈಸೂರಿಗೆ IIT ಬೇಡಿಕೆ ಇದೆ.. ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೂ ಅನುದಾನ ಸಿಗುವ ಸಾಧ್ಯತೆ ಇದೆ..

ಇದನ್ನೂ ಓದಿ; Horoscope; ಈ ಆರು ರಾಶಿಯವರು ಹಿಡಿದ ಕೆಲಸದಲ್ಲಿ ಯಾವತ್ತೂ ಫೇಲ್‌ ಆಗಲ್ಲ..!

Share Post