CrimeNational

ಮೆಟ್ರೋದಲ್ಲಿ ಯುವತಿಯ ಅಶ್ಲೀಲ ನೃತ್ಯ ಪ್ರದರ್ಶನ; ವಿಡಿಯೋ ವೈರಲ್‌

ನವದೆಹಲಿ; ಮೆಟ್ರೋ ಟ್ರೈನ್‌ಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡುವುದು, ವಿಚಿತ್ರವಾಗಿ ಆಡುವುದು, ರೀಲ್ಸ್‌ ಮಾಡುವುದು ಮಾಡಬಾರದು.. ಹೀಗಿದ್ದರೂ ಕೂಡಾ ಕೆಲವೊಮ್ಮೆ ಇಂತಹ ವಿಚಿತ್ರಗಳು ನಡೆಯುತ್ತವೆ.. ಮುಂಬೈನಲ್ಲಿ ಪಬ್ಲಿಕ್‌ ಪ್ಲೇಸ್‌ನಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿ ಪೊಲೀಸರ ಬಳಿ ಕ್ಷಮೆ ಕೇಳಿದ್ದ ಯುವತಿಯೊಬ್ಬಳು ಈಗ ದೆಹಲಿಯ ಮೆಟ್ರೋದಲ್ಲಿ ಡ್ಯಾನ್ಸ್‌ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.. ಮೆಟ್ರೋದ ಮಹಿಳಾ ಕೋಚ್‌ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ; ಗ್ಯಾಸ್‌ ಗೀಜರ್‌ ಸೋರಿಕೆಯಿಂದ ದುರ್ಘಟನೆ; ತಾಯಿ-ಮಗ ಇಬ್ಬರೂ ದುರಂತ ಸಾವು!

ಮೆಟ್ರೋದಲ್ಲಿ ಪ್ರಯಾಣಿಕರು ಕಡಿಮೆ ಇದ್ದರು.. ಈ ವೇಳೆ ಯುವತಿಯೊಬ್ಬಳು, ಭೋಜ್‌ಪುರಿ ಹಾಡಿಗೆ ನೃತ್ಯ ಮಾಡಿದ್ದಾಳೆ.. ವೀಡಿಯೊದ ಕೊನೆಯಲ್ಲಿ ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಕಂಡುಬಂದಿದೆ. ಅಂತರ್ಜಾಲದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಜನರು ಈ ಬಗ್ಗೆ ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮನೀಷಾ ಎಂಬಾಕೆಯೇ ಹೀಗೆ ಡ್ಯಾನ್ಸ್‌ ಮಾಡಿರುವಾಗಲೇ.. ಈ ಹಿಂದೆ ಈಕೆ ಬಸ್‌ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದಳು.. ಹೀಗಾಗಿ ಮುಂಬೈ ಪೊಲೀಸರ ಮುಂದೆ ಈ ಕ್ಷಮೆ ಕೂಡಾ ಕೇಳಿದ್ದಳು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವಾರ್ಷಿಕ 78 ಲಕ್ಷ ಉದ್ಯೋಗ ಸೃಷ್ಟಿ; ನಿರ್ಮಲಾ ಸೀತಾರಾಮನ್‌

Share Post