BengaluruBusiness

ಒಂಟಿತನ ಹೋಗಲಾಡಿಸಲು ಆಟೋ ಡ್ರೈವರ್‌ ಆದ ಮೈಕ್ರೋಸಾಫ್ಟ್‌ ಎಂಜಿನಿಯರ್‌

ಬೆಂಗಳೂರು; ಮೈಕ್ರೋಸಾಫ್ಟ್‌ ಹಿರಿಯ ಎಂಜಿಯರ್‌ ಒಬ್ಬರು ವಾರಂತ್ಯದ ಒಂಟಿತನ ಹೋಗಲಾಡಿಸಲು ಆಟೋ ಓಡಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.. ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುವ ಅವರು ಬಿಡುವಿನ ವೇಳೆಯಲ್ಲಿ ಹಾಗೂ ರಜೆ ದಿನಗಳಲ್ಲಿ ಆಟೋ ಓಡಿಸುತ್ತಾರೆ.. ಹಣಕ್ಕಾಗಿ ಅಲ್ಲ, ಒಂಟಿತನ ದೂರ ಮಾಡಲು ಅವರು ಹೀಗೆ ಮಾಡುತ್ತಿದ್ದಾರಂತೆ..! ಈ ಬಗ್ಗೆ ವೆಂಕಟೇಶ್‌ ಗುಪ್ತ ಎಂಬುವವರು ಸದೂರು ಯಾತ್ರಾ ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ..

ಇದನ್ನೂ ಓದಿ; Horoscope; ಈ ಆರು ರಾಶಿಯವರು ಹಿಡಿದ ಕೆಲಸದಲ್ಲಿ ಯಾವತ್ತೂ ಫೇಲ್‌ ಆಗಲ್ಲ..!

ವೆಂಕಟೇಶ್‌ ಗುಪ್ತಾ ಅವರು ಬೆಂಗಳೂರಿನಲ್ಲಿ ಆಟೋ ಒಂದನ್ನು ಹತ್ತಿದ್ದರು.. ಈ ವೇಳೆ ಆಟೋ ಡ್ರೈವರ್‌ ಮೈಕ್ರೋಸಾಫ್ಟ್‌ ಕಂಪನಿಯ ಹುಡ್ಡಿ ಧರಿಸುವುದನ್ನು ನೋಡಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.. ಹೌದು, ನಾನು ಎಂಜಿನಿಯರ್‌.. ಒಂಟಿತನ ಹೋಗಲಾಡಿಸಲು ಹೀಗೆ ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ.. ಇದರಿಂದ ಅಚ್ಚರಿಗೊಂಡಿರುವ ವೆಂಕಟೇಶ್‌ ಗುಪ್ತ ಈ ಮಾಹಿತಿಯನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ!; ದಾರಿಮಧ್ಯೆ ತಪ್ಪಿಸಿಕೊಂಡಿದ್ದೇ ರೋಚಕ!

Share Post