HealthLifestyle

ಮಾನ್ಸೂನ್‌ ಡಿಪ್ರೆಷನ್‌ ಅಂದ್ರೆ ಏನು ಗೊತ್ತಾ..?; ಮಳೆಗಾಲದಲ್ಲಿ ಮಾನಸಿಕ ರೋಗಗಳೂ ಹೆಚ್ಚಳ..!

ಬೆಂಗಳೂರು; ಮಳೆಗಾಲ ಶುರುವಾಯ್ತು ಅಂದ್ರೆ ಅನೇಕ ಕಾಯಿಲೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ.. ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಳವಾಗುವುದರಿಂದ ಡೆಂಘೀ, ಮಲೇರಿಯಾದಂತಹ ಕಾಯಿಲೆಗಳು ಎಲ್ಲರನ್ನೂ ಕಾಡುತ್ತವೆ.. ಜೊತೆ ನೆಗಡಿ ಕೆಮ್ಮು ಮುಂತಾದ ಸಮಸ್ಯೆಗಳಿಂದ ಜನ ಸಂಕಷ್ಟ ಅನುಭವಿಸುತ್ತಾರೆ.. ಆದ್ರೆ ಇಂತಹ ದೈಹಿಕ ಸಮಸ್ಯೆಗಳೇ ಅಲ್ಲ, ಮಳೆಗಾಲದಲ್ಲಿ ಮಾನಸಿಕ ರೋಗಗಳೂ ಹೆಚ್ಚು ಅಂತಾರೆ ತಜ್ಞರು.. ಹೆಚ್ಚಿನ ಜನರಲ್ಲಿ ಮಾನ್ಸೂನ್‌ ಡಿಪ್ರೆಷನ್‌ ಉಂಟಾಗುತ್ತೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ..

ಇದನ್ನೂ ಓದಿ; Horoscope; ಈ ಆರು ರಾಶಿಯವರು ಹಿಡಿದ ಕೆಲಸದಲ್ಲಿ ಯಾವತ್ತೂ ಫೇಲ್‌ ಆಗಲ್ಲ..!

ತಜ್ಞರು ಹೇಳುವ ಪ್ರಕಾರ, ಮಳೆಗಾಲದಲ್ಲಿ ಜನರು ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರಂತೆ.. ಇದಕ್ಕೆ ಕಾರಣ ಸೂರ್ಯನ ಬೆಳಕು ಕಡಿಮೆ ಇರುವುದು.. ಮಳೆಗಾಲದಲ್ಲಿ ಹೆಚ್ಚಾಗಿ ಮೋಡ ಮುಸುಕಿದ ವಾತಾವರಣವಿರುತ್ತದೆ.. ಇದರಿಂದಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳೋದು ಕಡಿಮೆ.. ಜೊತೆಗೆ ತಣ್ಣನೆಯ ವಾತಾವರಣವಿರುವುದರಿಂದ ಬೆಳಗ್ಗೆ ಬೇಗ ಹಾಸಿಗೆಯಿಂದ ಎದ್ದೇಳಲು ಆಗೋದಿಲ್ಲ.. ಬಿಸಿಲು ಬೀಳದಿರುವುದರಿಂದ ನಮ್ಮ ಉತ್ಸಾಹವೂ ಕಡಿಮೆಯಾಗುತ್ತದೆ.. ಇದ್ರಿಂದ ನಾವು ನಿಸ್ತೇಜರಾಗುತ್ತೇವೆ.. ಹೀಗೆ ದೀರ್ಘಕಾಲದವರೆಗೆ ಸೂರ್ಯನ ಬೆಳಕಿನ ಕೊರತೆ ಉಂಟಾಗಿ ಮನುಷ್ಯರು ಖಿನ್ನತೆಗೆ ಒಳಗಾಗುತ್ತಾರೆ.. ಬಹುದಿನಗಳ ಕಾಲ ಸೂರ್ಯನ ಬೆಳಕಿನ ಕೊರತೆ ಉಂಟಾಗಿದರೆ ನಮ್ಮ ದೇಹದಲ್ಲಿ ಸಿರೋಟೋನಿನ್‌ ಕಡಿಮೆಯಾಗುತ್ತದೆ.. ಇದರ ಉತ್ಪಾದನೆ ಕಡಿಮೆಯಾಗುವುದರಿಂದ ಅದು ನಮ್ಮ ಮನಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ..

ಇದನ್ನೂ ಓದಿ; ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ!; ದಾರಿಮಧ್ಯೆ ತಪ್ಪಿಸಿಕೊಂಡಿದ್ದೇ ರೋಚಕ!

ಸೂರ್ಯನ ಬೆಳಕು ಬೀಳದಿದ್ದರೆ ನಮ್ಮ ದೇಹಕ್ಕೆ ಸೂಕ್ತ ವಿಟಮಿನ್‌ ಡಿ ಸಿಗುವುದಿಲ್ಲ.. ಇದರಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ.. ಅಲ್ಲದೆ ಮಳೆಯಿಂದಾಗಿ ದೈಹಿಕ ಚಟುವಟಿಕೆಗಳೂ ಕಡಿಮೆಯಾಗುತ್ತವೆ.. ಇದು ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.. ಮಳೆಗಾಲದಲ್ಲಿ ತುಂಬಾ ಜನ ಮನೆಯಿಂದ ಹೊರಹೋಗುವುದನ್ನು ಕಡಿಮೆ ಮಾಡುತ್ತಾರೆ.. ಕೆಲವರಂತೂ ದಿನವಿಡೀ ಮನೆಯಲ್ಲೇ ಸೇರಿಕೊಂಡಿರುತ್ತಾರೆ.. ಮನೆಯಿಂದ ಹೊರಗೆ ಬಂದು ಬಿಸಿಲಿಗೆ ಮೈಒಡ್ಡುವುದೂ ಇಲ್ಲ.. ಇದ್ರಿಂದ ಹೆಚ್ಚಿನ ಜನರೊಂದಿಗಿನ ಒಡನಾಟ ಇರುವುದಿಲ್ಲ.. ಇದೂ ಕೂಡಾ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.

ಇದನ್ನೂ ಓದಿ; ಮಳೆಗಾಲದಲ್ಲಿ ಫುಡ್‌ ಪಾಯ್ಸನ್‌ ಆಗೋದು ಜಾಸ್ತಿ!; ಆಹಾರ ಸೇವನೆ ಬಗ್ಗೆ ಎಚ್ಚರಿಕೆ ಇರಲಿ..!

ಮಾನ್ಸೂನ್‌ ಡಿಪ್ರೆಷನ್‌ನಿಂದ ಹೊರಬರಬೇಕಂದ್ರೆ ಮಳೆಗಾಲದಲ್ಲಿ ನಮ್ಮ ಅಭ್ಯಾಸಗಳನ್ನು ಕೊಂಚ ಬದಲಿಸಿಕೊಳ್ಳಬೇಕು.. ಒಂದು ಮಳೆಯ ಕಾರಣಕ್ಕಾಗಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಿದ್ದರೆ ಮತ್ತೆ ಅದನ್ನು ಶುರು ಮಾಡಿ.. ಕನಿಷ್ಟ 15 ರಿಂದ 20 ನಿಮಿಷವಾದರೂ ಮನೆಯಲ್ಲೇ ವ್ಯಾಯಾಮ ಮಾಡುವುದು ಒಳ್ಳೆಯದು.. ಇನ್ನು ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡಬೇಕು.. ರಾತ್ರಿ ಸುಖ ನಿದ್ದೆ ಇಲ್ಲದಿದ್ದರೆ ದಿನದ ವೇಳೆಯಲ್ಲಿ ಅದು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ.. ಇತರರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ, ಮೊಬೈಲ್‌ನಲ್ಲಿ ಮಾತನಾಡಲು ಮರೆಯದಿರಿ.. ಈ ಕೆಲಸಗಳನ್ನು ಮಾಡುವುದರಿಂದ ನೀವು ಮಾನ್ಸೂನ್ ಖಿನ್ನತೆಯಿಂದ ಹೊರಬರಬಹುದು.

ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್‌ ಎನರ್ಜಿ ನಿಮ್ಮದಾಗುತ್ತೆ!

Share Post