Astrology

Horoscope; ಈ ಆರು ರಾಶಿಯವರು ಹಿಡಿದ ಕೆಲಸದಲ್ಲಿ ಯಾವತ್ತೂ ಫೇಲ್‌ ಆಗಲ್ಲ..!

ಬೆಂಗಳೂರು; ರಾಶಿ ಭವಿಷ್ಯವನ್ನು ನಂಬುವವರು ಅದರಂತೆ ನಡೆಯುವವರು ನಮ್ಮಲ್ಲಿ ತುಂಬಾ ಜನ ಇದ್ದಾರೆ.. ಜ್ಯೋತಿಷ್ಯದಲ್ಲಿ 12 ರಾಶಿಗಳಿವೆ.. ಇದರಲ್ಲಿ ಆರು ರಾಶಿಗಳ ಜನರು ತುಂಬಾ ಬುದ್ಧಿವಂತರು ಹಾಗೂ ಹಿಡಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವವರು.. ಎಂತಹದ್ದೇ ಕಷ್ಟ ಇರಲಿ, ಯಾವುದಾದರೂ ಕೆಲಸ ಮಾಡಲು ಶುರು ಮಾಡಿದರು ಎಂದರೆ ಅದನ್ನು ಮುಗಿಸುವವರೆಗೂ ಬಿಡುವುದಿಲ್ಲ.. ಊಟ, ನಿದ್ರೆಯನ್ನು ಕೂಡಾ ಬಿಡುತ್ತಾರೆ ಬೇಕಾದರೆ.. ಅಂತಹವರು ಎಲ್ಲಿ ಬೇಕಾದರೂ ಸಲ್ಲುತ್ತಾರೆ.. ಹಿರಿಯ ಅಧಿಕಾರಿಗಳಿಗೆ ನೆಚ್ಚಿನ ಉದ್ಯೋಗಿಗಳಾಗುತ್ತಾರೆ.. ಮಾಲೀಕರಿಗೆ ಲಾಭ ತಂದುಕೊಡುವ ಹಾಗೂ ವಿಶ್ವಾಸಾರ್ಹ ಉದ್ಯೋಗಿಗಳಾಗುತ್ತಾರೆ.. ಹಾಗಾದ್ರೆ ಆ ಆರು ರಾಶಿಯವರು ಯಾರು ಅನ್ನೋದನ್ನು ನೋಡೋಣ..

ಇದನ್ನೂ ಓದಿ; ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ!; ದಾರಿಮಧ್ಯೆ ತಪ್ಪಿಸಿಕೊಂಡಿದ್ದೇ ರೋಚಕ!

ಸಿಂಹ ರಾಶಿ;
ಸಿಂಹರಾಶಿಯವರು ತುಂಬಾನೇ ಚಾಣಕ್ಷರು.. ಇವರು ಕೆಲಸದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಪಕ್ಷಪಾತ ಮಾಡೋದಿಲ್ಲ.. ಕೆಲಸಕ್ಕಷ್ಟೇ ಪ್ರಾಮುಖ್ಯತೆ ನೀಡುತ್ತಾರೆ.. ಹಿರಿಯ ಅಧಿಕಾರಿಗಳ ಪ್ರೀತಿ ಗಳಿಸುವಲ್ಲಿ ಇವರು ಯಾವಾಗಲೂ ಯಶಸ್ವಿಯಾಗುತ್ತಾರೆ.. ಇವರು ಹಣಕಾಸಿನ ವ್ಯವಹಾರಗಳಲ್ಲಿ ತುಂಬಾನೆ ಅಚ್ಚುಕಟ್ಟಾಗಿರುತ್ತಾರೆ.. ದುಂದುವೆಚ್ಚ ಯಾವುದೇ ಕಾರಣಕ್ಕೂ ಮಾಡೋದಿಲ್ಲ.. ಹಣ ಉಳಿತಾಯ ಮಾಡಿ ಭವಿಷ್ಯಕ್ಕೆ ಬೇಕಾಗುತ್ತದೆ ಎಂಬುದನ್ನು ಇವರು ಅರಿತುಕೊಂಡಿರುತ್ತಾರೆ.. ಮನೆ, ಕಾರು ಎಲ್ಲವೂ ಸ್ವಂತ ಮಾಡಿಕೊಳ್ಳಲು ಮೊದಲು ಪ್ರಯತ್ನ ಪಡುತ್ತಾರೆ..
ವೃಷಭ ರಾಶಿ;
ವೃಷಭರಾಶಿಯವರು ಮಾಡುವ ಕೆಲಸ ನಿಧಾನ ಮಾಡುತ್ತಾರೆ.. ಆದ್ರೆ ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.. ಇವರು ಕೆಲಸ ಮಾಡಿದ್ದಾರೆ ಅಂದ್ರೆ ಅದ್ರಲ್ಲಿ ಯಾವುದೇ ತಪ್ಪುಗಳಿರೋದಿಲ್ಲ.. ಮತ್ತೊಬ್ಬರು ನೋಡಿ ಫೈನಲ್‌ ಮಾಡಬೇಕಾದ ಅವಶ್ಯಕತೆ ಇರೋದಿಲ್ಲ.. ಇನ್ನು ಎಂತಹದ್ದೇ ಕಷ್ಟದ ಕೆಲಸ ಆಗಲೀ ಇವರು ತೆಗೆದುಕೊಳ್ಳಲು ಹಿಂದೆ ಹೆಜ್ಜೆ ಇಡೋದಿಲ್ಲ.. ಇಂತಹವರು ಹೆಚ್ಚಾಗಿ ಕೆಲಸ ಮಾಡುವ ಸ್ಥಳದಲ್ಲಿ ಪ್ರಗತಿ ಹೆಚ್ಚಿರುತ್ತದೆ.. ಲಾಭ ಹೆಚ್ಚಾಗುತ್ತದೆ.. ಈ ರಾಶಿಯವರು ಯಾವುದೇ ಸಂಸ್ಥೆ ಅಥವಾ ವ್ಯಾಪಾರ ಶುರು ಮಾಡಿದರೆ ಅದರಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ..

ಇದನ್ನೂ ಓದಿ; ಮಳೆಗಾಲದಲ್ಲಿ ಫುಡ್‌ ಪಾಯ್ಸನ್‌ ಆಗೋದು ಜಾಸ್ತಿ!; ಆಹಾರ ಸೇವನೆ ಬಗ್ಗೆ ಎಚ್ಚರಿಕೆ ಇರಲಿ..!

ಕರ್ಕಾಟಕ ರಾಶಿ;
ಕರ್ಕಾಟಕ ರಾಶಿಯವರ ಪ್ರಮುಖ ಗುಣ ಏನು ಅಂದ್ರೆ ಸಮಸ್ಯೆ ಬರುವುದಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳುತ್ತಾರೆ.. ಯಾವ ಕೆಲಸ ಮಾಡಿದರೆ ಯಶಸ್ಸು ಸಿಗಬೇಕು.. ಭಿವಿಷ್ಯದಲ್ಲಿ ಯಾವ ಕ್ಷೇತ್ರಕ್ಕೆ ಬೇಡಿಕೆ ಇರುತ್ತದೆ ಎಂಬುದನ್ನು ಇವರು ಮೊದಲೇ ಗ್ರಹಿಸುತ್ತಾರೆ.. ಇವರು ಕಾಲಕ್ಕೆ ತಕ್ಕಂತೆ ಅಪ್‌ ಡೇಟ್‌ ಆಗುತ್ತಿರುತ್ತಾರೆ.. ವೃತ್ತಿಯಲ್ಲಾಗಿರಬಹುದು, ಸಂಸಾರದಲ್ಲಾಗಿರಬಹುದು.. ಏನೇ ಸಮಸ್ಯೆ ಬಂದರೂ ಅದನ್ನು ಸುಲಭವಾಗಿ ಪರಿಹರಿಸಿಕೊಂಡು ಮುನ್ನಡೆಯುತ್ತಾರೆ.. ಹೀಗಾಗಿ, ಇವರಿಗೆ ಯಾವುದೇ ಸಮಸ್ಯೆ ಸಮಸ್ಯೆ ಎಂದೆನಿಸೋದೇ ಇಲ್ಲ.. ಯಾಕಂದ್ರೆ ಇವರು ಮುಂದೆ ಎದುರಾಗುವ ಸಮಸ್ಯೆಗಳನ್ನು ಮೊದಲೇ ಗ್ರಹಿಸಿಕೊಂಡು ಮೊದಲೇ ಎಚ್ಚೆತ್ತುಕೊಳ್ಳುತ್ತಾರೆ..
ವೃಶ್ಚಿಕ ರಾಶಿ;
ವೃಶ್ಚಿಕ ರಾಶಿಯವರು ಯಾವುದೇ ಪರಿಸ್ಥಿತಿಯನ್ನು ಶಾಂತವಾಗಿ ತೆಗೆದುಕೊಳ್ಳುತ್ತಾರೆ.. ಇವರಿಗೆ ಯಾವುದೇ ಅಜೆಂಡಾಗಳು ಇರುವುದಿಲ್ಲ.. ಗೆಲ್ಲುವುದೊಂದೇ ಇವರಿಗೆ ಗುರಿ.. ಒಬ್ಬರನ್ನು ತುಳಿದರೆ ಮಾತ್ರ ಮೇಲೆ ಬರಬಹುದು ಅನ್ನೋ ಮನಸ್ಥಿತಿ ಇವರಿಗೆ ಯಾವ ಕಾರಣಕ್ಕೂ ಇರೋದಿಲ್ಲ.. ಇವರು ಮಾಡೋ ಕೆಲಸ ಹಾಗೂ ಜ್ಞಾನದ ಮೇಲಷ್ಟೇ ನಂಬಿಕೆ ಇಟ್ಟಿರುತ್ತಾರೆ.. ಜೊತೆಗೆ ಜೊತೆಗೆ ಕೆಲಸ ಮಾಡುವವರ ಬಗ್ಗೆಯೂ ಇವರಿಗೆ ನಂಬಿಕೆ ಇರುತ್ತದೆ.. ವೃಶ್ಚಿಕ ರಾಶಿಯವರು ಯಾವಾಗಲೂ ವ್ಯಯ ಮಾಡುವುದಕ್ಕಿಂತ ಗಳಿಕೆಯೇ ಹೆಚ್ಚಾಗಿ ಮಾಡುತ್ತಾರೆ..

ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್‌ ಎನರ್ಜಿ ನಿಮ್ಮದಾಗುತ್ತೆ!

ಕನ್ಯಾ ರಾಶಿ;
ಕನ್ಯಾ ರಾಶಿಯವರು ಕೂಡಾ ಯಾವುದೇ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾರೆ.. ಕೆಲಸ ಮಾಡುವುದಕ್ಕೆ ಮೊದಲೇ ಎಲ್ಲಾ ಆಂಗಲ್‌ನಲ್ಲೂ ಅದರ ಬಗ್ಗೆ ಅಧ್ಯಯನ ಮಾಡುತ್ತಾರೆ.. ಆ ಕೆಲಸದಲ್ಲಿ ಯಶಸ್ಸು ಕಾಣುತ್ತೇವೆ ಎಂಬ ನಂಬಿಕೆ ಬಂದರೆ ಮಾತ್ರ ಅವರು ಆ ಕೆಲಸವನ್ನು ಕೈಗೆತ್ತಿಕೊಳ್ಳುತ್ತಾರೆ.. ಇದರಿಂದಾಗಿ ಇವರು ಯಾವುದೇ ಕೆಲಸ ಶುರು ಮಾಡಲಿ ಆದಾಯ ತನ್ನಿಂದ ತಾನೇ ವೃದ್ಧಿಯಾಗುತ್ತಾ ಹೋಗುತ್ತದೆ..
ಮಕರ ರಾಶಿ;
ಮಕರ ರಾಶಿಯವರು ತುಂಬಾ ತಾಳ್ಮೆಯಿಂದ ಇರುವವರು.. ಕೆಲಸ ಚೆನ್ನಾಗಿ ಆಗುತ್ತದೆ ಅಂದ್ರೆ ಶತ್ರುಗಳ ಜೊತೆ ಕೂಡಾ ರಾಶಿ ಮಾಡಿಕೊಳ್ಳುತ್ತಾರೆ.. ಇವರಿಗೆ ಏನಿದ್ದರೂ ಕೆಲಸ ಚೆನ್ನಾಗಿ ಆಗಬೇಕು, ಪ್ರಗತಿ ಕಾಣಬೇಕು.. ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚು ಮಾಡಿಕೊಳ್ಳಲು ಎಂತಹ ಶ್ರಮ ಪಡೋದಕ್ಕೂ ರೆಡಿಯಾಗಿರುತ್ತಾರೆ.. ಆದ್ರೆ ಎಲ್ಲವೂ ಒಳ್ಳೆಯ ರೀತಿಯಿಂದಲೇ ಮಾಡುತ್ತಾರೆ.. ಯಶಸ್ಸಿಗಾಗಿ ಕೆಟ್ಟ ದಾರಿ ಯಾವತ್ತೂ ಹಿಡಿಯೋದಿಲ್ಲ..

ಇದನ್ನೂ ಓದಿ; ಯಾಕೋ ಗುರಾಯಿಸ್ತೀಯಾ ಅಂದಿದ್ದಕ್ಕೆ ನಡೆದೇ ಹೋಯ್ತು ಕೊಲೆ!

Share Post