CrimeNational

ಅಮೆರಿಕ ಮಹಿಳೆಯನ್ನು ಕಾಡಿನಲ್ಲಿ ಕಟ್ಟಿ ಹಾಕಿದ್ದ ದುರುಳರು!

ಮಹಾರಾಷ್ಟ್ರ; ಅಮೆರಿಕ ಪಾಸ್‌ಪೋರ್ಟ್‌ ಹೊಂದಿರುವ ಮಹಿಳೆಯನ್ನು ಮಹಾರಾಷ್ಟ್ರದ ಕಾಡೊಂದರಲ್ಲಿ ಮರವೊಂದಕ್ಕೆ ಸರಪಳಿಯಿಂದ ಕಟ್ಟಿ ಹಾಕಲಾಗಿದೆ.. ಅದೆಷ್ಟು ದಿನವಾಗಿತ್ತೋ ಏನೋ ಇಂದು 50 ವರ್ಷದ ಮಹಿಳೆ ಅಸ್ವಸ್ಥಳಾಗಿ ಪತ್ತೆಯಾಗಿದ್ದಾಳೆ.. ಆಕೆಯ ಬಳಿ ಅಮೆರಿಕ ಪಾಸ್‌ಪೋರ್ಟ್‌ ಜೆರಾಕ್ಸ್‌ ಪ್ರತಿ ಹಾಗೂ ತಮಿಳುನಾಡು ವಿಳಾಸವಿರುವ ಆಧಾರ್‌ ಕಾರ್ಡ್‌ ಪ್ರತಿ ಸಿಕ್ಕಿದೆ.. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಗ್ರಾಮದ ಬಳಿ ಘಟನೆ ನಡೆದಿದೆ..

ಇದನ್ನೂ ಓದಿ; ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ಎಂದಿಗೂ ಒಪ್ಪಲ್ಲ; ಮಾಜಿ ಸಚಿವ ರಮೇಶ್‌ ಜಾರಕಿಹೊಳಿ

ಕಾಡಿನಲ್ಲಿ ಮಹಿಳೆಯೊಬ್ಬರು ಅಳುತ್ತಿರುವ ಶಬ್ದ ಕೇಳಿಬಂದಿದೆ.. ಇದನ್ನು ನೋಡಿದ ಕುರಿಗಾಹಿಗಳು ಸ್ಥಳಕ್ಕೆ ಹೋಗಿ ನೋಡಿದಾಗಿ ಮಹಿಳೆಯನ್ನು ಸರಪಳಿಯಿಂದ ಕಟ್ಟಿಹಾಕಿದ್ದು ಕಂಡುಬಂದಿದೆ.. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ತಕ್ಷಣ ಅವರನ್ನು ರಕ್ಷಣೆ ಮಾಡಿ ಸಿಂಧುದುರ್ಗದ ಓರೋಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಮಹಿಳೆ ಮಾನಸಿಕವಾಗಿ ಹಾಗೂ ಆರೋಗ್ಯವಾಗಿ ಸಾಕಷ್ಟು ದುರ್ಬಲವಾಗಿದ್ದಾರೆ.. ಹೀಗಾಗಿ ಆಕೆಯನ್ನು ಗೋವಾದ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಹೈದರಾಬಾದ್ ಬಳಿ ಭೀಕರ ಅಪಘಾತ!; ಭಯಾನಕ ವಿಡಿಯೋ ಸೆರೆ

ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆ ಅಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.. ಮಹಿಳೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದೆ.. ಮಾಹಿತಿಯ ಪ್ರಕಾರ ಆಕೆ ಹತ್ತು ವರ್ಷಗಳಿಂದ ಭಾರತದಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ.. ತಮಿಳುನಾಡು ಮೂಲದ ವ್ಯಕ್ತಿಯನ್ನು ಮಹಿಳೆ ಮದುವೆಯಾಗಿದ್ದಳು ಎನ್ನಲಾಗಿದೆ.. ಆತನೇ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ..

ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

Share Post