ಗ್ಯಾಸ್ ಗೀಜರ್ ಸೋರಿಕೆಯಿಂದ ದುರ್ಘಟನೆ; ತಾಯಿ-ಮಗ ಇಬ್ಬರೂ ದುರಂತ ಸಾವು!
ರಾಮನಗರ; ಮಾಗಡಿ ಪಟ್ಟಣದ ದುರಂತವೊಂದು ನಡೆದಿದೆ.. ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಮಾಗಡಿ ಪಟ್ಟಣದ ಜ್ಯೋತಿನಗರದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ..
ಇದನ್ನೂ ಓದಿ; ವಾರ್ಷಿಕ 78 ಲಕ್ಷ ಉದ್ಯೋಗ ಸೃಷ್ಟಿ; ನಿರ್ಮಲಾ ಸೀತಾರಾಮನ್
16 ವರ್ಷದ ದಿಲೀಪ್ ಹಾಗೂ 38 ವರ್ಷದ ಶೋಭಾ ಸಾವನ್ನಪ್ಪಿದ ದುರ್ದೈವಿಗಳು.. ಇಂದು ಬೆಳಗ್ಗೆ ದಿಲೀಪ್ ಸ್ನಾನ ಮಾಡಲು ಹೋಗಿದ್ದಾರೆ.. ಈ ವೇಳೆ ಗ್ಯಾಸ್ ಗೀಸರ್‌ನಲ್ಲಿ ಸೋರಿಕೆಯಾಗಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಸ್ನಾನಕ್ಕೆ ಹೋದ ಮಗ ಎಷ್ಟು ಹೊತ್ತಾದರೂ ಬರದಿದ್ದರಿಂದ ತಾಯಿ ಶೋಭಾ ಸ್ನಾನದ ಗೃಹಕ್ಕೆ ಹೋಗಿದ್ದಾಳೆ.. ಆಗ ಆಕೆಯೂ ಕೂಡಾ ಗ್ಯಾಸ್ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; Horoscope; ಈ ಆರು ರಾಶಿಯವರು ಹಿಡಿದ ಕೆಲಸದಲ್ಲಿ ಯಾವತ್ತೂ ಫೇಲ್ ಆಗಲ್ಲ..!
ಮಾಗಡಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ..