Health

Garlic; ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ..?

Health Tips; ಬೆಳಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.. ಇದಲ್ಲದೆ ಹಲವು ಪದ್ಧತಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮಾಡುತ್ತವೆ. ಅದರಲ್ಲಿ ಬೆಳ್ಳುಳ್ಳಿ ಕೂಡಾ ಒಂದು. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕ್ಕೆ ಅನುಕೂಲಗಳಿವೆಯಂತೆ..!

ಇದನ್ನೂ ಓದಿ; Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!

ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆಯಾ..?;

ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆಯಾ..?; ಬೆಳ್ಳುಳ್ಳಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.. ಹೀಗಾಗಿಯೇ ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ.. ಸ್ವಲ್ಪ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಾಗುತ್ತ ಅಂತಾರೆ ತಜ್ಞರು.. ಇದರಲ್ಲಿ ಕಡಿಮೆ ಕ್ಯಾಲೊರಿಗಳಿವೆ.. ಅಲ್ಲದೆ  ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ವಿಟಮಿನ್ ಸಿ, ವಿಟಮಿನ್ ಬಿ6, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್ ಗಳು ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿವೆ. ಹೀಗಾಗಿ, ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯೋಗವಾಗಲಿದೆ.

ಇದನ್ನೂ ಓದಿ; Dhruva Sarja; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ & ಮಾರ್ಟಿನ್‌ ಟೀಂ

ರೋಗನಿರೋಧಕ ಶಕ್ತಿ ಹೆಚ್ಚಳ;

ರೋಗನಿರೋಧಕ ಶಕ್ತಿ ಹೆಚ್ಚಳ;  ಬೆಳ್ಳುಳ್ಳಿಯ ಸೇವನೆಯಿಂದ ಅದರಲ್ಲಿರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆಲಿಸಿನ್ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಈ ಬೆಳ್ಳುಳ್ಳಿ ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಹೃದಯದ ಆರೋಗ್ಯ ಉತ್ತಮವಾಗುತ್ತೆ;

ಹೃದಯದ ಆರೋಗ್ಯ ಉತ್ತಮವಾಗುತ್ತೆ; ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾಕಂದ್ರೆ ಬೆಳ್ಳುಳ್ಳಿ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉತ್ತಮ ರಕ್ತ ಪರಿಚಲನೆಯಾಗುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಈ ಎಲ್ಲಾ ಪ್ರಯೋಜನಗಳು ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶದಿಂದಾಗಿ ಆಗುತ್ತದೆ.

ಇದನ್ನೂ ಓದಿ; Investment Plan; ಸಂಪ್ರದಾಯಿಕ ಉಳಿತಾಯ ನಿಲ್ಲಿಸಿ, ಸರಿಯಾದ ಕಡೆ ಹೂಡಿಕೆ ಮಾಡಿ, ಕೋಟಿ ಗಳಿಸಿ!

ಕೊಲೆಸ್ಟ್ರಾಲ್ ಕಡಿತ;

ಕೊಲೆಸ್ಟ್ರಾಲ್ ಕಡಿತ; ಈಗನ ಜನರು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾದರೆ ಬಹುತೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.. ಹೀಗಾಗಿ, ಬೆಳಗ್ಗೆ ಬೆಳ್ಳುಳ್ಳಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟಾಲ್‌ ದೂರ ಮಾಡಬಹುದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ.

ಇದನ್ನೂ ಓದಿ; Health Checkup; ನೀವು 35 ರಿಂದ 45 ವರ್ಷ ವಯಸ್ಸಿನವರಾ..?; ಹಾಗಾದರೆ ಈ ಪರೀಕ್ಷೆಗಳನ್ನು ಮಾಡಿಸಿ!

ಜೀರ್ಣ ಸಮಸ್ಯೆ, ಅಲರ್ಜಿ;

ಜೀರ್ಣ ಸಮಸ್ಯೆ, ಅಲರ್ಜಿ; ಬೆಳ್ಳುಳ್ಳಿಯಲ್ಲಿ ಅನೇಕ ಪೋಷಕಾಂಶಗಳಿವೆ.. ಆದರೂ ಕೂಡಾ ಇದು ಕೆಲವರ ದೇಹಕ್ಕೆ ಒಗ್ಗೋದಿಲ್ಲ.. ಕೆಲವರಿಗೆ ಇದರ ಸೇವನೆಯಿಂದ ಅಜೀರ್ಣ ಸಮಸ್ಯೆ ಉಂಟಾಗಬಹುದು.. ಅಲರ್ಜಿಗೂ ಕಾರಣವಾಗಬಹುದು… ಕೆಲವೊಮ್ಮೆ ಬೆಳ್ಳುಳ್ಳಿ ನೇರವಾಗಿ ತಿನ್ನುವುದರಿಂದ ಮಲಬದ್ಧತೆ, ರಕ್ತಸ್ರಾವ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ; Dragon Fruit; ಡ್ರ್ಯಾಗನ್‌ ಫ್ರೂಟ್‌ ಫೇಸ್‌ ಪ್ಯಾಕ್‌ ಯಾವಾಗ್ಲಾದರೂ ಬಳಸಿದ್ದೀರಾ..?

 

Share Post