Economy

ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ; ನಿಮ್ಮ ಜೇಬಿಗೆ ಬೀಳುವ ಕತ್ತರಿ ಎಷ್ಟು..?

ಬೆಂಗಳೂರು: ಪೆಟ್ರೋಲ್‌, ಗ್ಯಾಸ್‌ ಬೆಲೆ ಗಗನಕ್ಕೇರಿತು. ಜೊತೆಗೆ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ. ಇದ್ರಿಂದಾಗಿ ಜನರ ಜೇಬಿಗೆ ರಂಧ್ರಗಳು ಬಿದ್ದಿವೆ. ಬದುಕು ನಿರ್ವಹಣೆ ಮಾಡಲಾಗದೇ ನಮ್ಮನ್ನು ಅಲ್ಲಕಲ್ಲೋಲ ಮಾಡಿದೆ.

ನಿಜ ಹೇಳಬೇಕು ಅಂದ್ರೆ, ಎರಡು ವರ್ಷಗಳ ಕೊವಿಡ್‌ ಸಂಕಷ್ಟದ ನಂತರ 2022ನೇ ವರ್ಷ ತುಂಬಾ ಚೆನ್ನಾಗಿಯೇ ಆರಂಭವಾಯಿತು. ಕೊವಿಡ್‌ ಪ್ರಭಾವದಿಂದ ನಾವು ಚೇತರಿಸಿಕೊಂಡೆವು ಎಂಬ ಭರವಸೆ ನಮ್ಮೆಲ್ಲರಲ್ಲೂ ಮೂಡಿತ್ತು. ಅದರ ಜೊತೆಗೆ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂದನ ಕಂಪನಿಗಳು ಕೂಡಾ ಕೆಲವು ವಾರಗಳ ಕಾಲ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆ ಮಾಡುವುದನ್ನು ಮರೆತುಬಿಟ್ಟಿದ್ದವು.

ಆದ್ರೆ ಫ್ರೆಬ್ರವರಿ 24 ರಂದು ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿ. ಆಗ ಮತ್ತೆ ನಮಗೆ ಸಂಕಟ ಶುರುವಾಯಿತು. ಪ್ರಪಂಚದಾದ್ಯಂತ ಪೆಟ್ರೋಲ್ ಉತ್ಪನ್ನಗಳ ರಫ್ತಿನಲ್ಲಿ ರಷ್ಯಾದ ಪಾತ್ರ ನಿರ್ಣಾಯಕವಾಗಿದೆ. ಐರೋಪ್ಯ ರಾಷ್ಟ್ರಗಳು ದೇಶದ ಮೇಲೆ ಹೇರಿದ ನಿರ್ಬಂಧಗಳು ಪೆಟ್ರೋಲ್ ಉತ್ಪನ್ನಗಳ ಬೆಲೆಗಳ ಮೇಲೂ ಪ್ರಭಾವ ಬೀರಿವೆ.

ಈ ನಡುವೆ  ಚುನಾವಣಾ ಫಲಿತಾಂಶ ಬರುವವರೆಗೂ ಪೆಟ್ರೋಲ್ ಬೆಲೆ ಏರಿಸುವುದನ್ನು ಹೇಗೋ ನಿಲ್ಲಿಸಿದ್ದ ಕಂಪನಿಗಳು, ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 22ರಂದು ಮೊದಲ ಬಾರಿಗೆ ಬೆಲೆ ಏರಿಸಿದವು. ಅನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಬರಲಾಯ್ತು.

ಇಂಧನ ದರಗಳು ಹೆಚ್ಚಾದರೆ ಅತ್ಯವಶ್ಯಕ ವಸ್ತುಗಳೆಲ್ಲವುಗಳ ದರಗಳೂ ಹೆಚ್ಚಾಗುವುದು ಸರ್ವೇಸಾಮಾನ್ಯದ ಸಂಗತಿ. ದೇಶದಲ್ಲಿ ಈಗ ಅದೇ ಆಗಿರೋದು. ಆದ್ರೆ ಕಾರಣ ಅದೊಂದೇ ಅಲ್ಲ. ಅಂತರ್ಜಾತೀಯ ಕಮಾಡಿಟೀಸ್‌ ದರಗಳು ಕೂಡಾ ದೊಡ್ಡ ಮಟ್ಟದಲ್ಲಿ ಹೆಚ್ಚಾದಗಿರುವುದು ಕೂಡಾ ದೇಶದಲ್ಲಿ ಬೆಲೆ ಹೆಚ್ಚಳಕ್ಕೆ ಮತ್ತೊಂದು ಮುಖ್ಯ ಕಾರಣ.

  ಅಡುಗೆ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಐರನ್‌, ಸ್ಟೀಲ್‌, ಹೇವಿ ಮಷಿನರಿ, ಪ್ಲಾಸ್ಟಿಕ್‌ ಹೀಗೆ ನಾವು ದಿನನಿತ್ಯ ಉಪಯೋಗಿಸುವ ಎಲ್ಲಾ ವಸ್ತುಗಳಿಗೂ ನಾವು ವಿದೇಶಗಳನ್ನೇ ಅವಲಂಬಿಸಿದ್ದೇನೆ. ರಷ್ಯಾ-ಉಕ್ರೇನ್‌ ಯುದ್ಧದ ಕಾರಣದಿಂದ ಪ್ರಪಂಚದಲ್ಲೇ ಸೂರ್ಯಕಾಂತಿ ಎಣ್ಣೆಯನ್ನು ಅತ್ಯಧಿಕವಾಗಿ ಉತ್ಪಾದನೆ ಮಾಡುವ ಉಕ್ರೇನ್‌ನಿಂದ ಎಣ್ಣೆ ರವಾನೆ ನಿಂತುಹೋಗಿದೆ. ಪಾಮಾಯಿಲ್‌, ಸೋಯಾಬೀನ್‌ ಆಯಿಲ್‌ನಂತರ ಇತರೆ ಅಡುಗೆ ಎಣ್ಣೆಗಳೆಲ್ಲಾ ಅಧಿಕವಾಗಿ ಇಂಡೋನೇಷ್ಯಾ, ಅರ್ಜೆಂಟೀನಾ ದೇಶಗಳಿಂದ ಆಮದಾಗುತ್ತಿತ್ತು. ಅದೂ ಕೂಡಾ ಈ ನಿಂತುಹೋಗಿದೆ.

   ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ ಪ್ರಕಟಿಸಿದ ವರದಿ ಪ್ರಕಾರ, ಭಾರತ ಪ್ರತಿ ವರ್ಷವೂ 1.3 ಕೋಟಿ ಟನ್‌ಗಳಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಶೇಕಡಾ 63ರಷ್ಟು ಪಾಮಾಯಿಲ್‌ ಆಗಿರುತ್ತದೆ. ಇದರಲ್ಲಿ ಅಧಿಕ ಭಾಗ ಇಂಡೋನೇಷ್ಯಾನಿಂದಲೇ ಆಮದಾಗುತ್ತದೆ. ಮಲೇಷಿಯಾ, ಥಾಯ್ಲೆಂಡ್‌ ದೇಶಗಳಿಂದಲೂ ಸಣ್ಣಮಟ್ಟದಲ್ಲಿ ಪಾಮಾಯಿಲ್‌ ಆಮದು ಮಾಡಿಕೊಳ್ಳುತ್ತೇವೆ.

   ಆದರೆ ದೇಶದ ಬೇಡಿಕೆಯನ್ನು ಈಡೇರಿಸುವುದಕ್ಕೆ ಬೇಕಾಗುವಷ್ಟು ಪೂರೈಕೆ ಮಾಡುವ ಇಂಡೋನೇಷ್ಯಾ ಪಾಮಾಯಿಲ್‌  ಪೂರೈಕೆಯನ್ನು ನಿಲ್ಲಿಸಿಬಿಟ್ಟಿದೆ. ಇದರಿಂದಾಗಿ ಇದ್ದಕ್ಕಿಂತೆ ಅಡುಗೆ ಎಣ್ಣೆ ಬೆಲೆಗಳು ಆಕಾಶಕ್ಕೆ ಮುಟ್ಟಿವೆ. ಮತ್ತೊಂದೆಡೆ ಹೀಟ್‌ ವೇವ್‌ ಖುಡಾ ದೇಶದಲ್ಲಿ ಕೃಷಿ ಉತ್ಪನ್ನಗಳ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗಾಗಲೇ ಉತ್ತರ ಭಾರತದಲ್ಲಿ ಗೋಧಿ ಫಸಲಿನ ಮೇಲೆ ಅದರ ಪ್ರಭಾವ ಬೀರಿದೆ. ಅದೇ ಸಮಯದಲ್ಲೇ ಗೋಧಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ರಷ್ಯಾ-ಉಕ್ರೇನ್‌ ದೇಶಗಳಿಂದ ಗೋಧಿ ಪೂರೈಕೆ ಸಂಪೂರ್ಣ ನಿಂತುಹೋಗಿದೆ.

  ಈ ಕಾರಣದಿಂದ ಗೋಧಿ ಬೆಲೆ ಕೂಡಾ ಹೆಚ್ಚಾಗುವುದಕ್ಕೆ ಶುರುವಾಗಿದೆ. ಅದು ಇದು ಅಂತೇನಿಲ್ಲ, ದೇಶದಲ್ಲಿ ಎಲ್ಲಾ ನಿತ್ಯವಸರ ವಸ್ತುಗಳ ಬೆಲೆಗಳೂ ಗಗನಕ್ಕೇರುತ್ತಲೇ ಇವೆ. ಇನ್ನೂ ಬೆಲೆ ಏರಿಕೆಯಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಹಣದುಬ್ಬರ

   ಈ ಅವ್ಯವಸ್ಥೆಗಳು ಹೆಚ್ಚಾದ ಕಾರಣದಿಂದಲೇ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತಾಗಿದೆ. ಭಾರತದಲ್ಲಿ ಹಣದುಬ್ಬರ 18 ತಿಂಗಳುಗಳಲ್ಲಿ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ ಎಂದು ರಾಯಿಟರ್ಸ್‌, ಇನ್ವೆಸ್ಟ್ಮೆಂಟ್‌ ಇನಫರ್ಮೇಷನ್‌ ಅಂಡ್‌ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಆಫ್‌ ಇಂಡಿಯಾ ಸೇರಿ ಹಲವು ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಂದಾಜು ಮಾಡಿವೆ. ಅಂದುಕೊಂಡತೆಯೇ ದೇಶದಲ್ಲಿ ರಿಟೈಲ್‌ ಹಣದುಬ್ಬರ ಎಂಟು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ನಿನ್ನೆ ಅಂದರೆ ಮೇ 12 ರಂದು ಬಿಡುಗಡೆಯಾದ ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ ಹಣದುಬ್ಬರ ಶೇಕಡಾ 7.7ರಷ್ಟು.

ಆಹಾರ ಮತ್ತು ತೈಲ ಬೆಲೆಗಳ ಏರಿಕೆಯಿಂದಾಗಿ ಹಣದುಬ್ಬರದಲ್ಲಿ ಈ ಹೆಚ್ಚಳವಾಗಿದೆ. ಈ ಮಟ್ಟದ ಚಿಲ್ಲರೆ ಹಣದುಬ್ಬರವು ಮೇ 2014 ರಿಂದ ದಾಖಲಾಗಿಲ್ಲ. ಆಗ ಚಿಲ್ಲರೆ ಹಣದುಬ್ಬರ ಶೇ.8.33ರಷ್ಟಿತ್ತು.ಅದೇ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಚಿಲ್ಲರೆ ಹಣದುಬ್ಬರ ದರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್ 2021 ರಲ್ಲಿ ಶೇಕಡಾ 4.21 ರಷ್ಟಿತ್ತು. ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಗದಿತ ಮಿತಿಯಾದ ಶೇಕಡಾ 6 ಕ್ಕಿಂತ ಸತತ ನಾಲ್ಕು ತಿಂಗಳುಗಳವರೆಗೆ ಇತ್ತು. ಈಗ ಹಣದುಬ್ಬರ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್ ಬಡ್ಡಿದರ ಬದಲಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಾಲಗಳು ಹೆಚ್ಚು ಪ್ರಿಯವಾಗಬಹುದು.

ಮೇ 4ರಂದು ಆರ್‌ಬಿಐ ರೆಪೊ ದರವನ್ನು ಶೇ.0.40ರಿಂದ ಶೇ.4.40ಕ್ಕೆ ಏರಿಸುವುದಾಗಿ ಪ್ರಕಟಿಸಿತ್ತು. ಇದರೊಂದಿಗೆ ಆರ್ ಬಿಐ ನಗದು ಮೀಸಲು ಅನುಪಾತವನ್ನು ಶೇ.0.50ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಹಣದುಬ್ಬರವನ್ನು ನಿಯಂತ್ರಿಸಲು ಬ್ಯಾಂಕ್ ಈ ಕ್ರಮಗಳನ್ನು ಕೈಗೊಂಡಿದೆ. ವಾಸ್ತವವಾಗಿ, ಹಣದುಬ್ಬರವು ಮಾರ್ಚ್‌ನಲ್ಲಿ 17 ತಿಂಗಳ ಗರಿಷ್ಠ 6.95 ಶೇಕಡಾವನ್ನು ತಲುಪಿದೆ. ಪ್ರಮುಖ ಹಣಕಾಸು ವಿಶ್ಲೇಷಕ ಡಿ.ಪಾಪಾರಾವ್ ಮಾತನಾಡುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕುಗಳ ಮಾರುಕಟ್ಟೆ ಬಿಕ್ಕಟ್ಟು ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳೂ ಹಣದುಬ್ಬರ ಏರಿಕೆಗೆ ಕಾರಣವಾಗಿವೆ.

 

Share Post