Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!
ಬೆಂಗಳೂರು; ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರು ಕೋರ್ಟ್ ವಶದಲ್ಲಿದ್ದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಅಪಾರ ಪ್ರಮಾಣದ ಚಿನ್ನಾಭರಣ ಸೇರಿ ಇತರೆ ವಸ್ತುಗಳನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ.. ವಿಚಾರಣೆ ನಡೆಸುತ್ತಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯ 6 ಟ್ರಂಕ್‌ಗಳನ್ನು ತೆಗೆದುಕೊಂಡು ಬಂದು ಜಯಲಲಿತಾ ಅವರ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಇದನ್ನೂ ಓದಿ; Dhruva Sarja; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ & ಮಾರ್ಟಿನ್ ಟೀಂ
ಜಯಲಲಿತಾ ಮನೆಯಲ್ಲಿ ಸಿಕ್ಕಿದ್ದಿದ್ದೆಷ್ಟು…?;
ಜಯಲಲಿತಾ ಮನೆಯಲ್ಲಿ ಸಿಕ್ಕಿದ್ದಿದ್ದೆಷ್ಟು?; ತೊಂಬತ್ತರ ದಶಕದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.. ಈ ವೇಳೆ ಅಪಾಯ ಪ್ರಮಾಣದ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳು ಸಿಕ್ಕಿದ್ದವು..
7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು
700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು
740 ದುಬಾರಿ ಚಪ್ಪಲಿಗಳು
11344 ರೇಷ್ಮೆ ಸೀರೆಗಳು
250 ಶಾಲು, 12 ರೆಫ್ರಿಜೆರೇಟರ್
10 ಟಿವಿ ಸೆಟ್ , 8 ವಿಸಿಆರ್
1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್
2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್
1040 ವಿಡಿಯೋ ಕ್ಯಾಸೆಟ್
3 ಐರನ್ ಲಾಕರ್ಗಳು
ಇದನ್ನೂ ಓದಿ; Investment Plan; ಸಂಪ್ರದಾಯಿಕ ಉಳಿತಾಯ ನಿಲ್ಲಿಸಿ, ಸರಿಯಾದ ಕಡೆ ಹೂಡಿಕೆ ಮಾಡಿ, ಕೋಟಿ ಗಳಿಸಿ!
ಇವಿಷ್ಟನ್ನು ಜಯಲಲಿತಾ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಕಾರಣಕ್ಕೆ ಪ್ರಕರಣದ ವಿಚಾರಣೆಯನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಕೋರ್ಟ್ ಸ್ಥಾಪನೆ ಮಾಡಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.
ಮಾರ್ಚ್ 6 ಮತ್ತು 7ರಂದು ಹಸ್ತಾಂತರ;
ಮಾರ್ಚ್ 6 ಮತ್ತು 7ರಂದು ಹಸ್ತಾಂತರ; ಕರ್ನಾಟಕದ ಮೇಲುಕೋಟೆ ಮೂಲದವರಾದ ಜಯಲಲಿತಾ ಅವತು ತಮಿಳುನಾಡಿನಲ್ಲಿ ನೆಲೆಸಿದ್ದರು.. ತಮಿಳುನಾಡು ಚಿತ್ರರಂಗದಲ್ಲಿ ನಟನೆ ಶುರು ಮಾಡಿದ ಅವರು ನಂತರ ರಾಜಕೀಯಕ್ಕೆ ಧುಮುಕಿದ್ದರು.. ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿ ದಶಕಗಳ ಕಾಲ ಆಡಳಿತ ಮಾಡಿದ್ದರು.. ಅನಾರೋಗ್ಯದ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ.. ಇದೀಗ ತಮಿಳುನಾಡಿನ ಅಧಿಕಾರಿಗಳು ಆರು ಟ್ರಂಕ್‌ಗಳನ್ನು ತಂದು ಜಯಲಿತಾ ಅವರ ವಸ್ತುಗಳನ್ನು ಕೊಂಡೊಯ್ಯಲಿದ್ದಾರೆ. ಮಾರ್ಚ್ 6 ಮತ್ತು 7ರಂದು ಒಡವೆಗಳ ಸೇರಿ ಇತರೆ ವಸ್ತುಗಳನ್ನು ತಮಿಳುನಾಡಿಗೆ ಹಸ್ತಾಂತರ ಮಾಡಲಾಗುತ್ತದೆ.
ಈ ವಸ್ತುಗಳನ್ನು ಸ್ವೀಕಾರ ಮಾಡೋದಕ್ಕೆ ತಮಿಳುನಾಡು ಸರ್ಕಾರದಿಂದ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ವಿಶೇಷ ಕೋರ್ಟ್ ನ್ಯಾಯಾಧೀಶ ಮೋಹನ್ ಸೂಚನೆ ನೀಡಿದ್ದಾರೆ. 6 ಟ್ರಂಕ್ ಗಳೊಂದಿಗೆ ವಿಡಿಯೋಗ್ರಾಫರ್, ಫೋಟೋಗ್ರಾಫರ್ ಕರೆತರಲು ಸೂಚನೆ ನೀಡಲಾಗಿದೆ. ಒಡವೆ ಹಸ್ತಾಂತರದ ಎರಡೂ ದಿನಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.
ಇದನ್ನೂ ಓದಿ; WHO; ಪ್ರಪಂಚದ ಶೇ.80ರಷ್ಟು ಜನಕ್ಕೆ ಸೊಳ್ಳೆಗಳಿಂದ ರೋಗಗಳು ಹರಡುವ ಭೀತಿ!
ಕರ್ನಾಟಕಕ್ಕೆ 5 ಕೋಟಿ ರೂ. ಪಾವತಿಗೆ ಸೂಚನೆ;
ಕರ್ನಾಟಕಕ್ಕೆ 5 ಕೋಟಿ ರೂ. ಪಾವತಿಗೆ ಸೂಚನೆ; ಇನ್ನು ಕರ್ನಾಟಕ ಸರ್ಕಾರ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಪ್ರಕರಣದ ವಿಚಾರಣೆಯ ಹೊಣೆ ಹೊತ್ತುಕೊಂಡಿತ್ತು.. ಅದಕ್ಕೆ ಬೇಕಾದ ಖರ್ಚುಗಳನ್ನು ಕರ್ನಾಟಕ ಸರ್ಕಾರ ಭರಿಸಿತ್ತು.. ಹೀಗಾಗಿ ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ 5 ಕೋಟಿ ರೂಪಾಯಿ ಪಾವತಿ ಮಾಡಬೇಕೆಂದು ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಆದೇಶ ನೀಡಿದೆ. ತಮಿಳುನಾಡು ಸರ್ಕಾರ ಈ ಹಣವನ್ನು ಕರ್ನಾಟಕಕ್ಕೆ ಪಾವತಿ ಮಾಡಲಾಗಿದೆ. ಇನ್ನು ಜಯಲಲಿತಾ ಆಸ್ತಿಗಳು ತನ್ನ ಸುಪರ್ದಿಗೆ ಬಂದ ಮೇಲೆ ಅವುಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ತಮಿಳುನಾಡು ಸರ್ಕಾರ ನಿರ್ಧಾರ ಮಾಡಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; Marriage Problem; ಸಿಗದ ವಧು – ಬೈಕ್ ಮೇಲೆ ಗೊಂಬೆ ಕೂರಿಸಿಕೊಂಡು ಓಡಾಡಿದ ಯುವಕ!