ರಾಬರ್ಟ್ ಸಿಂಗರ್ ಮಂಗ್ಲಿ ಕಾರು ಭೀಕರ ಅಪಘಾತ; ಮಧ್ಯರಾತ್ರಿ ನಡೆದಿದ್ದೇನು..?
ಹೈದರಾಬಾದ್; ಕನ್ನಡದ ರಾಬರ್ಟ್ ಸಿನಿಮಾದ ಗಾಯಕಿ ಹಾಗೂ ತೆಲುಗಿನ ಖ್ಯಾತ ಸಿಂಗರ್ ಮಂಗ್ಲಿ ಕಾರು ಅಪಘಾತಕ್ಕೀಡಾಗಿದೆ.. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯರಾತ್ರಿ ಭೀಕರ ಅಪಘಾತಕ್ಕೀಡಾಗಿದೆ.. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.. ಅದೃಷ್ಟವಶಾತ್ ಸಿಂಗರ್ ಮಂಗ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!
ತೊಂಡುಪಲ್ಲಿ ಸೇತುವೆ ಬಳಿ ಅಪಘಾತ;
ಸ್ಟಾರ್ ಸಿಂಗರ್ ಖ್ಯಾತ ಮಾಂಗ್ಲಿ ಕಾರು ಭೀಕರ ಅಪಘಾತಕ್ಕೀಡಾಗಿದೆ.. ಆಕೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಸಿಎಂ ವಾಹನ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ; ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?
ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಮಂಡಲದ ಕನ್ಹಾ ಶಾಂತಿ ವನಂನಲ್ಲಿ ಭಾನುವಾರ ನಡೆದ ವಿಶ್ವ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಅದೇ ದಿನ ಮಧ್ಯರಾತ್ರಿಯ ನಂತರ ಮೇಘರಾಜ್ ಮನೋಹರ್ ಜೊತೆ ತನ್ನ ಕಾರಿನಲ್ಲಿ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮನೆಗೆ ಹೊರಟಿದ್ದರು. ಆದರೆ ಶಂಶಾಬಾದ್ ಮಂಡಲದ ತೊಂಡುಪಲ್ಲಿ ಸೇತುವೆ ಬಳಿ ಬಂದಾಗ ಹಿಂದಿನಿಂದ ಡಿಸಿಎಂ ವಾಹನವೊಂದು ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮಂಗ್ಲಿ ಸೇರಿದಂತೆ ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಮಂಗ್ಲಿ ಅಪಾಯದಿಂದ ಪಾರಾಗುತ್ತಿದ್ದಂತೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ; ಪಟ್ಟು ಸಡಿಲಿಸುತ್ತಿಲ್ಲ ಈಶ್ವರಪ್ಪ; ಸಂಧಾನಕ್ಕೆ ಹೋದವರಿಗೆ ನಿರಾಸೆ
ಜನಪದ ಗಾಯನದ ಮೂಲಕ ಚಿತ್ರರಂಗಕ್ಕೆ;
ಸುದ್ದಿ ಟಿವಿ ನಿರೂಪಕಿಯಾಗಿ ಆರಂಭವಾದ ಮಂಗ್ಲಿ ಅವರ ಪಯಣ ಇಂದು ಸಿನಿಮಾಗಳಲ್ಲಿ ಹಾಡುವ ಮೂಲಕ ಮೋಸ್ಟ್ ಬ್ಯುಸಿಯೆಸ್ಟ್ ಗಾಯಕಿಯಾಗಿದ್ದಾರೆ. ಅವರು ತಮ್ಮ ಧ್ವನಿಯಿಂದ ಕೇಳುಗರನ್ನು ಆಕರ್ಷಿಸುತ್ತಾರೆ. ಜಾನಪದ ಗೀತೆಯಾಗಲಿ, ಐಟಂ ಸಾಂಗ್ ಆಗಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಕುಣಿದು ಕುಪ್ಪಳಿಸಬೇಕು. ಸಾಲು ಸಾಲು ಅವಕಾಶಗಳೊಂದಿಗೆ ಚಿತ್ರರಂಗ ಪ್ರವೇಶಿಸುವ ಜತೆಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ. ಕನ್ನಡದಲ್ಲೂ ರಾಬರ್ಟ್ ಸೇರಿ ಹಲವು ಚಿತ್ರಗಳಿಗಾಗಿ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಮಂಗ್ಲಿಯವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ; ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!