Politics

ಪಟ್ಟು ಸಡಿಲಿಸುತ್ತಿಲ್ಲ ಈಶ್ವರಪ್ಪ; ಸಂಧಾನಕ್ಕೆ ಹೋದವರಿಗೆ ನಿರಾಸೆ

ಶಿವಮೊಗ್ಗ; ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಗ ಕಾಂತೇಶ್‌ ಗೆ ಟಿಕೆಟ್‌ ಸಿಗದಿದ್ದಕ್ಕೆ ಬಿಜೆಪಿ ನಾಯಕ ಈಶ್ವರಪ್ಪ ಅವರು ಫುಲ್‌ ಗರಂ ಆಗಿದ್ದಾರೆ.. ಪುತ್ರನಿಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಯಡಿಯೂರಪ್ಪ ಕುಟುಂಬವೇ ಕಾರಣ ಎಂದು ಈಶ್ವರಪ್ಪ ಆರೋಪಿಸಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಬಂಡಾಯ ಸಾರಿದ್ದಾರೆ.. ಹೀಗಾಗಿ ಅವರನ್ನು ಮನವೊಲಿಸಲು ಸಂಧಾನಕ್ಕೆಂದು ಕೆಲವು ನಾಯಕರು ಇಂದು ಈಶ್ವರಪ್ಪ ಮನೆಗೆ ಹೋಗಿದ್ದರು.. ಆದ್ರೆ ಅವರ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸಾಗಿದ್ದಾರೆ.

ಇದನ್ನೂ ಓದಿ; ಮತದಾರ ಗುರುತಿನ ಚೀಟಿಯಲ್ಲಿ ಅಡ್ರೆಸ್ ಬದಲಿಸಬೇಕೇ..?; ಹೀಗೆ ಮಾಡಿ ಸಾಕು

ಯಾವುದೇ ಕಾರಣಕ್ಕೆ ಹಿಂದೆ ಸರಿಯಲ್ಲ;

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪರಿಷತ್‌ ಸದಸ್ಯ ರವಿಕುಮಾರ್‌ ಸೇರಿ ಹಲವು ನಾಯಕರು ಇಂದು ಶಿವಮೊಗ್ಗದ ಮಲ್ಲೇಶ್ವರದಲ್ಲಿರುವ ಈಶ್ವರಪ್ಪ ಅವರ ಜಯಲಕ್ಷ್ಮೀ ನಿವಾಸಕ್ಕೆ ಭೇಟಿ ನೀಡಿದ್ದರು.. ಈಶ್ವರಪ್ಪ ಅವರ ಸಂಧಾನಕ್ಕೆ ಯತ್ನ ಮಾಡಿದರು.. ಆದ್ರೆ ಈಶ್ವರಪ್ಪ ಫುಲ್‌ ಗರಂ ಆದರು.. ಯಡಿಯೂರಪ್ಪ ಕುಟುಂಬ ನನಗೆ ಅನ್ಯಾಯ ಮಾಡಿದೆ.. ನಮ್ಮ ಕುಟುಂಬವನ್ನು ತುಳಿಯಲು ಪ್ರಯತ್ನಿಸಿದೆ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.. ಈ ವೇಳೆ ಸಂಧಾನಕ್ಕೆ ಬಂದವರು, ಹಾವೇರಿ ಟಿಕೆಟ್‌ ಕೈತಪ್ಪುವುದಕ್ಕೆ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಕಾರಣವಲ್ಲ ಎಂದು ಹೇಳಿದ್ದಾರೆ… ಆದರೂ ಈಶ್ವರಪ್ಪ ಕನ್ವಿನ್ಸ್‌ ಆಗಿಲ್ಲ.. ಯಾವುದೇ ಕಾರಣಕ್ಕೂ ನನ್ನ ನಿರ್ಧಾದಿಂದ ಹಿಂದೆ ಸರಿಯೋದಿಲ್ಲ ಎಂದು ಈಶ್ವರಪ್ಪ ಖಂಡತುಂಡವಾಗಿ ಹೇಳಿಬಿಟ್ಟಿದ್ದಾರೆ.

ಇದನ್ನೂ ಓದಿ; ಲೋಕಸಭೆ, 4 ವಿಧಾನಸಭಾ ಚುನಾವಣೆಗಳ ಪೂರ್ತಿ‌ ವಿವರ

ಮುಕ್ಕಾಲು ಗಂಟೆ ಚರ್ಚೆ, ಬರೀ ನಿರಾಸೆ;

ರವಿಕುಮಾರ್‌ ಹಾಗೂ ಆರಗ ಜ್ಞಾನೇಂದ್ರ ಅವರು ಈಶ್ವರಪ್ಪ ಅವರ ಜೊತೆ ಮುಕ್ಕಾಲು ಗಂಟೆಗು ಹೆಚ್ಚು ಕಾಲ ಚರ್ಚೆ ನಡೆಸಿದರು.. ನಿರ್ಧಾರ ವಾಪಸ್‌ ತೆಗೆದುಕೊಳ್ಳುವಂತೆ ಮನವಿ ಮಾಡಿದರು… ಬಂಡಾಯ ಕಣದಿಂದ ಹಿಂದೆ ಸರಿಯುವಂತೆ, ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಯೂ ಕರೆ ಕೊಡಲಾಯಿತು.. ಆದ್ರೆ ಈಶ್ವರಪ್ಪ ಯಾವುದಕ್ಕೂ ಜಗ್ಗಲಿಲ್ಲ.. ಹೀಗಾಗಿ ಸಂಧಾನಕ್ಕೆ ಹೋಗಿದ್ದ ತಂಡಕ್ಕೆ ತೀವ್ರ ನಿರಾಸೆಯಾಗಿದೆ.. ಬಂದ ದಾರಿಗೆ ಸುಂಕವಿಲ್ಲದೆ ನಾಯಕರು ವಾಪಸ್ಸಾಗಿದ್ದಾರೆ.

ಇದನ್ನೂ ಓದಿ; ಲೋಕಸಭಾ ಚುನಾವಣೆ ವೇಳಾಪಟ್ಟಿ; ಸಂಪೂರ್ಣ ವಿವರ ಇಲ್ಲಿದೆ

ಅನ್ಯಾಯವಾಗಿದೆ, ಸ್ಪರ್ಧಿಸಿಯೇ ತೀರುತ್ತೇನೆ;

ಸಂಧಾನಕ್ಕೆ ಬಂದವರ ಮುಂದೆ ಈಶ್ವರಪ್ಪ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ.. ನನಗೆ ಯಡಿಯೂರಪ್ಪ ಕುಟುಂಬದಿಂದ ಅನ್ಯಾಯವಾಗಿದೆ.. ಹೀಗಾಗಿ ನಾನು ರಾಘವೇಂದ್ರ ಸ್ಪರ್ಧೆ ಮಾಡಿಯೇ ತೀರುತ್ತೇನೆ.. ಇದು ನನ್ನ ಅಚಲ ನಿರ್ಧಾರ.. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಹೇಳಿಬಿಟ್ಟಿದ್ದಾರೆ.. ಹೀಗಾಗಿ ಮುಖಂಡರ ತಂಡ ವಾಪಸ್ಸಾಗಿದೆ. ಯಡಿಯೂರಪ್ಪ ಅವರೇ ಈ ತಂಡವನ್ನು ಈಶ್ವರಪ್ಪ ಮನೆಗೆ ಕಳುಹಿಸಿದ್ದರು.. ಆದ್ರೆ ಈ ಸಂಧಾನ ಫಲಪ್ರದವಾಗಿಲ್ಲ..

ಇದನ್ನೂ ಓದಿ; ಅಳು ಬಂದರೆ ಅತ್ತುಬಿಡಿ ಎನ್ನುತ್ತಿದ್ದಾರೆ ತಜ್ಞರು; ಯಾಕೆ ಗೊತ್ತಾ..?

ಒಂದೆರಡು ದಿನದಲ್ಲಿ ಸರಿಹೋಗುತ್ತೆ ಎಂದ ಯಡಿಯೂರಪ್ಪ;

ಇನ್ನು ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.. ನಾನು ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ತಪ್ಪಿಸಿಲ್ಲ.. ಅದು ಹೈಕಮಾಂಡ್‌ ನಿರ್ಧಾರ ಎಂದಿದ್ದಾರೆ.. ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ.. ಎರಡು ದಿನದಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ಇದೇ ಮಾತನನ್ನೇ ಹೇಳುತ್ತಿದ್ದಾರೆ.. ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನಗಳು ಮುಂದುವರೆದಿದೆ.. ಆದ್ರೆ ಈಶ್ವರಪ್ಪ ಇದಕ್ಕೆ ಬಗ್ಗುತ್ತಾರಾ ನೋಡಬೇಕು..

ಇದನ್ನೂ ಓದಿ; ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ; ತುಮಕೂರಲ್ಲಿ ನಡೆದಿದ್ದಾದ್ರೂ ಏನು..?

ಮೋದಿಯೇ ಸಂಧಾನ ಮಾಡುತ್ತಾರಾ..?;

ಈಶ್ವರಪ್ಪ ಯಾವುದಕ್ಕೂ ಬಗ್ಗದೇ ಹೋದರೆ ಕೊನೆಗೆ ಮೋದಿಯೇ ಅಖಾಡಕ್ಕಿಳಿಯುವ ಸಾಧ್ಯತೆ ಇದೆ.. ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್‌ ಕೈತಪ್ಪಿದಾಗಿ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.. ಅನಂತರ ಮೋದಿಯವರೇ ಖುದ್ದು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದರು.. ಇದರಿಂದ ಈಶ್ವರಪ್ಪ ಸಮಾಧಾನಗೊಂಡು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ; Bommai; ಪಕ್ಷ ಎಲ್ಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದೆ; ಬಸವರಾಜ ಬೊಮ್ಮಾಯಿ

Share Post