ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!
ಬೆಂಗಳೂರು; ತೆಲುಗು, ತಮಿಳು ಚಿತ್ರರಂಗದಲ್ಲಿ ಹೀರೋಗಳಿಗೆ ಕೋಟ್ಯಂತರ ಅಭಿಮಾನಿಗಳಿರುತ್ತಾರೆ.. ಈ ಅಭಿಮಾನಿಗಳು ತನ್ನ ಹೀರೋಗಾಗಿ ಪ್ರಾಣ ಕೊಡೋದಕ್ಕೂ ಸಿದ್ಧರಿರುತ್ತಾರೆ.. ಅಂತಹ ಹುಚ್ಚು ಅಭಿಮಾನ ಅವರದ್ದು.. ಹೀಗಾಗಿಯೇ ಆಗಾಗ ಫ್ಯಾನ್ ವಾರ್ ನಡೆಯುತ್ತಿರುತ್ತದೆ.. ನೆಚ್ಚಿನ ಹೀರೋಗಳ ಫ್ಯಾನ್ ಗಳು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಳ್ಳುತ್ತಿರುತ್ತಾರೆ.. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.. ಕನ್ನಡದಲ್ಲೂ ಇಂತಹ ಕಿತ್ತಾಟಗಳು ಇರುತ್ತವಾದರೂ, ರಕ್ತ ಬರುವಂತೆ ಬಡಿದಾಡಿಕೊಳ್ಳುವುದಿಲ್ಲ. ಆದ್ರೆ ಬೆಂಗಳೂರಿನಲ್ಲಿ ತೆಲುಗಿನ ಹೀರೋಗಳ ಫ್ಯಾನ್ಗಳು ಸಿನಿಮಾ ರೀತಿಯಲ್ಲೇ ಫೈಟಿಂಗ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ;ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್!
ಸಿನಿಮಾ ರೀತಿಯಲ್ಲೇ ನಡೀತು ಫೈಟಿಂಗ್;
ಸಿನಿಮಾ ರೀತಿಯಲ್ಲೇ ನಡೀತು ಫೈಟಿಂಗ್; ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಗಳು ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಿತ್ತಾಡಿಕೊಂಡಿದ್ದಾರೆ.. ಅದೂ ಕೂಡಾ ಒಬ್ಬಾತನಿಗೆ ರಕ್ತ ಬರುವ ರೀತಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಯಾವ ಹೀರೋ ಗ್ರೇಟ್ ಎಂಬ ವಿಚಾರವಾಗಿ ನಡೆದ ವಾದ ವಿಕೋಪಕ್ಕೆ ತಿರುಗಿ ಅದು ಬಡಿದಾಡುವ ಹಂತಕ್ಕೆ ಹೋಗಿದೆ… ಅಲ್ಲು ಅರ್ಜುನ್ ಅಭಿಮಾನಿಗಳು ಪ್ರಭಾಸ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ;ಇಂದೇ ಬಿಜೆಪಿ ಎರಡನೇ ಪಟ್ಟಿ ರಿಲೀಸ್; ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್!
ಕ್ರಿಕೆಟ್ ಆಡುವಾಗ ಕಿತ್ತಾಡಿಕೊಂಡಿರುವ ಸಾಧ್ಯತೆ;
ಕ್ರಿಕೆಟ್ ಆಡುವಾಗ ಕಿತ್ತಾಡಿಕೊಂಡಿರುವ ಸಾಧ್ಯತೆ; telugu scribe ಎಂಬ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದ್ರೆ ಈ ಘಟನೆ ಎಲ್ಲಿ ನಡೆಯಿತು, ಹೇಗೆ ನಡೆಯಿತು ಎಂಬುದು ಇನ್ನೂ ಗೊತ್ತಾಗಿಲ್ಲ.. ಆದ್ರೆ ವಿಡಿಯೋ ಚಿತ್ರೀಕರಣ ಮಾಡಿಕೊಂಡವರು ಅದನ್ನು ಟ್ವಟಿರ್ ನಲ್ಲಿ ಹಾಕಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ವಿಡಿಯೋದಲ್ಲಿ ಒಬ್ಬನ ಕೈಯಲ್ಲಿ ಬ್ಯಾಟ್ ಇದೆ.. ಹೀಗಾಗಿ ಕ್ರಿಕೆಟ್ ಆಡುವಾಗ, ನೆಚ್ಚಿನ ಹೀರೋಗಳ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಗಲಾಟೆ ಆಗಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ಪೋಸ್ಟ್ ಮಾಡಿದವರೇ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಕಿತ್ತಾಡಿದ್ದಾರೆ. ಹತ್ತಕ್ಕೂ ಹೆಚ್ಚು ಅಲ್ಲು ಅರ್ಜುನ್ ಅಭಿಮಾನಿಗಳು ಪ್ರಭಾಸ್ ಅಭಿಮಾನಿಗೆ ರಕ್ತ ಬರುವಂತೆ ಹೊಡೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ;ಮೈಸೂರಿಗೆ ʻಯಧುವೀರಾʼಧಿ ವೀರ; ಟಿಕೆಟ್ ಬೇಟೆಯ ಹೋಪ್ ಕಳೆದುಕೊಳ್ತಾ ʻಸಿಂಹʼ?
ಬೆಂಗಳೂರಿನಲ್ಲಿ ತೆಲುಗಿನವರು ಹೆಚ್ಚಿದ್ದಾರೆ;
ಬೆಂಗಳೂರಿನಲ್ಲಿ ತೆಲುಗಿನವರು ಹೆಚ್ಚಿದ್ದಾರೆ; ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಹೂಡಿ, ವೈಟ್ ಫೀಲ್ಡ್ ಸೇರಿದಂತೆ ಹಲವು ಕಡೆ ತೆಲುಗಿನವರು ಹೆಚ್ಚಾಗಿದ್ದಾರೆ. ಆಂಧ್ರದಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದಾರೆ.. ಹೀಗಾಗಿ ಈ ಭಾಗದ ಯಾವುದಾದರೂ ಒಂದು ಸ್ಥಳದಲ್ಲಿ ಈ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ವಿಡಿಯೋ ಪೋಸ್ಟ್ ಮಾಡಿದವರು ಘಟನೆ ನಡೆದ ಸ್ಥಳವನ್ನು ಹೇಳಿಲ್ಲ. ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಆದ್ರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರಾ ಅನ್ನೋದು ಕೂಡಾ ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ;ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು, ಇದು ಪಾಪರ್ ಸರ್ಕಾರ; ಆರ್.ಅಶೋಕ್ ಆಕ್ರೋಶ