Politics

ಒಕ್ಕಲಿಗ-ಬಲಿಜ ಕಾಂಬಿನೇಷನ್‌; ಚಿಕ್ಕಬಳ್ಳಾಪುರಕ್ಕೆ ಸುಮಲತಾ ಅಂಬರೀಶ್‌?

ಬೆಂಗಳೂರು; ನಾನು ಮಂಡ್ಯಕ್ಕಾಗಿಯೇ ರಾಜಕೀಯಕ್ಕೆ ಬಂದಿರೋದು.. ಮಂಡ್ಯ ಬಿಟ್ಟು ಬೇರೆಲ್ಲೋ ಸ್ಪರ್ಧೆ ಮಾಡೋದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹೇಳುತ್ತಲೇ ಬಂದಿದ್ದರು.. ಆದ್ರೆ ಈಗ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಹೈಕಮಾಂಡ್‌ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.. ಇದರಿಂದ ಸುಮಲತಾ ಅವರಿಗೆ  ನಿರಾಸೆಯಾಗಿದೆ.. ಇದರ ನಡುವೆ ಬಿಜೆಪಿ ಹೈಕಮಾಂಡ್‌ ಸುಮಲತಾ ಅವರನ್ನು ಒಪ್ಪಿಸಿ ಚಿಕ್ಕಬಳ್ಳಾಪುರದಲ್ಲಿ ಅಖಾಡಕ್ಕಿಳಿಸಲು ಪ್ರಯತ್ನ ನಡೆಯುತ್ತಿದೆ.. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದ್ದು, ಸುಮಲತಾ ಅಂಬರೀಶ್‌ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ…

ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!

ಸುಮಲತಾಗೆ ಜೆ.ಪಿ.ನಡ್ಡಾ ಬುಲಾವ್‌;

ಶನಿವಾರ ಕುಮಾರಸ್ವಾಮಿಯವರು ದೆಹಲಿಗೆ ಹೋಗಿ ಬಂದಿದ್ದಾರೆ.. ಈ ವೇಳೆ ಬಿಜೆಪಿ ಹೈಕಮಾಂಡ್‌ ಹಾಸನ, ಕೋಲಾರ ಹಾಗೂ ಮಂಡ್ಯಗಳು ಕ್ಷೇತ್ರಗಳು ಜೆಡಿಎಸ್‌ಗೆ ಬಿಟ್ಟುಕೊಡೋದಕ್ಕೆ ಒಪ್ಪಿಗೆ ಕೊಟ್ಟಿದೆ.. ಹೀಗಾಗಿ, ಮಂಡ್ಯ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸುಮಲತಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದೆಹಲಿಗೆ ಕರೆಸಿಕೊಂಡಿದ್ದಾರೆ.. ಮಂಡ್ಯದಲ್ಲಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ನೀವು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿ ಎಂದು ಹೇಳಲು ಸುಮಲತಾ ಅವರನ್ನು ದೆಹಲಿಗೆ ಕರೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಲತಾ ಅವರು ನನಗೇ ಮಂಡ್ಯ ಮಾತ್ರ ಬೇಕು.. ಬೇರೆ ಕ್ಷೇತ್ರ ಬೇಡ ಎನ್ನುತ್ತಾ ಬಂದಿದ್ದಾರೆ.. ಆದ್ರೆ ಈಗ ಮಂಡ್ಯ ಕೈತಪ್ಪಿದೆ.. ಈ ವೇಳೆ ಸುಮಲತಾ ಅವರು ಬಿಜೆಪಿ ಹೈಕಮಾಂಡ್‌ ಆಹ್ವಾನಕ್ಕೆ ಒಪ್ಪುತ್ತಾರಾ ನೋಡಬೇಕು..

ಇದನ್ನೂ ಓದಿ; ಮತದಾರ ಗುರುತಿನ ಚೀಟಿಯಲ್ಲಿ ಅಡ್ರೆಸ್ ಬದಲಿಸಬೇಕೇ..?; ಹೀಗೆ ಮಾಡಿ ಸಾಕು

ಸುಮಲತಾಗೆ ಚಿಕ್ಕಬಳ್ಳಾಪುರ ಯಾಕೆ..?;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಸುಮಾರು ನಾಲ್ಕು ಲಕ್ಷದಷ್ಟಿವೆ.. ಬಲಜಿಗ ಮತಗಳು 2 ಲಕ್ಷದಷ್ಟಿವೆ.. ಇದು ಬಿಟ್ಟರೆ ಎಸ್‌ಸಿ, ಎಸ್‌ಟಿ ಮತಗಳು ಆರು ಲಕ್ಷದಷ್ಟಿವೆ… ಇಲ್ಲಿ ಬಿಜೆಪಿ ಟಿಕೆಟ್‌ಗಾಗಿ ಒಕ್ಕಲಿಗ ಸಮುದಾಯದ ಡಾ.ಕೆ.ಸುಧಾಕರ್‌ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಪುತ್ರ ಅಲೋಕ್‌ ಲಾಬಿ ನಡೆಸಿದ್ದಾರೆ… ಇವರಲ್ಲಿ ಯಾರು ನಿಂತರೂ ಕಾಂಗ್ರೆಸ್‌ನಿಂದ ಬಲಜಿಗ ಸಮುದಾಯಕ್ಕೆ ಸೇರಿದ ರಕ್ಷ ರಾಮಯ್ಯರನ್ನು ಅಖಾಡಕ್ಕಿಳಿಸಲಾಗುತ್ತದೆ.. ಹೀಗಾಗಿ, ಬಿಜೆಪಿ ಇಲ್ಲಿ ಗೇಮ್‌ ಪ್ಲ್ಯಾನ್‌ ಶುರು ಮಾಡಿದೆ… ದಿವಂಗತ ಅಂಬರೀಶ್‌ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.. ಅವರ ಪತ್ನಿ ಸುಮಲತಾ ಆಂಧ್ರದ ನಾಯ್ಡು ಸಮುದಾಯಕ್ಕೆ ಸೇರಿದವರು.. ನಾಯ್ಡು ಸಮುದಾಯವೇ ಕರ್ನಾಟಕದಲ್ಲಿ ಬಲಿಗರು… ಹೀಗಾಗಿ ಸುಮಲತಾ ಅವರನ್ನು ಕಣಕ್ಕಿಳಿಸಿದರೆ ಎರಡೂ ಪ್ರಬಲ ಸಮಯದಾಯದ ಮತಗಳನ್ನು ಸೆಳೆಯಬಹುದು ಅನ್ನೋದು ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ದು.. ಇದರ ಜೊತೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಹುತೇಕ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಿದೆ.. ಸುಮಲತಾ ಅವರು ತೆಲುಗಿನವರೇ ಆದ್ದರಿಂದ ಅವರು ಕಣಕ್ಕಿಳಿದರೆ ಲಾಭ ಹೆಚ್ಚು ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ; ರಾಬರ್ಟ್‌ ಸಿಂಗರ್‌ ಮಂಗ್ಲಿ ಕಾರು ಭೀಕರ ಅಪಘಾತ; ಮಧ್ಯರಾತ್ರಿ ನಡೆದಿದ್ದೇನು..?

ಚಿಕ್ಕಬಳ್ಳಾಪುರದಲ್ಲಿ ಸುಮಲತಾ  ನಿಂತರೆ ಜೆಡಿಎಸ್‌ಗೆ ಲಾಭ;

ಹೌದು, ಸುಮಲತಾ ಅಂಬರೀಶ್‌ ಅವರು ಹೈಕಮಾಂಡ್‌ ಮಾತಿಗೆ ಒಪ್ಪಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದರೆ  ಜೆಡಿಎಸ್‌ಗೆ ಲಾಭವಾಗಲಿದೆ.. ಯಾಕಂದ್ರೆ, ಸುಮಲತಾ ಅವರಿಗೆ ಎಲ್ಲಿಯೂ ಟಿಕೆಟ್‌ ಇಲ್ಲದಿದ್ದರೆ, ಮಂಡ್ಯದಲ್ಲಿ ಜೆಡಿಎಸ್‌ ವಿರುದ್ಧ ತಂತ್ರಗಾರಿಕೆ ಮಾಡಬಹುದು… ಕೊನೇ ಕ್ಷಣದಲ್ಲಿ ಅವರು ಕಾಂಗ್ರೆಸ್‌ ಬೆಂಬಲಿಸಿಬಿಟ್ಟರೆ ಜೆಡಿಎಸ್‌ಗೆ ಹೊಡೆತವಾಗುತ್ತದೆ.. ಅದೇ ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದರೆ, ಅಲ್ಲಿ ಜೆಡಿಎಸ್‌ ಮತಗಳು ಸಾಕಷ್ಟಿವೆ.. ಚಿಕ್ಕಬಳ್ಳಾಪುರದಲ್ಲಿ ನಿಮಗೆ ನಾವು ಬೆಂಬಲ ಕೊಡುತ್ತೇವೆ. ಮಂಡ್ಯದಲ್ಲಿ ನಿಮ್ಮ ಬೆಂಬಲ ನಮಗಿರಲಿ ಎಂದು ಜೆಡಿಎಸ್‌ ನಾಯಕರು ಕೇಳಬಹುದು.. ಹೀಗಾಗಿಯೇ ಸುಮಲತಾ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?

ಡಾ.ಕೆ.ಸುಧಾಕರ್‌, ಅಲೋಕ್‌ ಕತೆ ಏನು..?

ಮಾಜಿ ಸಚಿವ ಡಾ.ಕೆ.ಸುಧಾಕರ್‌ ಈಗಾಗಲೇ ಪಕ್ಷ ಸಂಘಟನೆ ಶುರು ಮಾಡಿದ್ದಾರೆ.. ಇತ್ತ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಮಗ ಅಲೋಕ್‌ ವಿಶ್ವನಾಥ್‌ ಕೂಡಾ ಜನ ಸಂಪರ್ಕ ಮಾಡುತ್ತಿದ್ದಾರೆ.. ಇವರಿಬ್ಬರಲ್ಲೇ ಫೈಟ್‌ ಎಂದು ಹೇಳಲಾಗುತ್ತಿತ್ತು.. ಆದ್ರೆ, ಇವರಿಬ್ಬರ ನಡುವೆ ಸುಮಲತಾ ಹೆಸರು ಕೇಳಿಬರುತ್ತಿದೆ.. ಒಂದು ವೇಳೆ ಸುಮಲತಾ ಒಪ್ಪಿಬಿಟ್ಟಿರೆ ಈ ಇಬ್ಬರಿಗೂ ನಿರಾಸೆಯಾಗುವುದು ಸಹಜ.. ಆದ್ರೆ ಸುಮಲತಾ ಅವರನ್ನು ಚಿಕ್ಕಬಳ್ಳಾಪುರದಲ್ಲಿ ನಿಲ್ಲಿಸಲು ಚಿಂತನೆ ನಡೆದಿದೆ ಅಷ್ಟೇ.. ಅದಕ್ಕೆ ಸಮಲತಾ ಒಪ್ಪೋದು ಡೌಟು.. ಆದ್ರೂ ಕೂಡಾ ಕೊನೇ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು..

ಇದನ್ನೂ ಓದಿ; ಬೆಳಗಾವಿಗೆ ಶೆಟ್ಟರ್‌ ಅಲ್ಲ, ಫೈರ್‌ ಬ್ರಾಂಡ್‌ ಯತ್ನಾಳ್‌ಗೆ ಟಿಕೆಟ್‌?; ಏನಿದು ಟ್ವಿಸ್ಟ್‌?

ನಡ್ಡಾ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ;

ಒಟ್ಟಿನಲ್ಲಿ ಸುಮಲತಾ ಅವರಿಗೆ ದೆಹಲಿಗೆ ಬರುವಂತೆ ಬುಲಾವ್‌ ಬಂದಿದೆ.. ಈಗಾಗಲೇ ಅವರು ದೆಹಲಿಯಲ್ಲಿದ್ದಾರೆ.. ಇಂದು ಜೆ.ಪಿ.ನಡ್ಡಾ ಅವರನ್ನು ಸುಮಲತಾ ಭೇಟಿಯಾಗಲಿದ್ದಾರೆ.. ಭೇಟಿ ಮುಗಿದ ನಂತರ ಸುಮಲತಾ ಏನು ಹೇಳ್ತಾರೆ ಎಂಬುದರ ಕುತೂಹಲ ಶುರುವಾಗಿದೆ.. ಜೊತೆಗೆ ಒಂದೆರಡು ದಿನಗಳಲ್ಲಿ ಬಿಜೆಪಿ ಪಟ್ಟಿ ರಿಲೀಸ್‌ ಆಗುವುದರಿಂದ, ಎಲ್ಲಾ ಗೊಂದಲಗಳಿಗೂ ತೆರೆಬೀಳಲಿದೆ..

 

Share Post