Health

ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?

Health Tips; ಹೃದಯಾಘಾತ… ಇತ್ತೀಚೆಗೆ ಜನರನ್ನು ಭೀತಿಗೆ ತಳ್ಳಿರುವ ಸಮಸ್ಯೆ… ವಯಸ್ಸಾದವರಿಗೆ, ಮಧುಮೇಹ, ಬಿಪಿ ಮುಂತಾದ ಸಮಸ್ಯೆಗಳಿರುವವರಿಗೆ ಬರುತ್ತಿದ್ದ ಹೃದಯಾಘಾತ ಈಗ ಚಿಕ್ಕಮಕ್ಕಳಿಗೂ ವಕ್ಕರಿಸುತ್ತಿದೆ.. ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪುವವರು ಜಾಸ್ತಿಯಾಗಿದ್ದಾರೆ.

ಕೊರೊನಾ ನಂತರ ಹೃದಯಾಘಾತಗಳು ಹೆಚ್ಚಳ;

ಮುಖ್ಯವಾಗಿ ಕರೋನಾ ನಂತರ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. 25 ವರ್ಷ ತುಂಬುವ ಮುನ್ನವೇ ಹೃದಯಾಘಾತದಿಂದ ಸಾಯುತ್ತಿರುವುದು ಆತಂಕಕಾರಿ ಸಂಗತಿ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲಿ ಬೆಳಗಿನ ಜಾವದಲ್ಲಿ ಹೃದಯಅಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚು.. ಇದಕ್ಕೆ ಕಾರಣ ಏನು..? ಬೆಳಗ್ಗೆಯೇ ಏಕೆ ಹೃದಯಾಘಾತವಾಗುತ್ತದೆ..? ತಿಳಿಯೋಣ..

ವ್ಯಾಯಾಮದ ಕೊರತೆಯೇ ಇದಕ್ಕೆ ಕಾರಣವೇ..?;

ಭಾರತೀಯರಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ.. ಇದಕ್ಕೆ ಕಾರಣ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಕೊರತೆ ಅನ್ನೋದು ತಜ್ಞರ ಅಭಿಪ್ರಾಯ.. ಏತನ್ಮಧ್ಯೆ, ಅನೇಕ ಅಧ್ಯಯನಗಳು ಹೃದಯಾಘಾತದ ಅಪಾಯವು ಬೆಳಿಗ್ಗೆ 6 ರಿಂದ 9 ರವರೆಗೆ ಹೆಚ್ಚು ಎಂದು ತಜ್ಞರು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಹೃದಯಾಘಾತದ ಸಾಧ್ಯತೆಗಳು ಹೆಚ್ಚು ಎಂದು ಹಲವಾರು ಅಧ್ಯಯನಗಳು ಈಗಾಗಲೇ ಬಹಿರಂಗಪಡಿಸಿವೆ. ಈ ಸಮಯದಲ್ಲಿ ಹೃದಯಾಘಾತಕ್ಕೆ ಮುಖ್ಯ ಕಾರಣ ಹಾರ್ಮೋನ್ ಕಾರ್ಟಿಸೋಲ್.

ಹಾರ್ಮೋನ್ ಕಾರ್ಟಿಸೋಲ್ ಬೆಳಗಿನ ಹೃದಯಾಘಾತಕ್ಕೆ ಕಾರಣ;

ನಾವು ಬೆಳಗ್ಗೆ ಎದ್ದಾಗ ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಇದಲ್ಲದೆ, ನಮ್ಮ ಬೆಳಗಿನ ರಕ್ತವು ಹೆಚ್ಚು ಹೆಪ್ಪುಗಟ್ಟುವ ಅಂಶಗಳನ್ನು ಒಳಗೊಂಡಿದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಬೆಳಿಗ್ಗೆ ದೇಹದ ಸಿರ್ಕಾಡಿಯನ್ ರಿದಮ್ ಹೃದಯಾಘಾತದ ಅಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಹಲವಾರು ತಜ್ಞರು ಹೇಳಿದ್ದಾರೆ.

ರಕ್ತದೊತ್ತಡ ಹೆಚ್ಚಳ, ರಕ್ತನಾಳಗಳು ಸಂಕುಚಿತ;

ಈ ಸಮಯದಲ್ಲಿ, ರಕ್ತದೊತ್ತಡವು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಮತ್ತು ರಕ್ತನಾಳಗಳು ಮತ್ತಷ್ಟು ಸಂಕುಚಿತಗೊಳ್ಳುತ್ತವೆ. ಇದು ಹೃದಯಕ್ಕೆ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ಫೈಬ್ರಿನೊಜೆನ್ ಎಂಬ ಪ್ರೋಟೀನ್‌ನ ರಕ್ತದ ಮಟ್ಟವು ಬೆಳಿಗ್ಗೆ ಹೆಚ್ಚಾಗಿರುತ್ತದೆ, ಇದು ರಕ್ತ ದಪ್ಪವಾಗಲು ಕಾರಣವಾಗುತ್ತದೆ. ಇವೆಲ್ಲದರಿಂದ ಬೆಳಗಿನ ಜಾವದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.

ಕೊರೊನಾ ಬಂದ ನಂತರ ಹೆಚ್ಚಳ;

ಕೊರೊನಾ ಬಂದು ಹೋದ ನಂತರ ಜನರಲ್ಲಿ ಒತ್ತಡ ಹೆಚ್ಚಾಗಿದೆ.. ಹಲವಾರು ಜನರು ಸುಮಾರು ಎರಡು ವರ್ಷಗಳ ಕಾಲ ವಿಪರೀತ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು… ವ್ಯವಹಾರದಲ್ಲಿ ನಷ್ಟವಾಗಿತ್ತು.. ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದರು.. ಆದ್ರೆ ಇದೀಗ ಎಲ್ಲವೂ ಸುಧಾರಿಸುತ್ತಾ ಬಂದಿದೆಯಾದರೂ, ಒತ್ತಡದ ಜೀವನದಲ್ಲಿ ಹೃದಯದ ಸಮಸ್ಯೆಗಳು ಹೆಚ್ಚಾಗುತ್ತಿವೆ.. ಶಾಲಾ ಮಕ್ಕಳಲ್ಲೂ ಹೃದಯಾಘಾತಗಳು ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದು..

Share Post