CAA ಜಾರಿ ವಿಚಾರ; ಇದು ಸ್ವೀಕಾರಾರ್ಹವಲ್ಲ ಎಂದು ನಟ ವಿಜಯ್!
ಬೆಂಗಳೂರು; ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಿನ್ನೆ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಜಾರಿ ಮಾಡಿದೆ.. ಇದರ ಪರ ಹಾಗೂ ವಿರುದ್ಧವಾದ ಹೇಳಿಕೆಗಳು ಹೊರಬರುತ್ತಿವೆ.. ಕೆಲವರು ಸಿಎಎ ಜಾರಿಯನ್ನು ಸ್ವಾಗತ ಮಾಡುತ್ತಿದ್ದರೆ, ವಿರೋಧ ಪಕ್ಷದ ಕೆಲವರು ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.. ಅದೇ ರೀತಿ ತಮಿಳಿನ ಖ್ಯಾತ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ತಲಪತಿ ವಿಜಯ್ ಕೂಡ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.. ಸಿಎಎ ಸ್ವೀಕಾರ್ಹವಲ್ಲ ಎಂದು ವಿಜಯ್ ಹೇಳಿದ್ದು, ಚರ್ಚೆಗೆ ಕಾರಣವಾಗಿದೆ..
ಕೇಂದ್ರ ನಿರ್ಧಾರಕ್ಕೆ ವಿಜಯ್ ಬೇಸರ;
ಕೇಂದ್ರ ನಿರ್ಧಾರಕ್ಕೆ ವಿಜಯ್ ಬೇಸರ; ಸಿಎಎ ಜಾರಿಗೆ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.. ಸಂಸತ್ತಿನಲ್ಲಿ ಈ ಬಿಲ್ ಮಂಡನೆ ಮಾಡಿದಾಗ ದೇಶಾದ್ಯಂತ ದೊಡ್ಡ ಹೋರಾಟಗಳು ನಡೆದಿದ್ದವು.. ಇದರ ಮಧ್ಯೆ ಈಗ ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿದೆ.. ಈಗಲೂ ಹಲವರು ಇದನ್ನು ವಿರೋಧ ಮಾಡುತ್ತಿದ್ದಾರೆ.. ಹಲವು ಸ್ಪಷ್ಟನೆಗಳ ನಂತರವೂ ಸಿಎಎ ಬೇಡ ಎಂದು ಹಲವರು ಹೇಳುತ್ತಿದ್ದಾರೆ.. ಅದಕ್ಕೆ ಈಗ ನಟ ವಿಜಯ್ ಕೂಡಾ ಸೇರ್ಪಡೆಯಾಗಿದ್ದಾರೆ. ವಿಜಯ್ ಅವರು ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರು ರಾಜಕೀಯಕ್ಕೂ ಬಂದಿದ್ದಾರೆ.. ಇತ್ತೀಚೆಗೆ ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಅವರ ಪಕ್ಷ ಕೂಡಾ ಸಿಎಎಗೆ ವಿರೋಧ ಎಂಬುದನ್ನು ಅವರ ಹೇಳಿದ್ದಾರೆ.
ದೇಶದಲ್ಲಿ ಜನ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಸಿಎಎ ಯಾಕೆ ಬೇಕಿತ್ತು.. ಇದು ದೇಶಕ್ಕೆ ಸ್ವೀಕಾರಾರ್ಹವಲ್ಲ ಎಂದು ತಳಪತಿ ವಿಜಯ್ ಹೇಳಿದ್ದಾರೆ. ಈ ಕಾಯ್ದೆಯನ್ನು ತಮಿಳುನಾಡು ಸರ್ಕಾರ ಜಾರಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ;
ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ; 4 ವರ್ಷದ ಹಿಂದೆ ಜಾರಿಗೆ ತರಲು ನಿರ್ಧರಿಸಿದ್ದ ಸಿಎಎ ಕಾನೂನನ್ನು ಜಾರಿಗೆ ತರಲು ನಿನ್ನೆ ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಧರ್ಮ ನಿಂದನೆ ಮತ್ತು ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಜನರಿಗೆ ಭಾರತದ ಪೌರತ್ವ ನೀಡುವ ಕಾನೂನು ಇದಾಗಿದೆ. ಡಿಸೆಂಬರ್ 31, 2014ರ ಅವಧಿಯೊಳಗೆ ಬಂದಿರೋರಿಗೆ ಸಿಎಎ ಕಾಯ್ದೆ ಅನ್ವಯ ಆಗುತ್ತದೆ. ಅವರು ಸುಲಭವಾಗಿ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದಾಗಿದೆ.