ಶ್ರಾವಣದಲ್ಲಿ ಈ ರಾಶಿಯವರಿಗೆ ರಾಜಯೋಗ!; ಲಕ್ಷ್ಮೀ ಸಂಚಾರದಿಂದ ಅಧಿಕ ಲಾಭ!
ಮೇಷ ರಾಶಿ;
ಮೇಷ ರಾಶಿಯವರಿಗೆ ಶ್ರಾವಣ ಮಾಸ ಅತ್ಯಂತ ಶುಭದಾಯಕ.. ಈ ಬಾರಿ ಮೇಷ ರಾಶಿಯವರಿಗೆ ಈ ತಿಂಗಳಲ್ಲಿ ಹಣದ ಹರಿವು ಹೆಚ್ಚಾಗಿರುತ್ತದೆ.. ಎಲ್ಲಾ ವ್ಯಾಪಾರ ವ್ಯವಹಾರಗಳಲ್ಲೂ ಲಾಭವಾಗಲಿದೆ.. ಮೇಷರಾಶಿಯವರ ಆದಾಯ ಈ ತಿಂಗಳಲ್ಲಿ ಹಲವು ಪಟ್ಟು ಹೆಚ್ಚಾಗಲಿದೆ.. ಉದ್ಯೋಗ ಮಾಡುತ್ತಿರುವವರಿಗೆ ಪ್ರಮೋಷನ್ ಸಿಗಲಿದೆ.. ಉದ್ಯೋಗ ಸ್ಥಳದಲ್ಲಿ ನಿಮಗೆ ಬೇಡಿಕೆ ಹೆಚ್ಚಾಗಲಿದೆ.. ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದ್ದು, ನಿಮಗೆ ಲಾಭ ತಂದುಕೊಡುವ ದೊಡ್ಡ ದೊಡ್ಡ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ..
ವೃಷಭ ರಾಶಿ;
ಈ ಶ್ರಾವಣ ತಿಂಗಳಲ್ಲಿ ವೃಷಭ ರಾಶಿಯವರಿಗೆ ಒತ್ತಡ ಕಡಿಮೆಯಾಗಲಿದೆ.. ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಳ್ಳುವ ಮನಸ್ಥಿತಿ ನಿಮ್ಮದಾಗಲಿದೆ.. ಮನೆ ಕಟ್ಟುವುದು, ವಾಹನ ಖರೀದಿ ಆಸೆ ಇದ್ದವರಿಗೆ ಅದು ನೆರವೇರುವ ಸಮಯವಿದು. ಮಾನಸಿಕ ಸಮಸ್ಯೆಗಳಿಗೂ ಈಗ ಪರಿಹಾರ ಸಿಗಲಿದೆ.. ಉದ್ಯೋಗದಲ್ಲಿದ್ದವರಿಗೂ ಸಾಕಷ್ಟು ಅನುಕೂಲಗಳಾಗಲಿವೆ.. ಆರ್ಥಿಕ ಪ್ರಗತಿ ಹೆಚ್ಚಾಗಲಿದ್ದು, ಆಸ್ತಿ ಖರೀದಿ, ಪಿತ್ರಾರ್ಜಿಯ ಆಸ್ತಿ ನಿಮಗೆ ಬರುವುದು ಎಲ್ಲವೂ ನಡೆಯುತ್ತದೆ..
ಕರ್ಕಾಟಕ ರಾಶಿ;
ಕುಟುಂಬದಲ್ಲಿ ಶುಭ ಕಾರ್ಯಗಳು ಹೆಚ್ಚಾಗಲಿವೆ.. ಆದಾಯ ದುಪ್ಪಟ್ಟಾಗುತ್ತದೆ.. ಶುಭಕಾರ್ಯಗಳಿಗೆ ಹೆಚ್ಚು ಖರ್ಚು ಮಾಡಬೇಕಾದ ಅವಶ್ಯಕತೆ ಬಂದರೂ ಅದಕ್ಕೆ ಹಿಂಜರಿಯುವುದಿಲ್ಲ.. ನಿಮ್ಮ ಮೌಲ್ಯ ಹೆಚ್ಚಾಗಿ, ಹಲವರಿಂದ ಹೊಗಳಿಕೆಗಳು ಬರುತ್ತವೆ.. ಉದ್ಯೋಗದಲ್ಲಿ ಉನ್ನತ ಸ್ಥಾನಗಳು ಸಿಗಲಿವೆ.. ದಾಂಪತ್ಯ ಜೀವನ ಕೂಡಾ ಸುಖಕರವಾಗಿರುತ್ತದೆ..
ಸಿಂಹ ರಾಶಿ;
ಸಿಂಹ ರಾಶಿಯವರಿಗೆ ಶ್ರಾವಣಮಾಸದಲ್ಲಿ ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಸಿಗಲಿದೆ.. ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದರಿಂದ ಲಾಭವಾಗಲಿದೆ.. ಹಠಾತ್ತಾಗಿ ಹಣಕಾಸಿನ ಲಾಭವಾಗಲಿದೆ.. ಆಸೆಗಳೆಲ್ಲಾ ಈಡೇರುತ್ತವೆ.. ಯಾವುದೇ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡರೂ ಅದರಲ್ಲಿ ಪ್ರಗತಿ ಕಾಣಲಿದ್ದೀರಿ.. ಆದಾಯದ ಮೂಗಳು ನಿಮಗೆ ಹೆಚ್ಚಾಗಲಿವೆ.. ಬೇಡವೆಂದರೂ ನಿಮಗಾಗಿ ಹಣ ಹರಿದುಬರಲಿದೆ.. ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ.. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ..
ತುಲಾ ರಾಶಿ;
ತುಲಾರಾಶಿಯವರಿಗೆ ಈಗ ರಾಜಯೋಗ.. ಎಲ್ಲರೂ ನಿಮ್ಮ ಮಾತನ್ನು ಕೇಳುವ ಕಾಲ.. ಯಾವುದೇ ಕ್ಷೇತ್ರದಲ್ಲೇ ಆಗಲಿ ನಿಮಗೆ ಅನಿರೀಕ್ಷತ ಲಾಭ ಸಿಗಲಿದೆ.. ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿವೆ.. ಕೆಲಸದ ಸ್ಥಳದಲ್ಲಿ ಆಗಲೀ, ಮನೆಯಲ್ಲಿ ಆಗಲೀ, ಸಮಾಜದಲ್ಲಾಗಲೀ ಎಲ್ಲಾ ಕಡೆ ಜನ ನಿಮ್ಮ ಮಾತು ಕೇಳುವಂತಾಗುತ್ತಾರೆ.. ವಿಪರೀತ ಆದಾಯ ಬರಲಿದ್ದು, ಅದರಿಂದ ನೀವು ಸಮಾಜಸೇವೆಯಲ್ಲೂ ತೊಡಗಿಸಿಕೊಳ್ಳುತ್ತೀರಿ..
ವೃಶ್ಚಿಕ ರಾಶಿ;
ವೃಶ್ಚಿಕ ರಾಶಿಯವರಿಗೆ ಕೂಡಾ ಅನಿರೀಕ್ಷಿತವಾಗಿ ಧನಾಗಮವಾಗುತ್ತದೆ.. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯುಂಟಾಗಿ ಅನಿರೀಕ್ಷವಾಗಿ ಹೆಚ್ಚಿನ ಲಾಭವಾಗಲಿದೆ.. ಹಣದ ಹರಿವು ಹೆಚ್ಚಾಗಲಿದೆ.. ಹಿಡಿದ ಕೆಲಸವೆಲ್ಲಾ ಕೈಗೂಡುತ್ತದೆ.. ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.. ವಿದೇಶಗಳಿಂದಲೂ ನಿಮಗೆ ಹಣ ಹರಿದುಬರಲಿದೆ..