Astrology

Astrology; ಈ ರಾಶಿಗಳವರಿಗೆ ಇನ್ಮೇಲೆ ಶನಿ ಕೃಪೆ; 10 ತಿಂಗಳು ಮುಟ್ಟಿದ್ದೆಲ್ಲಾ ಚಿನ್ನ!

ಬೆಂಗಳೂರು; ಶನಿ ಅಂದರೆ ಜನ ಹೆದರುತ್ತಾರೆ.. ಶನಿ ಬಡವನನ್ನು ಶ್ರೀಮಂತ ಮಾಡುತ್ತಾನೆ, ಶ್ರೀಮಂತನನ್ನು ಬೀದಿಗೆ ತಳ್ಳುತ್ತಾರೆ.. ಹೀಗಾಗಿ ನಮ್ಮ ಜಾತಕದಲ್ಲಿ ಶನಿ ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ಜನ ನೋಡುತ್ತಾರೆ. ಇದರ ಮೇಲೆ ಜನರ ಬದುಕು ನಿರ್ಧಾರವಾಗುತ್ತೆ ಎಂದು ಭವಿಷ್ಯ, ಜ್ಯೋತಿಷ್ಯವನ್ನು ನಂಬುವವರು ಭಾವಿಸಿದ್ದಾರೆ.. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ ಮುಂದಿನ ತಿಂಗಳಿಂದ ಕೆಲ ರಾಶಿಗಳವರಿಗೆ ಶನಿ ಕೃಪೆ ಆಗಲಿದೆಯಂತೆ. ಮುಂದಿನ ಹತ್ತು ಅವರು ಅವರು ಮುಟ್ಟಿದ್ದೆಲ್ಲಾ ಚಿನ್ನವಂತೆ..! ಹಾಗಾದ್ರೆ ಆ ರಾಶಿಗಳು ಯಾವುವು..? ಅವರಿಗೆ ಏನೆಲ್ಲಾ ಅನುಕೂಲವಾಗಲಿದೆ..? ನೋಡೋಣ ಬನ್ನಿ…

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

ಕುಂಭ ರಾಶಿ;

ಕುಂಭ ರಾಶಿ; ಈ ರಾಶಿಯಲ್ಲಿ ಸದ್ಯ ಶನಿ ಅಸ್ತಮಿಸಿದ್ದಾನೆ. ಮುಂದಿನ ತಿಂಗಳು ಉದಯಿಸಲಿದ್ದು, ಈ ಶನಿ ಕುಂಭ ರಾಶಿಯವರಿಗೆ ಸಾಕಷ್ಟು ಲಾಭ ತಂದುಕೊಡಲಿದ್ದಾರೆ. ಮುಂದಿನ ಹತ್ತು ತಿಂಗಳ ಕಾಲ ಶನಿ ಉದಯ ಸ್ಥಾನದಲ್ಲೇ ಇದ್ದು, ಕುಂಭರಾಶಿಯವರನ್ನು ರಕ್ಷಿಸಲಿದ್ದಾನೆ. ಇದರಿಂದಾಗಿ, ಕುಂಭರಾಶಿಯವರು ಮಾಡಿದ್ದೆಲ್ಲಾ ಕೈಗೂಡುತ್ತದೆ. ಬಾಕಿ ಉಳಿದಿರುವ ಕೆಲಸಗಳೆಲ್ಲಾ ಮುಗಿಯುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಮಯ ಸಿಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಕನ್ಯಾ ರಾಶಿ;

ಕನ್ಯಾ ರಾಶಿ; ಕನ್ಯಾ ರಾಶಿಯವರಿಗೆ ಮುಂದಿನ ಹತ್ತು ತಿಂಗಳು ತುಂಬಾನೇ ಒಳ್ಳೆಯ ದಿನಗಳು. ಏನೇ ಕೆಲಸ ಹಿಡಿದರೂ ಅದು ಕೈಗೂಡುತ್ತದೆ. ಎಲ್ಲದರಲ್ಲೂ ಪ್ರಗತಿ ಕಾಣುತ್ತೀರಿ. ಯಾವುದಾದರೂ ಕೆಲಸಗಳು ಅಂದರೆ ಮನೆ, ಕಟ್ಟಡ, ಬ್ಯುಸಿನೆಸ್‌ ಅರ್ಧದಲ್ಲೇ ನಿಂತಿದ್ದರೆ ಅವೆಲ್ಲಾ ಪೂರ್ತಿಯಾಗುತ್ತವೆ. ನಿಮ್ಮ ಕನಸುಗಳೆಲ್ಲಾ ನನಸಾಗುತ್ತವೆ. ನಿಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಕಾಣಿಸುತ್ತದೆ. ಎಲ್ಲರ ಸಹಕಾರ ಸಿಕ್ಕಿ ನಿಮ್ಮ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

ಮಕರ ರಾಶಿ;

ಮಕರ ರಾಶಿ; ಸಂಕಷ್ಟದಲ್ಲಿದ್ದ ವೃತ್ತಿ ಬದುಕು, ವ್ಯಾಪಾರದಲ್ಲಿ ಉತ್ತಮ ಪ್ರಗತಿಯಾಗಲಿದೆ. ಎಲ್ಲವೂ ಕಾಲಕ್ರಮೇಣ ಸುಧಾರಿಸುತ್ತಾ ಹೋಗುತ್ತದೆ. ಸಾಲವಿದ್ದರೆ ಅದೆಲ್ಲಾ ತೀರುವಷ್ಟು ಹಣ ನಿಮ್ಮ ಜೇಬು ಸೇರುತ್ತದೆ.. ಹಲವಾರು ಅವಕಾಶಗಳು ನೀವಿದ್ದಲಿಗೇ ಹುಡುಕಿಕೊಂಡು ಬರುತ್ತವೆ. ನಿಮಗೆ ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ. ತೀರ್ಥಯಾತ್ರೆಗಳು ಹೆಚ್ಚಾಗಿ ಮಾಡುತ್ತೀರಿ. ಇದರಿಂದ ನಿಮ್ಮಲ್ಲಿ ಮತ್ತಷ್ಟು ಪ್ರಗತಿ ಕಾಣುತ್ತದೆ. ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ಪ್ರಗತಿ ಗ್ಯಾರೆಂಟಿ.

ಮೇಷ ರಾಶಿ;

ಮೇಷ ರಾಶಿ: ಮೇಷ ರಾಶಿಯವರಿಗೆ ಮಾರ್ಚ್‌ನಿಂದ ಉತ್ತಮ ಫಲಗಳು ಸಿಗಲಿವೆ. ಶನಿ ದೇವರು ನಿಮಗೆ ಒಳ್ಳೆಯದು ಮಾಡುತ್ತಾ ಹೋಗುತ್ತಾರೆ. ಕೆಟ್ಟ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತಾರೆ. ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಹೊಸ ಸೈಟ್‌, ಮನೆ ಖರೀದಿ ಮಾಡಲು ಅವಕಾಶವಿದೆ. ಯಾವುದೇ ಬ್ಯುಸಿನೆಸ್‌ ಶುರು ಮಾಡಿದರೂ ಅದರಲ್ಲಿ ಶೀಘ್ರ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಾಗಿ ಖರ್ಚುಗಳು ಕಡಿಮೆಯಾಗಲಿವೆ. ಇದರಿಂದ ಉಳಿತಾಯ ಮಾಡಲು ಅನುಕೂಲವಾಗಲಿದೆ.

ಇದನ್ನೂ ಓದಿ; Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!

ವೃಶ್ಚಿಕ ರಾಶಿ;

ವೃಶ್ಚಿಕ ರಾಶಿ: ನಿಮಗೆ ಶತ್ರುಗಳು ಜಾಸ್ತಿ. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೀರಿ. ಆದ್ರೆ ಮುಂದಿನ ಹತ್ತು ತಿಂಗಳು ನಿಮಗೆ ಶತ್ರು ಬಾಧೆ ಪೂರ್ತಿಯಾಗಿ ಹೋಗುತ್ತದೆ. ಶತ್ರುಗಳೂ ನಿಮ್ಮ ಮಾತು ಕೇಳುವ ಪರಿಸ್ಥಿತಿ ಬರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಈಗ ಪ್ರತಿಫಲ ಸಿಗುತ್ತಾ ಹೋಗುತ್ತದೆ. ಈ ಹಿಂದೆ ನೀವು ಮಾಡಿರುವ ಹೂಡಿಕೆಯಿಂದ ನಿಮಗೆ ದೊಡ್ಡ ಮಟ್ಟದ ಲಾಭ ಸಿಗಲಿದೆ. ಈಗಲೂ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ನಿಮಗೆ ದೊಡ್ಡ ಲಾಭ ನಿಮ್ಮದಾಗುತ್ತದೆ.

ಸಿಂಹ ರಾಶಿ;

ಸಿಂಹ ರಾಶಿ: ನಿಮ್ಮ ರಾಶಿಯಲ್ಲಿ ಶನಿ ಸಂಚಾರ ಮಾಡುವುದರಿಂದ ನಿಮಗೆ ಸಾಕಷ್ಟು ಲಾಭವಾಗಲಿದೆ. ಎಲ್ಲವೂ ಧನಾತ್ಮಕವಾಗಲಿದೆ. ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ  ಕೆಲಸಗಳೂ ಪೂರ್ತಿಯಾಗಲಿವೆ. ಮಾರ್ಚ್‌ ತಿಂಗಳಲ್ಲಿ ಶನಿ ನಿಮ್ಮ ರಾಶಿಯಲ್ಲಿ ಉದಯಿಸಲಿದ್ದು, ನಿಮಗೆ ಸಾಕಷ್ಟು ಒಳ್ಳೆಯದನ್ನು ಮಾಡಲಿದ್ದಾನೆ. ಆಸ್ತಿ ವಿವಾದಗಳು ಬಗೆ ಹರಿದು, ನಿಮ್ಮ ಪೂರ್ವಿಕರ ಆಸ್ತಿ ನಿಮಗೆ ಸಿಗಲಿದೆ. ನೀವು ಶ್ರೀಮಂತರಾಗುವತ್ತ ಹೆಜ್ಜೆ ಇಡಲಿದ್ದೀರಿ.

ಇದನ್ನೂ ಓದಿ; Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?

ವೃಷಭ ರಾಶಿ;

ವೃಷಭ ರಾಶಿ: ನೀವು  ವ್ಯಾಪಾರಿಗಳಾಗಿದ್ದರೆ ದೊಡ್ಡ ಮಟ್ಟದ ಯಶಸ್ಸು ನಿಮಗೆ ಸಿಗಲಿದೆ. ಹಲವಾರು ಆರ್ಥಿಕ ಲಾಭಗಳು ನಿಮ್ಮದಾಗಲಿವೆ.. ಭೂಮಿ ಹಾಗೂ ಆಸ್ತಿ ಖರೀದಿ ಮಾಡುವುದಕ್ಕೆ ನಿಮಗೆ ಅನುಕೂಲವಾಗಲಿದೆ.. ಪಿತ್ರಾರ್ಜಿತ ಆಸ್ತಿ ವಿವಾದಗಳು ಕೂಡಾ ಇತ್ಯರ್ಥವಾಗಲಿವೆ.

Share Post