ಮಳೆಗಾಲದಲ್ಲಿ ಫುಡ್ ಪಾಯ್ಸನ್ ಆಗೋದು ಜಾಸ್ತಿ!; ಆಹಾರ ಸೇವನೆ ಬಗ್ಗೆ ಎಚ್ಚರಿಕೆ ಇರಲಿ..!
ಬೆಂಗಳೂರು; ಮಳೆಗಾಲದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.. ಯಾಕಂದ್ರೆ ಮಳೆ ಹೆಚ್ಚಾದಷ್ಟು ಕಾಯಿಲೆಗಳು ಹೆಚ್ಚಾಗುತ್ತವೆ.. ಅದ್ರಲ್ಲೂ ಕೂಡಾ ಮಳೆಗಾಲದಲ್ಲಿ ಫುಡ್ ಪಾಯ್ಸನ್ ಹೆಚ್ಚಾಗುತ್ತದೆ.. ಹೀಗಾಗಿ ಆದಷ್ಟು ತಂಗಳು ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.. ಮಳೆಗಾಲದ ವಾತಾವರಣಕ್ಕೆ ಆಹಾರ ಬೇಗವಾಗಿ ವಿಷವಾಗಿ ಮಾರ್ಪಡುತ್ತದೆ.. ಇದರಿಂದ ಹೊಟ್ಟೆನೋವು, ಬೇಧಿಯಂತಹ ಸಮಸ್ಯೆಗಳು ಹೆಚ್ಚಾಗುತ್ತವೆ..
ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್ ಎನರ್ಜಿ ನಿಮ್ಮದಾಗುತ್ತೆ!
ಮಳೆಗಾಲದಲ್ಲಿ ಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತವೆ.. ಇದರ ಜೊತೆಗೆ ಮಳೆಯಿಂದಾಗಿ ಕುಡಿಯುವ ನೀರು ಕಲುಷಿತವಾಗುತ್ತದೆ.. ಆಹಾರದಲ್ಲೂ ಕೂಡಾ ಬ್ಯಾಕ್ಟೀರಿಯಾಗಳ ಉತ್ಪತ್ತಿಯಾಗುತ್ತದೆ.. ಇದರಿಂದಾಗಿ ಅತಿಸಾರ, ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತವೆ.. ಅದ್ರಲ್ಲೂ ಕೂಡಾ ಹಿರಿಯ ವಯಸ್ಸಿನವರು ಹೊರಗಡೆ ಊಟ ಮಾಡುವುದು, ನೀರು ಕುಡಿಯುವುದು ಮಾಡಿದರೆ ಸಮಸ್ಯೆ ತಲೆದೋರಬಹುದು.. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ..
ಇದನ್ನೂ ಓದಿ; ಯಾಕೋ ಗುರಾಯಿಸ್ತೀಯಾ ಅಂದಿದ್ದಕ್ಕೆ ನಡೆದೇ ಹೋಯ್ತು ಕೊಲೆ!
ಆದಷ್ಟು ಮನೆಯೂಟವೇ ಮಾಡುವುದು ಒಳ್ಳೆಯದು.. ಇನ್ನು ಬಿಸಿಬಿಸಿ ಅಡುಗೆ ಮಾಡಿಕೊಂಡು ತಿಂದರೆ ಇನ್ನೂ ಒಳ್ಳೆಯದು.. ನೀರು ಫಿಲ್ಟರ್ ಮಾಡಿ, ಬಿಸಿ ಮಾಡಿಕೊಂಡು ಕುಡಿಯುವುದು ಕೂಡಾ ಒಳ್ಳೆಯದು.. ಫ್ರೆಶ್ ಆಹಾರ ಮಳೆಗಾಲಕ್ಕೆ ಉತ್ತಮ. ಇನ್ನು ಹಣ್ಣು ಹಾಗೂ ತರಕಾರಿಗಳನ್ನು ಆದಷ್ಟು ಚೆನ್ನಾಗಿ ತೊಳೆದು ಬಳಸುವುದು ಒಳ್ಳೆಯದು.. ಆಹಾರ ಫ್ರಿಡ್ಜ್‌ನಲ್ಲಿಟ್ಟು ಹೆಚ್ಚು ಕಾಲ ಬಳಸುವುದು ಮಳೆಗಾಲಕ್ಕೆ ಒಳ್ಳೆಯದಲ್ಲ.. ಜೊತೆಗೆ ಡೈರಿ ಉತ್ಪನ್ನಗಳಿಂದ ದೂರವೇ ಇರುವುದು ಒಳ್ಳೆಯದು..
ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!
ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆ ಮಾಡುವುದರಿಂದ ಫುಡ್ ಪಾಯ್ಸನ್ ಆಗುತ್ತದೆ.. ಹೀಗಾಗಿ ಆದಷ್ಟು ಆಹಾರದ ವಿಷಯದಲ್ಲಿ ಶುಚಿತ್ವ ಕಾಪಾಡೋದು ಒಳ್ಳೆಯದು..