CrimeInternational

ಗನ್‌ನಿಂದ ಶೂಟ್‌ ಮಾಡಿಕೊಂಡು 3 ವರ್ಷದ ಬಾಲಕ ದುರ್ಮರಣ!

ಲೂಸಿಯಾನ; ಮೂರು ವರ್ಷದ ಬಾಲಕ ತಂದೆಯ ಗನ್‌ನೊಂದಿಗೆ ಆಟವಾಡುತ್ತಾ, ಮುಖಕ್ಕೆ ಶೂಟ್‌ ಮಾಡಿಕೊಂಡು ಸಾವನ್ನಪ್ಪಿದ್ದಾನೆ.. ಅಮೆರಿಕದ ಲೂಸಿಯಾನ ಬಳಿ ಈ ದುರ್ಘಟನೆ ನಡೆದಿದೆ.. ಬೆಡ್‌ರೂಮ್‌ನಲ್ಲಿ ತಂದೆ ಗನ್‌ ಇಟ್ಟಿದ್ದರು.. ಯಾರೂ ಇಲ್ಲದ ವೇಳೆ ಅದನ್ನು ತೆಗೆದುಕೊಂಡಿರುವ ಬಾಲಕ ತಿಳಿಯದೇ ಟ್ರಿಗರ್‌ ಒತ್ತಿದ್ದಾನೆ.. ಇದರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಚಾಕುವಿನಿಂದ ಇರಿದು ವೈಷ್ಣವಿ ದೇಗುಲದ ಪೂಜಾರಿಯ ಕೊಲೆ!

ಬಾಲಕನ ತಂದೆ ಗನ್‌ ಅನ್ನು ಹಾಸಿಗೆಯ ಮೇಲ್ಬಾಗದ ಶೆಲ್ಫ್‌ನಲ್ಲಿಟ್ಟಿದ್ದರು.. ಬಾಲಕ ಆಟವಾಡುತ್ತಿದ್ದಾನೆಂದು ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು.. ಇದೇ ವೇಳೆ ಬಾಲಕನ ಕೈಗೆ ಗನ್‌ ಸಿಕ್ಕಿದೆ.. ಅದರಿಂದ ಆಟವಾಡುತ್ತಿದ್ದ ಬಾಲಕ ಗನ್‌ ಅನ್ನು ಮುಖಕ್ಕೆ ಇಟ್ಟುಕೊಂಡು ಟ್ರಿಗರ್‌ ಒತ್ತಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್‌ ಎನರ್ಜಿ ನಿಮ್ಮದಾಗುತ್ತೆ!

ಜೋರಾದ ಶಬ್ದ ಕೇಳಿ ಮನೆಯವರು ಓಡಿ ಬಂದು ನೋಡುವಷ್ಟರಲ್ಲಿ ದುರಂತ ನಡೆದುಹೋಗಿದೆ.. ಗನ್‌ ಭದ್ರವಾಗಿ ಎತ್ತಡಿದೆ ಮಕ್ಕಳಿಗೆ ಸಿಗುವಂತೆ ಇಟ್ಟಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ..

Share Post