ಎಸಿನೂ ಬೇಡ, ಫ್ಯಾನ್ ಕೂಡಾ ಬೇಡ; ಈ ಗಿಡಗಳಿದ್ದರೆ ಮನೆ ತಂಪು ತಂಪು ಕೂಲ್ ಕೂಲ್
ಬೇಸಿಗೆಯ ಧಗೆ ಹೆಚ್ಚಾಗಿದೆ.. ಮನೆಯಿಂದ ಹೊರಗೆ ಬರಲಾಗುತ್ತಿಲ್ಲ, ಮನೆಯಲ್ಲೂ ಇರಲಾಗುತ್ತಿಲ್ಲ.. ಎಲ್ಲಿ ನೋಡಿದರೂ ಸೆಕೆ, ಬಿಸಿಲು.. ಮನೆಯಲ್ಲಿದ್ದರೂ ಎಸಿ, ಫ್ಯಾನ್ ಇಲ್ಲದೆ ಇರೋದಕ್ಕೆ ಆಗೋದಿಲ್ಲ.. ಆ ಮಟ್ಟಿಗೆ ಬೇಸಿಗೆ ಜನರನ್ನು ಕಾಡುತ್ತಿದೆ.. ಎಸಿ, ಫ್ಯಾನ್ ಇಲ್ಲದವರ ಪಾಡಂತೂ ಹೇಳತೀರದು..
ಇದನ್ನೂ ಓದಿ; ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಬಿಜೆಪಿ ಅಭ್ಯರ್ಥಿ!
ಎಸಿ, ಫ್ಯಾನ್ ಬೇಡವೇ ಬೇಡ..;
ಬೇಸಿಗೆಯಲ್ಲಿ ಮನೆಯಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್ ಬಳಸುತ್ತಾರೆ.. ಇದರಿಂದ ನಮ್ಮ ದೇಹಕ್ಕೆ ತಂಪು ನೀಡುತ್ತದೆ ನಿಜ.. ಆದ್ರೆ ಇದರಿಂದ ವಿದ್ಯುತ್ ಬಿಲ್ ಜಾಸ್ತಿ ಬರುತ್ತದೆ.. ಜೊತೆಗೆ ಎಸಿ, ಕೂಲರ್ ಜಾಸ್ತಿ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದಲ್ಲ.. ಹೀಗಾಗಿ ಎಸಿ, ಫ್ಯಾನ್ ಬದಲಾಗಿ ಮನೆಯನ್ನು ನೈಸರ್ಗಿಕವಾಗಿ ತಂಪಾಗಿಸಬಹುದು.. ತುಂಬಾ ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ನೈಸರ್ಗಿಕವಾಗಿ ಹಾಗೂ ಆರೋಗ್ಯಕರವಾಗಿ ತಂಪಾಗಿಡಬಹುದು.. ಮನೆಯಲ್ಲಿ ಬೆಳೆಸಬಹುದಾದ ಒಂದಷ್ಟು ಗಿಡಗಳನ್ನು ಬೆಡ್ ರೂಮ್, ಹಾಲ್ ಸೇರಿದಂತೆ ಮನೆಯ ಒಳಗೆ ತಂದು ಜೋಡಿಸಿಟ್ಟರೆ ಸೆಕೆ ಹೋಗಿ, ಮನೆ ತಂಪು ತಂಪು ಕೂಲ್ ಕೂಲ್ ಆಗಲಿದೆ.. ಇದರ ಜೊತೆಗೆ ಮನೆಯ ಅಂದವೂ ಹೆಚ್ಚಾಗುತ್ತದೆ..
ಇದನ್ನೂ ಓದಿ; ಗಂಡ-ಹೆಂಡತಿ ಜಗಳದಲ್ಲಿ ಬಾಮೈದ ಕೊಲೆಯಾಗಿ ಹೋದ!
ಯಾವೆಲ್ಲಾ ಗಿಡಗಳನ್ನು ಮನೆಯಲ್ಲಿಡಬಹುದು..?;
ಅಲೋವೆರಾ; ಅಲೋವೆರಾ ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಬಿಸಿಲು ಅಥವಾ ಟ್ಯಾನಿಂಗ್ ನಿಂದ ರಕ್ಷಿಸುತ್ತದೆ. ಆದ್ದರಿಂದ, ಅಲೋವೆರಾ ಅಥವಾ ಕಲಬಂದ ಸಸ್ಯವನ್ನು ಮನೆಯ ಒಳಾಂಗಣದಲ್ಲಿ ಬೆಳೆಸಬಹುದು. ಹಾಗೆ ಮಾಡುವುದರಿಂದ ಅದು ಒಳಾಂಗಣ ಗಾಳಿಯ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ.
ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್ ಅಪಘಾತದಲ್ಲಿ 11 ಮಂದಿ ದುರ್ಮರಣ!
ಅರೆಕಾ ಪಾಮ್ ಸಸ್ಯ; ಅರೆಕಾ ಪಾಮ್ ಅತ್ಯಂತ ಜನಪ್ರಿಯ ಲಿವಿಂಗ್ ರೂಮ್ ಸಸ್ಯಗಳಲ್ಲಿ ಒಂದಾಗಿದೆ. ಇದು ಅಲಂಕಾರಿಕ ಒಳಾಂಗಣ ಸಸ್ಯವಾಗಿದೆ. ಇದು ನೋಡಲು ಕೂಡಾ ತುಂಬಾನೇ ಸುಂದರ. ಇದು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಒಳಾಂಗಣ ಗಾಳಿಯನ್ನು ನೈಸರ್ಗಿಕವಾಗಿ ತೇವಗೊಳಿಸುತ್ತದೆ. ಇದರಿಂದಾಗಿ ಮನೆಯನ್ನು ಒಳಗಿನಿಂದ ತಂಪಾಗಿಡುವುದರ ಜೊತೆಗೆ, ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ಅನೇಕ ವಿಷಗಳನ್ನು ಗಾಳಿಯಿಂದ ದೂರ ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!
ಚೈನೀಸ್ ಎವರ್ಗ್ರೀನ್; ಚೈನೀಸ್ ಎವರ್ಗ್ರೀನ್ ಸಸ್ಯವು ನೋಡಲು ತುಂಬಾ ಸುಂದರವಾಗಿರುತ್ತದೆ. ಹೆಸರೇ ಸೂಚಿಸುವಂತೆ, ಚೈನೀಸ್ ಎವರ್ಗ್ರೀನ್ ಸಸ್ಯವು ನಿತ್ಯಹರಿದ್ವರ್ಣ ಮತ್ತು ಯಾವಾಗಲೂ ತಂಪಾಗಿರುತ್ತದೆ. ಮನೆ ತುಂಬಾ ಬಿಸಿಯಾಗಿದ್ದರೆ ಈ ಗಿಡಗಳನ್ನು ಬೆಳೆಸಬೇಕು. ಬಿಸಿಗಾಳಿಯನ್ನು ಉಸಿರಾಡಿ ವಾತಾವರಣವನ್ನು ಈ ಗಿಡಗಳು ತಂಪಾಗಿರಿಸುತ್ತವೆ.
ರಬ್ಬರ್ ಗಿಡ; ರಬ್ಬರ್ ಗಿಡ.. ಈ ಗಿಡದಲ್ಲಿ ದೊಡ್ಡ ಎಲೆಗಳಿರುತ್ತವೆ. ಇದು ಹೆಚ್ಚು ತಂಪು ನೀಡುತ್ತದೆ. ಈ ಸಸ್ಯದ ಮಣ್ಣು ತುಂಬಾ ಒದ್ದೆಯಾಗದ ಅಥವಾ ತುಂಬಾ ಒಣಗದ ರೀತಿಯಲ್ಲಿ ನೋಡಿಕೊಳ್ಳಬೇಕು. ನೀರನ್ನು ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ನೀಡಬೇಕು. ಇದು ಮನೆಯನ್ನು ತಂಪಾಗಿಸಲು ತುಂಬಾನೇ ಉಪಯುಕ್ತವಾಗಿದೆ.. ಜೊತೆಗೆ ಮನೆಗೆ ಅಲಂಕಾರಿಕ ಕೂಡಾ ಹೌದು..
ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!
ಸ್ಪೈಡರ್ ಪ್ಲಾಂಟ್; ಸ್ಪೈಡರ್ ಪ್ಲಾಂಟ್ ಎಂಬ ಹೆಸರು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ.. ಆದ್ರೆ ಈ ಸಸ್ಯವನ್ನು ನೀವು ಸುಲಭವಾಗಿ ಬೆಳೆಸಬಹುದು. ನೀವು ಅದನ್ನು ಹೇಗೆ ಇರಿಸಿದರೂ ಆರಾಮವಾಗಿ ಬೆಳೆಯುತ್ತದೆ. ಮನೆಯಲ್ಲಿನ ಶಾಖವನ್ನು ಡಿಮೆ ಮಾಡಲು ಬಯಸುವವರು ಈ ಸಸ್ಯವನ್ನು ಬೆಳೆಸಬಹುದು. ಇದು ಸೆಕೆಯನ್ನು ತಡೆಗಟ್ಟಲು ತುಂಬಾನೇ ಉಪಯುಕ್ತ ಗಿಡವಾಗಿದೆ..
ಪೊಥೋಸ್ ಅಥವಾ ಡೆವಿಲ್ಸ್ ಐವಿ; ಪೊಥೋಸ್ ಅಥವಾ ಡೆವಿಲ್ಸ್ ಐವಿ ಮನಿಪ್ಲಾಂಟ್ ಕುಲದ ಸದಸ್ಯ. ಇದಕ್ಕಾಗಿ ವಿಶೇಷ ಗಮನ ಅಗತ್ಯವಿಲ್ಲ. ಚಿಕ್ಕ ಗಿಡ ನೆಟ್ಟರೆ ತಾನಾಗಿಯೇ ಬೆಳೆಯುತ್ತದೆ. ಎಲೆಗಳು ಹೃದಯ ಆಕಾರದಲ್ಲಿರುತ್ತವೆ. ಇದರಿಂದ ಮನೆಯೂ ತಂಪಾಗಿರುತ್ತದೆ.
ಇದನ್ನೂ ಓದಿ; ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಂಗಳಮುಖಿ ಅಖಾಡಕ್ಕೆ..!