ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!
ಜೇನುತುಪ್ಪವನ್ನು ಬೆಳಗ್ಗೆ ಎದ್ದ ತಕ್ಷಣ ನೀರಿನೊಂದಿಗೆ ಬೆರೆಸಿ ಕೊಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.. ಜೇನುತುಪ್ಪ ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದೂ ವೈದ್ಯರು ಹೇಳುತ್ತಾರೆ.. ಆದ್ರೆ ಅತಿಯಾದರೆ ಅಮೃತವೇ ಆದರೂ ವಿಷವಾಗುತ್ತದೆ ಅನ್ನೋದು ನಿಮಗೆ ಗೊತ್ತಿರಬೇಕು.. ಯಾಕೆಂದ್ರೆ, ಜೇನುತುಪ್ಪ ಅರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡಿದರೂ, ಮಿತಿಮೀರಿ ಅದನ್ನು ಸೇವನೆ ಮಾಡಿದರೆ ಹಲವಾರು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ..
ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!
ಹೆಚ್ಚು ಜೇನು ತಿಂದರೆ ತೂಕ ಹೆಚ್ಚಾಗುತ್ತೆ!
ಜೇನು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.. ಅದೇ ಜೇನು ಹೆಚ್ಚು ತಿಂದರೆ ತೂಕ ಹೆಚ್ಚಾಗುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ.. ಹೌದು ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಅನೇಕ ಜನರು ಜೇನುತುಪ್ಪವನ್ನು ವಿವಿಧ ರೂಪದಲ್ಲಿ ಸೇವಿಸುತ್ತಾರೆ. ಆದರೆ, ಈ ಜೇನುತುಪ್ಪವನ್ನು ಮಿತಿ ಮೀರಿ ಸೇವಿಸುವುದು ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಜೇನುತುಪ್ಪದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜೇನುತುಪ್ವ ಸೇವಿಸಿದರೆ, ನಿಮ್ಮ ದೇಹದ ತೂಕ ಅತಿಬೇಗ ಹೆಚ್ಚಾಗುತ್ತದೆ ಎಂದು ಹಲವು ಅಧ್ಯಯನಗಳು ಹೇಳುತ್ತದೆ.
ಇದನ್ನೂ ಓದಿ; ಸಿಎಂ ಪ್ರಚಾರದ ವೇಳೆ ಭದ್ರತಾಲೋಪವಾಗಿಲ್ಲ; ಪೊಲೀಸ್ ಇಲಾಖೆ ಸ್ಪಷ್ಟನೆ
ದೇಹದ ಉಷ್ಣತೆ ಹೆಚ್ಚಿಸುತ್ತದೆ;
ಜೇನುತುಪ್ಪ ಹೆಚ್ಚಾಗಿ ಸೇವನೆ ಮಾಡಿದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ.. ಇರಿಂದ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.. ನಿತ್ಯ ಜೀವನದಲ್ಲಿ ಹೆಚ್ಚು ಜೇನುತುಪ್ಪವನ್ನು ಸೇವಿಸುತ್ತಾ ಬಂದರೆ, ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದಲ್ಲದೆ, ಹೊಟ್ಟೆ ನೋವು ಕೂಡಾ ಕಾಣಿಸಿಕೊಳ್ಳಬಹುದು. ಜೇನು ತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯ ಉರಿಯೂತದ ಸಮಸ್ಯೆಯನ್ನು ಹೆಚ್ಚಾಗುವ ಸಾಧ್ಯತೆ ಎಂದು ತಜ್ಞರು ಹೇಳುತ್ತಾರೆ. ಜೀರ್ಣಕ್ರಿಯೆಯ ಸಮಸ್ಯೆಗಳು ಕ್ರಮೇಣ ಶುರುವಾಗಲಿದ್ದು, ಅದು ಭೀಕರ ಕಾಯಿಲೆಗೆ ತುತ್ತಾಗಲು ದಾರಿ ಮಾಡಕೊಡುವ ಸಾಧ್ಯತೆ ಇದೆ..
ಇದನ್ನೂ ಓದಿ; ತೆಂಗಿನೆಣ್ಣೆಗೆ ಈ ಪೌಡರ್ ಸೇರಿಸಿ ಹಚ್ಚಿದರೆ ಕೂದಲು ಉದುರಲ್ಲ!
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ;
ಹೆಚ್ಚು ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗುತ್ತದೆ. ಇದರಿಂದ ಮಧುಮೇಹ ಬರುವ ಅಪಾಯವೂ ಇದೆ. ಆದ್ದರಿಂದ ಎಲ್ಲಾ ಆಹಾರ ಮತ್ತು ಪಾನೀಯಗಳಲ್ಲಿ ಜೇನುತುಪ್ಪವನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಜೇನುತುಪ್ಪ ತುಂಬಾ ಹಾನಿಕಾರಕ ಎಂದೂ ಹೇಳಲಾಗುತ್ತದೆ. ಹೆಚ್ಚು ಜೇನುತುಪ್ಪವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಇದು ಅಲರ್ಜಿಯ ಸಮಸ್ಯೆಗಳಿಗೂ ಕಾರಣವಾಗಬಹುದು..
ಇದನ್ನೂ ಓದಿ; ಹೊಸ ಮನೆಗೆ ಹೋಗುವಾಗ ಈ ನಕಾರಾತ್ಮಕ ಶಕ್ತಿ ಕೊಂಡೊಯ್ಯಬೇಡಿ
ಹಲ್ಲುಗಳಿಗೆ ಹಾನಿ ಮಾಡುತ್ತದೆ;
ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ವಾಂತಿ ಮತ್ತು ಭೇದಿ ಉಂಟಾಗುತ್ತದೆ. ಜೇನುತುಪ್ಪವೂ ಹಲ್ಲುಗಳಿಗೆ ಹಾನಿಕಾರಕವಾಗಿದೆ. ನೀವು ಜೇನುತುಪ್ಪವನ್ನು ಸೇವಿಸಿದಾಗ, ಅದು ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಹಲ್ಲುಗಳ ಸುತ್ತಲೂ ಬ್ಯಾಕ್ಟೀರಿಯಾವನ್ನು ಸೃಷ್ಟಿಸುತ್ತದೆ. ಈ ಬ್ಯಾಕ್ಟೀರಿಯಾ ಹಲ್ಲು ಮತ್ತು ಒಸಡುಗಳಿಗೆ ಹಾನಿ ಮಾಡುತ್ತದೆ. ಕ್ರಮೇಣ ಹಲ್ಲು ಕೊಳೆಯುವ ಅಪಾಯವಿದೆ.
ಇದನ್ನೂ ಓದಿ; ಪ್ರತಿಷ್ಠಿತ ಕಂಪನಿ ಕ್ಯಾಂಟೀನ್ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಪತ್ತೆ
ಬಿಸಿ ನೀರಿನ ಜೊತೆ ಕುಡಿಯುವ ಅಭ್ಯಾಸ ಬಿಡಿ;
ಬಹುತೇಕ ಜನರು ಬೆಳಗ್ಗೆ ಸಮಯದಲ್ಲಿ ಬಿಸಿ ನೀರಿನಲ್ಲಿ ಜೇನುತುಪ್ಪ ಬೆರೆಸಿ ಕುಡಿಯುತ್ತಾರೆ.. ಆದ್ರೆ ಈ ಅಭ್ಯಾಸ ತಪ್ಪು.. ಯಾವುದೇ ಕಾರಣಕ್ಕೂ ಬಿಸಿ ನೀರಿನಲ್ಲಿ ಜೇನುತುಪ್ಪ ಹಾಕಬಾರದು.. ಅದರ ಬದಲಿಗೆ ಬೆಚ್ಚನೆಯ ನೀರಿನಲ್ಲಿ ಒಂದು ಟೀ ಸ್ಪೂನ್ ಅಷ್ಟೇ ಜೇನುತುಪ್ಪ ಬೆರೆಸಬೇಕು ಎಂದು ವೈದ್ಯರು ಹೇಳುತ್ತಾರೆ.