NationalPolitics

ಬಿಜೆಪಿ-ಜೆಡಿಎಸ್‌ ಒಕ್ಕಲಿಗ ನಾಯಕರ ಹೊಸತೊಡಕು ಪಾಲಿಟಿಕ್ಸ್‌!

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸರ್ಕಸ್‌ ನಡೆಸುತ್ತಿವೆ.. ಅದ್ರಲ್ಲೂ ಬಿಜೆಪಿ ನಾಯಕರು ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಮೆರೆಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.. ಅದರ ಭಾಗವಾಗಿ ಜಾತಿ ರಾಜಕೀಯ ಜೋರಾಗಿ ನಡೆಯುತ್ತಿದೆ.. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಒಕ್ಕಲಿಗ ಮತಗಳನ್ನು ಒಟ್ಟುಗೂಡಿಸಲು ಬಿಜೆಪಿ ಹಾಗೂ ಜೆಡಿಎಸ್‌ ಒಕ್ಕಲಿಗ ನಾಯಕರು ಮೆಗಾ ಪ್ಲ್ಯಾನ್‌ ರೆಡಿ ಮಾಡಿದ್ದಾರೆ.. ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಇಂದು ಉಭಯ ನಾಯಕರು ಹೊಸತೊಡಕು ಪಾಲಿಟಿಕ್ಸ್‌ ಶುರು ಮಾಡಿದ್ದಾರೆ..

ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್‌ ಅಪಘಾತದಲ್ಲಿ 11 ಮಂದಿ ದುರ್ಮರಣ!

ಆದಿಚುಂಚನಗಿರಿ ಮಠಕ್ಕೆ ಒಕ್ಕಲಿಗ ನಾಯಕರ ಭೇಟಿ;

ಆದಿಚುಂಚನಗಿರಿ ಮಠಕ್ಕೆ ಒಕ್ಕಲಿಗರೆಲ್ಲರೂ ನಡೆದುಕೊಳ್ಳುತ್ತಾರೆ.. ಹೀಗಾಗಿ, ಬಿಜೆಪಿ ಹಾಗೂ ಜೆಡಿಎಸ್‌ ಒಕ್ಕಲಿಗ ನಾಯಕರು ಇಂದು ಆದಿಚುಂಚನಗಿರಿಗೆ ಭೇಟಿ ನೀಡುತ್ತಿದ್ದಾರೆ.. ಶ್ರೀಗಳ ಆಶೀರ್ವಾದ ಪಡೆಯಲಿದ್ದು, ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ಕೊಡಲು ಒಕ್ಕಲಿಗರ ನಾಯಕರು ಭಾರಿ ಪ್ಲ್ಯಾನ್‌ ಮಾಡಿದ್ದಾರೆ..  ಒಕ್ಕಲಿಗ ಸಮುದಾಯದ ರಾಜ್ಯ ನಾಯಕರುಗಳಾದ ಆರ್.ಅಶೋಕ್, ಹೆಚ್.ಡಿ ಕುಮಾರಸ್ವಾಮಿ, ಸಿ.ಎನ್.ಅಶ್ವತ್ಥ್‌ ನಾರಾಯಣ್ ನೇತೃತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸೆಳೆಯುವ ಮೆಗಾ ಪ್ಲ್ಯಾನ್‌ ನಡೆಯುತ್ತಿದೆ.. ಇದಕ್ಕಾಗಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳನ್ನು ಆಧಿಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿ, ಶ್ರೀಗಳ ಆಶೀರ್ವಾದ ಪಡೆಯಲಾಗುತ್ತಿದೆ..

ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!

ಹೆಚ್ಡಿಕೆ ತೋಟದ ಮನೆಯಲ್ಲಿ ಹೊಡತಡಕು ಪಾಲಿಟಿಕ್ಸ್‌;

ಮೊದಲಿಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿರುವ ನಾಯಕರು ಅನಂತರ ಬಿಡದಿಯಲ್ಲಿರುವ ಹೆಚ್ಡಿಕೆ ಅವರ ತೋಟದ ಮನೆಯಲ್ಲಿ ಸೇರಲಿದ್ದಾರೆ.. ಕುಮಾರಸ್ವಾಮಿ ಮನೆಯ ಹೊಸತೊಡಕು ಸಂಭ್ರಮದಲ್ಲಿ ಮುಖಂಡರು ಭಾಗಿಯಾಗಲಿದ್ದು, ಒಕ್ಕಲಿಗ ಮತಗಳನ್ನು ಸೆಳೆಯುವ ವಿಚಾರವಾಗಿ ಮೀಟಿಂಗ್‌ ಮಾಡಲಿದ್ದಾರೆ.. ಇದರಲ್ಲಿ ಎಲ್ಲಾ 14 ಕ್ಷೇತ್ರಗಳ ಅಭ್ಯರ್ಥಿಗಳು, ಒಕ್ಕಲಿಗ ಸಮುದಾಯದ ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು, ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಭಾಗಿಯಾಗಲಿದ್ದಾರೆ.. ಒಕ್ಕಲಿಗರ ಜೊತೆ ನಾವೆಲ್ಲಾ ಒಟ್ಟಾಗಿರುತ್ತೇವೆ ಎಂಬ ಸಂದೇಶ ರವಾನಿಸುವುದು ಈ ಭೇಟಿಯ ಉದೇಶ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!

ಡಿಕೆ ಸಹೋದರರಿಗೆ ಟಾಂಗ್‌ ಕೊಡಲು ಕಸರತ್ತು;

ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರು ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.. ಇವರು ಕೂಡಾ ಒಕ್ಕಲಿಗ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.. ಆದ್ರೆ ಮೊದಲಿನಿಂದಲೂ ಒಕ್ಕಲಿಗರು ಜೆಡಿಎಸ್‌ ಜೊತೆ  ನಿಂತಿದ್ದಾರೆ.. ಇತ್ತೀಚೆಗೆ ಒಕ್ಕಲಿಗರ ಮತಗಳು ಹಂಚಿಹೋಗಿವೆ.. ಆದ್ರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ, ಒಕ್ಕಲಿಗ ಮತಗಳನ್ನು ಜೆಡಿಎಸ್‌ ಹಾಗೂ ಬಿಜೆಪಿ ಕಡೆ ಸೆಳೆಯುವುದಕ್ಕಾಗಿ ಮೆಗಾ ತಂತ್ರಗಾರಿಕೆ ನಡೆದಿದೆ..

ಇದನ್ನೂ ಓದಿ; ಕಿಡ್ನ್ಯಾಪ್ ಮಾಡಿ ದರೋಡೆ; ಮೈಸೂರಿನ 8 ಮಂದಿ ಅರೆಸ್ಟ್

Share Post