ಮೊದಲ ರಾತ್ರಿ ಗಂಡನಿಗೆ ರಾಖಿ ಕಟ್ಟಿದ ಮದುಮಗಳು.!; ಏನಿದು ವಿಚಿತ್ರ..?
ಜೋಧ್‌ಪುರ; ಮೊದಲ ರಾತ್ರಿ ಕೊಠಡಿಯಲ್ಲಿ ನವ ವಧು ತಾಳಿ ಕಟ್ಟಿದ ತನ್ನ ಗಂಡನಿಗೆ ರಾಖಿ ಕಟ್ಟಿರುವ ಘಟನೆ ನಡೆದಿದೆ. ರಾಜಸ್ಥಾನದ ಜೋಧಪುರದಲ್ಲಿ ಈ ಘಟನೆ ನಡೆದಿದೆ. ಹಿರಿಯರ ಆಸೆಯಂತೆ ಮದುವೆ ಮಾಡಿಕೊಂಡ ವಧು, ಮೊದಲ ರಾತ್ರಿ ದಿನ ವರನಿಗೆ ರಾಖಿ ಕಟ್ಟಿ, ತನಗೆ ಈಗಾಗಲೇ ಮದುವೆಯಾಗಿದೆ. ಮೊದಲ ಪತಿಯ ಜೊತೆಗೇ ನನ್ನನ್ನು ಕಳುಹಿಸಿಕೊಡಿ ಎಂದು ಬೇಡಿಕೊಂಡಿದ್ದಾಳೆ. ಆದ್ರೂ, ವರ ಅದನ್ನು ಲೆಕ್ಕಿಸದೇ ವಧುವಿಗೆ ಕಿರುಕುಳ ನೀಡಿದ್ದಾನೆ. ಆದ್ರೂ ಛಲಬಿಡದ ಯುವತಿ ಬಿಡಿಸಿಕೊಂಡು ಬಂದು ಆಸ್ಪತ್ರೆ ಸೇರಿದ್ದಾಳೆ.
ರಾಜಸ್ಥಾನದ ಬಲೇಸರ್ ನ ತರುಣಾ ಶರ್ಮಾ ಎಂಬಾಕೆ ತನ್ನ ಬಾಲ್ಯ ಸ್ನೇಹಿತ ಸುರೇಂದ್ರನನ್ನು ಕೆಲ ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಆದ್ರೆ ಸುರೇಂದ್ರ ಬೇರೆ ಜಾತಿ ಎಂಬ ಕಾರಣಕ್ಕೆ ಪೋಷಕರು ತರುಣಾಳನ್ನು ಬಲವಂತದಿಂದ ಮನೆಗೆ ವಾಪಸ್ ಕರೆತಂದಿದ್ದರು. ಅನಂತರ ಜೀತೇಂದ್ರ ಎಂಬಾತನ ಜೊತೆ ಮದುವೆ ಮಾಡಿಸಿದ್ದರು. ಮೊದಲ ರಾತ್ರಿಯಲ್ಲಿ ತರುಣಾ ಎರಡನೇ ಪತಿ ಜೊತೆ ತನ್ನ ಗೋಳು ತೋಡಿಕೊಂಡಿದ್ದಾಳೆ. ಜೊತೆಗೆ ರಾಖಿ ಕಟ್ಟಿದ್ದಾಳೆ. ಆದರೂ ಆತ ಕಿರುಕುಳ ನೀಡಿದ್ದಾಳೆ. ಕೂಡಲೇ ಆಕೆ ತಪ್ಪಿಸಿಕೊಂಡು ಬಂದು ಆಸ್ಪತ್ರೆ ಸೇರಿದ್ದಾಳೆ. ಜೊತೆಗೆ ತನ್ನ ಸಂಕಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಮೊದಲ ಪತಿಗೆ ಮೊಬೈಲ್ ಕರೆ ಮಾಡಿ ತಾನು ಹೊರಬಂದಿರುವುದಾಗಿಯೂ ತಿಳಿಸಿದ್ದಾಳೆ.
ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದು ಯುವತಿಯ ನೆರವಿಗೆ ಧಾವಿಸಿದ್ದಾರೆ.