ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಂಗಳಮುಖಿ ಅಖಾಡಕ್ಕೆ..!
ವಾರಾಣಸಿ; ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯೂ ಕೂಡಾ ವಾರಾಣಸಿ ಕ್ಷೇತ್ರದಿಂದ ಲೋಕಸಭಾ ಅಖಾಡಕ್ಕಿಳಿಯುತ್ತಿರುವುದು ಗೊತ್ತೇ ಇದೆ.. ಇದೀಗ ಮೋದಿಯವರ ಪ್ರತಿಸ್ಪರ್ಧಿಯಾಗಿ ಮಂಗಳಮುಖಿಯೊಬ್ಬರು ಅಖಾಡಕ್ಕಿಳಿಯುತ್ತಿದ್ದಾರೆ.. ಅಖಿಲ ಭಾರತ ಹಿಂದೂ ಮಹಾಸಭಾದಿಂದ ಮೋದಿ ವಿರುದ್ಧ ಮುಂಗಳಮುಖಿಯನ್ನು ಕಣಕ್ಕಿಳಿಸಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ..
ಇದನ್ನೂ ಓದಿ; ಸಿಗರೇಟು ಸೇದುತ್ತಿದ್ದನ್ನು ನೋಡಿ ಗುರಾಯಿಸಿದ ವ್ಯಕ್ತಿ; ಪ್ರಾಣವನ್ನೇ ತೆಗೆದ ಯುವತಿ!
ತೃತೀಯಲಿಂಗಿ ಹಿಮಾಂಗಿ ಸಖಿ ಕಣಕ್ಕೆ..!
ಅಖಿಲ ಭಾರತ ಹಿಂದೂ ಮಹಾಸಭಾದಿಂದ ವಾರಾಣಸಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ.. ಅದಕ್ಕಾಗಿ ಮಂಗಳಮುಖಿ ಕಿನ್ನರ್ ಮಹಾಮಂಡಲೇಶ್ವರ ಹಿಮಾಂಗಿ ಸಖಿ ಅವರನ್ನು ಆಯ್ಕೆ ಮಾಡಲಾಗಿದೆ.. ಪ್ರಧಾನಿ ಮೋದಿಯವರನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಎಬಿಹೆಚ್‌ಎಂ, ಮಂಗಳಮುಖಿಯನ್ನು ಮೋದಿ ವಿರುದ್ಧ ಕಣಕ್ಕಿಳಿಸಿದೆ..
ಇದನ್ನೂ ಓದಿ; ಧಾರವಾಡದಿಂದ ಅಖಾಡಕ್ಕೆ ಇಳಿಯಲು ದಿಂಗಾಲೇಶ್ವರ ಶ್ರೀ ತೀರ್ಮಾನ; ಪ್ರಹ್ಲಾದ್ ಜೋಶಿಗೆ ಭೀತಿ
ಭಗವತ್ ಕಥಾ ಹೇಳುತ್ತಿರುವ ಮಂಗಳಮುಖಿ;
ಮಂಗಳಮುಖಿ ಕಿನ್ನರ್ ಮಹಾಮಂಡಲೇಶ್ವರ ಹಿಮಾಂಗಿ ಸಖಿ ಹಿಂದೂ ಧರ್ಮವನ್ನು ಪಾಲಿಸುತ್ತಾರೆ.. ಹಿಂದೂ ಧರ್ಮದ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ.. ಇವರು ಐದು ಭಾಷೆಯಲ್ಲಿ ಭಗವತ್ ಕಥಾವನ್ನು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಅವರು ಈ ಮಂಗಳ ಮುಖಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.. ಹಿಮಾಂಗಿ ಸಖಿ ಅವರು ಏಪ್ರಿಲ್10ರೊಳಗೆ ವಾರಣಾಸಿಗೆ ಬರಲಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಬರ್ಬರ ಹತ್ಯೆ; ಅಮಾವಾಸ್ಯೆ ದಿನ ನರಬಲಿ ಶಂಕೆ!
ಪ್ರಚಾರಕ್ಕೆ ಭಾರೀ ರಣತಂತ್ರ;
ಅಖಿಲ ಭಾರತ ಹಿಂದೂ ಮಹಾಸಭಾದಿಂದ ಪ್ರಚಾರಕ್ಕೆ ಭರ್ಜರಿ ಪ್ಲಾನ್ ಮಾಡಲಾಗಿದೆ.. ಹಿಮಾಂಗಿ ಸಖಿ ಅವರನ್ನು ಮನೆ ಮನೆಗೆ ಕರೆದುಕೊಂಡು ಹೋಗಿ ಪ್ರಚಾರ ಮಾಡಲು ನಿರ್ಧಾರ ಮಾಡಲಾಗಿದೆ.. ಹಿಂದೂ ಧರ್ಮದ ಬಗ್ಗೆ ಅಪಾರ ಭಕ್ತಿಭಾವ ಹೊಂದಿರುವ ಈ ಮಂಗಳಮುಖಿ, ಈ ಭಾಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ.. ಅದನ್ನು ಬಳಸಿಕೊಂಡು ಮಂಗಳಮುಖಿಯನ್ನು ಗೆಲ್ಲಿಸಲು ಅಖಿಲ ಭಾರತ ಹಿಂದೂ ಮಹಾಸಭಾದವರು ಮೋದಿ ವಿರುದ್ಧ ಕಣಕ್ಕಿಳಿಸಿದ್ದಾರೆ..
ಇದನ್ನೂ ಓದಿ; ರಸ್ತೆಯಲ್ಲೇ ಹೊತ್ತಿ ಉರಿದ ಕಾರು; ಕೊಡಗಿನಲ್ಲಿ ಪಲ್ಟಿ ಹೊಡೆದ ಬಸ್!
ನಿನ್ನೆ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ;
ಎಬಿಹೆಚ್ಎಮ್ ರಾಜ್ಯಾಧ್ಯಕ್ಷ ರಿಷಿ ಕುಮಾರ್ ತ್ರಿವೇದಿ ನಿನ್ನೆ ಉತ್ತರ ಪ್ರದೇಶದ 20 ಲೋಕ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.. ಇದರಲ್ಲಿ ವಾರಾಣಸಿಯಲ್ಲಿ ತೃತಿಯ ಲಿಂಗಿ ಹಿಮಾಂಗಿ ಸಖಿ ಅವರಿಗೆ ಟಿಕೆಟ್ ನೀಡಲಾಗಿದೆ.