NationalPolitics

ಪ್ರಚಾರದ ವೇಳೆ ಮಹಿಳೆಗೆ ಕಿಸ್‌ ಕೊಟ್ಟ ಬಿಜೆಪಿ ಅಭ್ಯರ್ಥಿ!

ಪಶ್ಚಿಮ ಬಂಗಾಳ; ಲೋಕಸಭಾ ಚುನಾವಣೆ ಕಾವೇರುತ್ತಿದೆ.. ಎಲ್ಲೆಡೆ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.. ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ನಾನಾ ತಂತ್ರಗಾರಿಕೆ ನಡೆಸುತ್ತಿದ್ದಾರೆ.. ಈ ವೇಳೆ ಅಭ್ಯರ್ಥಿಗಳು ಕೆಲವೊಂದು ಯಡವಟ್ಟುಗಳನ್ನೂ ಮಾಡುತ್ತಾರೆ.. ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿಯೊಬ್ಬರು ಇದೇ ರೀತಿಯ ಯಡವಟ್ಟು ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಗಂಡ-ಹೆಂಡತಿ ಜಗಳದಲ್ಲಿ ಬಾಮೈದ ಕೊಲೆಯಾಗಿ ಹೋದ!

ಮಹಿಳೆಗೆ ಕಿಸ್‌ ಕೊಟ್ಟ ಬಿಜೆಪಿ ಅಭ್ಯರ್ಥಿ;

ಮಾಲ್ಡಾ ಉತ್ತರ ಲೋಕಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಸಂಸದ ಖಗೇನ್‌ ಮುರ್ಮು ಅವರು ಎರಡನೇ ಬಾರಿ ಆಯ್ಕೆ ಬಯಸಿದ್ದಾರೆ.. ಇದಕ್ಕಾಗಿ ಅವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.. ಈ ವೇಳೆ ಅವರು ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.. ಚಂಚಲ್‌ನ ಸಿಹಿಪುರ್ ಗ್ರಾಮದಲ್ಲಿ ಖಗೇನ್‌ ಮುರ್ಮು ಅವರು, ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು.. ಈ ವೇಳೆ ಖಗೇನ್‌ ಮುರ್ಮು ಅವರಿಗೆ ಅದೇನನಿಸಿತೊ ಏನೋ ಮನೆ ಬಳಿ ನಿಂತಿದ್ದ ಮಹಿಳೆಯೊಬ್ಬರನ್ನು ಹಿಡಿದು ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.. ಈ ವಿಡಿಯೋ ಹಾಗೂ ಫೋಟೋಗಳನ್ನು ಎಲ್ಲೆಡೆ ವೈರಲ್‌ ಆಗುತ್ತಿದ್ದು, ವಿವಾದಕ್ಕೂ ಕಾರಣವಾಗಿವೆ..

ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್‌ ಅಪಘಾತದಲ್ಲಿ 11 ಮಂದಿ ದುರ್ಮರಣ!

ಟಿಎಂಸಿ ನಾಯಕರಿಂದ ಖಂಡನೆ;

ಪಶ್ಚಿಮ  ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ಬಿಗ್‌ ಫೈಟ್‌ ಇದೆ.. ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಎಂದು ಟಿಎಂಸಿ ನಾನಾ ತಂತ್ರಗಾರಿಕೆ ನಡೆಸುತ್ತಿದೆ.. ಹೀಗಿರುವಾಗಲೇ ಬಿಜೆಪಿ ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿರುವುದು ಟಿಎಂಸಿ ಪಕ್ಷಕ್ಕೆ ಅಸ್ತ್ರವಾಗಿದೆ.. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಇಂತಹ ಕೆಲಸ ಮಾಡೋದಕ್ಕೆ ಲಾಯಕ್ಕು ಎಂದು ಕಿಡಿಕಾರಲಾಗುತ್ತಿದೆ.. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರ ದೊಡ್ಡ ಸಂಚಲನ ಮೂಡಿಸಿದೆ..

ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!

ಬಿಜೆಪಿಗರು ಮಹಿಳಾ ವಿರೋಧಿಗಳು ಎಂದ ಟಿಎಂಸಿ;

ಟಿಎಂಸಿ ನಾಯಕರೊಬ್ಬರು ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರ.. ಮಹಿಳಾ ಕುಸ್ತಿಪಟುಗಳಿಗೆ ಲೈಗಿಂಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕವರೆಗೆ ಬಿಜೆಪಿಯಲ್ಲಿದ್ದಾರೆ.. ಬಿಜೆಪಿಯಲ್ಲಿ ಇಂತಹ  ಮಹಿಳಾ ವಿರೋಧಿ ರಾಜಕಾರಣಿಗಳೇನೂ ಕೊರತೆಯಿಲ್ಲ ಎಂದು ಕಿಡಿಕಾರಿದ್ದಾರೆ. ನಾರಿ ಕಾ ಸಮ್ಮಾನ್​ನಲ್ಲಿ ಮೋದಿ ಕಾ ಪರಿವಾರ್​ ತೊಡಗಿಸಿಕೊಂಡಿರೋದು ಹೀಗೆ ಎಂದು ಲೇವಡಿ ಮಾಡಲಾಗಿದೆ.

ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!

ಮಹಿಳೆ ನನಗೆ ತಾಯಿ, ಜನರು ದೇವರು ಎಂದ ಬಿಜೆಪಿ ಅಭ್ಯರ್ಥಿ;

ಆದ್ರೆ ಕಿಸ್‌ ಕೊಟ್ಟ ಬಿಜೆಪಿ ಅಭ್ಯರ್ಥಿ ಈ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ.. ನಾನು ಆ ಉದ್ದೇಶದಿಂದ ಕಿಸ್‌ ಮಾಡಲಿಲ್ಲ.. ಎಲ್ಲಾ ಮಹಿಳೆಯರೂ ನನಗೆ ತಾಯಿಯರಿದ್ದಂತೆ.. ನಾನು ಮಹಿಳೆಯರನ್ನು ಗೌರವಿಸುತ್ತೇನೆ.. ಗೌರವ ಸೂಚಕವಾಗಿ ಪ್ರೀತಿಯಿಂದ ಕಿಸ್‌ ಮಾಡಿದ್ದೇನೆ..  ಪ್ರತಿ ಕುಟುಂಬದಲ್ಲಿ ತಾಯಿ ಮತ್ತು ಹೆಣ್ಣು ಮಕ್ಕಳಿದ್ದು, ಎಲ್ಲರೂ ಮಕ್ಕಳನ್ನು ಪ್ರೀತಿಸ್ತಾರೆ. ಆ ಮಹಿಳೆ ನನಗೆ ತಾಯಿ ಇದ್ದಂತೆ, ಜನರು ನನಗೆ ದೇವರಿದ್ದಂತೆ. ಬಿಜೆಪಿ ಎಲ್ಲಾ ಮಹಿಳೆಯರನ್ನು ಗೌರವಿಸುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಮುರ್ಮು ಸಮಜಾಯಿಷಿ ನೀಡಿದಾರೆ.

ಇದನ್ನೂ ಓದಿ; ಪ್ರತಿಷ್ಠಿತ ಕಂಪನಿ ಕ್ಯಾಂಟೀನ್ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಪತ್ತೆ

 

Share Post