ಮಾನಸಿಕ ಒತ್ತಡ ಹೆಚ್ಚಾಗಿದೆಯೇ..?; ಅದರಿಂದ ಹೊರಬರೋದು ಹೇಗೆ..?
ಬೆಂಗಳೂರು; ಮಾನಸಿಕ ಒತ್ತಡದಿಂದ ಹೊರಬರುವುದು ಇನ್ನೊಬ್ಬರು ಹೇಳುವಷ್ಟು ಸುಲಭವಲ್ಲ. ಹಾಗಂತ ತೀರಾ ಕಷ್ಟವೂ ಅಲ್ಲ. ಆದರೆ, ಮಾನಸಿಕ ಒತ್ತಡವಿದೆ ಅಂದುಕೊಳ್ಳುತ್ತಲೇ ಜೀವನ ಮಾಡುವುದು ತಪ್ಪು. ಸಾಧ್ಯವಾದಷ್ಟು ಪಾಸಿಟಿವ್ ಎನರ್ಜಿ ಇರುವಂಥವರ ಜತೆ ಸಖ್ಯ ಬೆಳೆಸಿಕೊಳ್ಳುವುದು ಉತ್ತಮ. ಹಾಗೆಯೇ ಸಾಧ್ಯವಾದಷ್ಟು ಯೋಗ ಮಾಡಿ. ನಿಮಗಿಷ್ಟವಾದ ಸಂಗೀತ ಕೇಳಬಹುದು. ಸಂಗೀತವೆಂದರೆ ಎಲ್ಲವೂ ಅಲ್ಲ, ನಿಮ್ಮ ಮನಸ್ಸು ಮೆಲಕು ಹಾಕುವಂಥದ್ದು, ಅದನ್ನು ನೀವು ಕೇಳುತ್ತಿದ್ದರೆ ಇಡೀ ಜಗತ್ತನ್ನೇ ಮರೆಯುವಂತಿರಬೇಕು. ಕಿರಿಕಿರಿಯಾದ ಸಂಗೀತ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಸಾಧ್ಯವಾದಷ್ಟು ಕೆಟ್ಟ ಸುದ್ದಿಗಳತ್ತ ಗಮನ ಕೊಡಬೇಡಿ. ನಿಮಗೆ ಕಾಡುತ್ತಿರುವ ಚಿಂತೆ ಬಗ್ಗೆ ಇಂಟರ್ನೆಟ್ ನಲ್ಲಿ ಹೆಚ್ಚು ಸರ್ಚ್ ಮಾಡಬಾರದು. ಕಚೇರಿಯ ಕೆಲಸದಿಂದ ಒತ್ತಡ ಕಾಡುತ್ತಿದ್ದರೆ, ನಿಮ್ಮ ಮೇಲಧಿಕಾರಿ ಬಳಿ ಮಾತನಾಡಿ. ಕಚೇರಿಯ ನಿಮ್ಮ ಕಷ್ಟಕ್ಕೊಂದು ಪರಿಹಾರ ಕಂಡುಕೊಳ್ಳಿ. ಸಾಧ್ಯವಾದಷ್ಟು ಮಾತನಾಡಿ, ಮನಸ್ಸಿನಲ್ಲೇ ಎಲ್ಲವನ್ನೂ ಉಳಿಸಿಕೊಳ್ಳಬೇಡಿ. ನಿಮ್ಮ ಪತ್ನಿ ಅಥವಾ ಪತಿ, ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ… ಹೀಗೆ ನಿಮಗೆ ಸನಿಹವಿರುವವರ ಬಳಿ ಮಾತನಾಡಿ… ನೀವು ನಂಬುವ ದೇವರ ಪ್ರಾರ್ಥಿಸಿ. ಒಂದಷ್ಟು ಹೊತ್ತು ಧ್ಯಾನ ಮಾಡಿ…
ಮಾನಸಿಕ ಒತ್ತಡದಿಂದ ಹೊರಬಲು ಏನು ಮಾಡಬೇಕು..?
೧. ಕಷ್ಟ ಕೊಡುವಂತಹ ವ್ಯಕ್ತಿಯನ್ನು ಅಥವಾ ವ್ಯಕ್ತಿಗಳನ್ನು ದೂರದಲ್ಲಿ ಇಡಬೇಕು. (ದುಷ್ಟರಿಂದ ದೂರ ಇರಬೇಕು).
೨. ಕಷ್ಟಕರವಾದ ಸಮಸ್ಯೆಯಿಂದ ಹೇಗೆ ಹೊರಗಡೆಗೆ ಬರಬೇಕು ಎಂಬ ವಿಧಾನವನ್ನು ಕಂಡುಹಿಡಿಯಬೇಕು.
೩. ಸ್ವಲ್ಪ ಹೊತ್ತು ದೇವರ ಧ್ಯಾನ ಮಾಡಬಹುದು (ನೀವು ಆಸ್ತಿಕರು ಆಗಿದ್ದರೆ).
೪. ಕಾಲಕಾಲಕ್ಕೆ ಊಟ, ತಿಂಡಿಗಳನ್ನು ಸರಿಯಾಗಿ ಸೇವಿಸಿ, ನಿದ್ದೆಯನ್ನು ಚೆನ್ನಾಗಿ ಮಾಡಿ, ಮಲಗಿ ಎದ್ದರೆ, ಮನಸ್ಸಿಗೆ ನೆಮ್ಮದಿ ಸಿಗಬಹುದು.
೫. ಮನೋರಂಜನೆ ಇರಬೇಕು – ಬಿಡುವಿನ ಸಮಯದಲ್ಲಿ ಹಾಡುಗಳನ್ನು ಕೇಳಬಹುದು, ಅಥವಾ ಚಲನಚಿತ್ರ, ಧಾರಾವಾಹಿಗಳನ್ನು ನೋಡಬಹುದು.
೬. ಮನೆಯಲ್ಲಿ ಅಥವಾ ಕಂಪ್ಯೂಟರ್ / ಸ್ಮಾರ್ಟ್ ಫೋನ್ ಗಳಲ್ಲಿ ಚಿಕ್ಕ ಮಕ್ಕಳ ಹಾಗೆ ಆಟವಾಡಬಹುದು.
೭. ಒಂದೇ ಸಮನೆ ಓದುವುದು ಅಥವಾ ಕೆಲಸವನ್ನು ಜಾಸ್ತಿ ಹೊತ್ತು ಮಾಡಬಾರದು.
೮. ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕಬಾರದು.
೯. ಪ್ರವಾಸಕ್ಕೆ ಹೋಗಿ ಬರಬಹುದು, ಒಂದೇ ಊರಿನಲ್ಲಿ ಬದುಕುವುದು ಕಷ್ಟ ಆಗಬಹುದು.
೧೦. ಹಾಸ್ಯ ಚಟಾಕುಗಳು, ಅಥವಾ ಉದಯ ಕಾಮೆಡಿ ಚಾನಲ್ ಗಳನ್ನು ನೋಡಿದರೆ ಮನಸ್ಸಿಗೆ ಮುದ ನೀಡುತ್ತದೆ.
೧೧. ನಿಮ್ಮ ಸ್ನೇಹಿತರು ಅಥವಾ ಬಂಧು ಬಳಗ ಜನರ ಜೊತೆಗೆ ಬೆರೆತರೆ ಕೆಲವು ಒಳ್ಳೆಯ ಸಲಹೆಗಳನ್ನು ಅವರು ನಿಮಗೆ ಸೂಚಿಸುತ್ತಾರೆ.
೧೨. ತಾಳಲಾರದ ಮಾನಸಿಕ ಒತ್ತಡವು ಬಹಳ ಕಾಲದಿಂದ ಇದ್ದು, ಆ ಒತ್ತಡವು ಕಡಿಮೆ ಆಗದಿದ್ದರೆ, ಮನೋತಜ್ಞರಿಂದ ಪರೀಕ್ಷೆ ಮಾಡಿಸಿಕೊಂಡು, ಅವರ ಸಲಹೆಯಂತೆ ಔಷಧಿಗಳನ್ನು ಪಡೆಯಬಹುದು.
೧೩. “ಆಂಟಿ ಡಿಪ್ರೆಸ್ಸೆಂಟ್ಸ್” ಔಷಧಿಗಳನ್ನು ವೈದ್ಯರ ಮೂಲಕ ಕೇಳಿ ತೆಗೆದುಕೊಳ್ಳಬೇಕು.
೧೪. “ಮೆಡಿಕಲ್ ಕೌನ್ಸೆಲಿಂಗ್” ನಿಂದ ಯಾವುದೇ ರೀತಿಯ ಮಾನಸಿಕ ಒತ್ತಡವನ್ನು, ವೈದ್ಯಕೀಯ ತಜ್ಞರ ಸಲಹೆಯಿಂದ ಸರಿಪಡಿಸಕೊಳ್ಳಬಹುದು.