Politics

ಶಿವಮೊಗ್ಗ ಲೋಕಸಭಾ; ಈಶ್ವರಪ್ಪರನ್ನು ಗೆಲ್ಲಿಸಿಬಿಡ್ತಾರಾ ಶಿವಮೊಗ್ಗದ ಜನ..?

ಶಿವಮೊಗ್ಗ; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳು ಕಣದಲ್ಲಿದ್ದಾರೆ.. ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾದರೆ, ಕಾಂಗ್ರೆಸ್‌ನಿಂದ ಎಸ್‌.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್‌ ಹುರಿಯಾಳು.. ಇವರಿಬ್ಬರೇ ಅಖಾಡದಲ್ಲಿದ್ದಿದ್ದರೆ ರಾಘವೇಂದ್ರ ಗೆಲುವು ಸುಲಭವಾಗುತ್ತಿತ್ತೇನೋ.. ಆದ್ರೆ, ಮಧ್ಯ ಬಿಜೆಪಿಯ ಹಿರಿಯ ಕೆ.ಎಸ್‌.ಈಶ್ವರಪ್ಪ ಬಂದಿದ್ದಾರೆ.. ತಮ್ಮ ಮಗ ಕಾಂತೇಶ್‌ಗೆ ಹಾವೇರಿಯಿಂದ ಬಿಜೆಪಿ ಟಿಕೆಟ್‌ ತಪ್ಪಿಸಲಾಗಿದೆ ಎಂಬ ಕಾರಣಕ್ಕೆ ನೇರವಾಗಿ ಈಶ್ವರಪ್ಪ ಅವರೇ ಶಿವಮೊಗ್ಗದಲ್ಲಿ ಕಣಕ್ಕಿಳಿದಿದ್ದಾರೆ.. ಹೀಗಾಗಿ ಶಿವಮೊಗ್ಗದಲ್ಲಿ ಈಗ ತ್ರಿಕೋನ ಸ್ಪರ್ಧೆ…

ಇದನ್ನೂ ಓದಿ; ಗಾಲಿ ಜನಾರ್ದನರೆಡ್ಡಿ ಬಿಜೆಪಿ ಸೇರ್ಪಡೆ; ಬಳ್ಳಾರಿ ಪ್ರವೇಶಕ್ಕೆ ಅವಕಾಶ ಸಿಗುತ್ತಾ..?

ಲಿಂಗಾಯತ, ಹಿಂದುಳಿದ ಮತಗಳನ್ನು ನಂಬಿರುವ ರಾಘವೇಂದ್ರ;

ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರು ಈಗಾಗಲೇ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ.. ಬಂಗಾರಪ್ಪ ಅವರನ್ನು ಒಂದು ಬಾರಿ ಹಾಗೂ ಮಧು ಬಂಗಾರಪ್ಪ ಅವರನ್ನು ಎರಡು ಬಾರಿ ಸೋಲಿಸಿದ್ದಾರೆ.. ಈಗ ನಾಲ್ಕನೇ ಬಾರಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ… ಅಭಿವೃದ್ಧಿ ವಿಚಾರದಲ್ಲಿ ನೋಡೋದಾದರೆ ಹಿಂದೆಂದೂ ನಡೆಯದಂತಹ ಅಭಿವೃದ್ಧಿ ರಾಘವೇಂದ್ರ ಅವರ ಕಾಲದಲ್ಲಿ ನಡೆದಿದೆ.. ಹೀಗಾಗಿ ಗೀತಾ ಶಿವರಾಜ್‌ ಕುಮಾರ್‌ ಅವರ ವಿರುದ್ಧ ರಾಘವೇಂದ್ರ ಅವರಿಗೆ ಗೆಲುವು ಸುಲಭ ಎಂದೇ ಹೇಳಲಾಗುತ್ತಿತ್ತು… ಯಾಕಂದ್ರೆ ಶಿವಮೊಗ್ಗ ಕ್ಷೇತ್ರದಲ್ಲಿರುವ ಲಿಂಗಾಯತ ಮತಗಳು, ಬ್ರಾಹ್ಮಣ ಮತಗಳು ಹಾಗೂ ಹಿಂದುಳಿದ ವರ್ಗಗಳ ಮತಗಳು ರಾಘವೇಂದ್ರ ಅವರ ಕೈಹಿಡಿಯಲಿವೆ ಎಂದು ಹೇಳಲಾಗುತ್ತಿತ್ತು.. ಆದ್ರೆ ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದ ಈಶ್ವರಪ್ಪ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ.. ಇದು ರಾಘವೇಂದ್ರಗೆ ತಲೆನೋವು ತರಿಸಿದೆ..

ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಡಾ.ಕೆ.ಸುಧಾಕರ್‌ ಪಸ್ಲ್‌ ಏನು..? ಮೈನಸ್‌ ಏನು..?

ಪ್ರಖರ ಹಿಂದುತ್ವವಾದಿ ಕೆ.ಎಸ್‌.ಈಶ್ವರಪ್ಪ;

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಒಂದೇ ಬಾರಿಗೆ ರಾಜಕೀಯಕ್ಕೆ ಬಂದಿದ್ದು.. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಇಬ್ಬರ ಪಾತ್ರವೂ ದೊಡ್ಡ ಮಟ್ಟದಲ್ಲಿದೆ… ಇನ್ನು ಬಿಜೆಪಿ ಹಿಂದುತ್ವದ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದೆ.. ಆದ್ರೆ ಯಡಿಯೂರಪ್ಪ ಆಗಲೀ, ಅವರ ಪುತ್ರರಾಗಲೀ ಹಿಂದುತ್ವ ಅಥವಾ ಹಿಂದುತ್ವದ ಪರ ಹೋರಾಟ ಅಂತ ಬಂದಾಗ ಧೈರ್ಯವಾಗಿ ಮುನ್ನುಗ್ಗಿದ್ದು ಕಡಿಮೆ… ಯಾರನ್ನೂ ಎದುರು ಹಾಕಿಕೊಳ್ಳದ ರೀತಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಮಕ್ಕಳು ರಾಜಕೀಯ ಮಾಡಿಕೊಂಡು ಬಂದಿದ್ದಾರೆ.. ಅವರ ದೊಡ್ಡ ಬಲ ಲಿಂಗಾಯತ ಸಮುದಾಯ.. ಆದ್ರೆ ಈಶ್ವರಪ್ಪ ಅವರು ಪ್ರಖರ ಹಿಂದುತ್ವವಾದಿ.. ಅವರು ಹಿಂದುತ್ವ, ಹೋರಾಟ ಅಂತ ಬಂದಾಗ ಯಾವಾಗಲೂ ಮುಂದಿರುತ್ತಾರೆ… ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ಆದಾಗ ಈಶ್ವರಪ್ಪ ಅವರೇ ಮುಂದೆ ನಿಂತು ಹೋರಾಟ ನಡೆಸಿದ್ದಕ್ಕೆ ಹಲವಾರು ಉದಾಹರಣೆಗಳಿವೆ.. ಹೀಗಾಗಿ, ಬಂಡಾಯ ಅಭ್ಯರ್ಥಿಯಾಗಿರುವ ಈಶ್ವರಪ್ಪ ಅವರನ್ನು ಹಿಂದುತ್ವವಾದಿಗಳು ಕೈಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; Loksabha; ಮೈಸೂರು ಗೆಲ್ಲಲು ʻಸಿದ್ಧʼ ಸೂತ್ರ; ʻಲಕ್ಷ್ಮಣʼನ ಗೆಲ್ಲಿಸಲು ʻರಾಮʼಬಾಣ!

ಗೆದ್ದು ಬಿಜೆಪಿ ಸೇರುತ್ತೇನೆ ಎನ್ನುತ್ತಿರುವ ಈಶ್ವರಪ್ಪ;

ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದರೂ, ನಾನು ಬಿಜೆಪಿಯಿಂದ ದೂರ ಎಂದು ಹೇಳುತ್ತಿಲ್ಲ.. ಮೋದಿ ಅಥವಾ ಬಿಜೆಪಿ ಹೈಕಮಾಂಡ್‌ ವಿರೋಧಿಯೂ ಅಲ್ಲ ಎನ್ನುತ್ತಿದ್ದಾರೆ.. ನನ್ನ ಹೋರಾಟ ಯಡಿಯೂರಪ್ಪ ಕುಟುಂಬದ ವಿರುದ್ಧ ಎಂಬ ಮಾತನ್ನು ಈಶ್ವರಪ್ಪ ಪುನರುಚ್ಚರಿಸುತ್ತಿದ್ದಾರೆ.. ನಾನು ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುತ್ತೇನೆ.. ಗೆದ್ದ ಮೇಲೆ ಮತ್ತೆ ಬಿಜೆಪಿ ಸೇರುತ್ತೇನೆ.. ಬಿಜೆಪಿಯನ್ನು ಸೋಲಿಸೋದು ನನ್ನ ಗುರಿಯಲ್ಲ.. ಯಡಿಯೂರಪ್ಪ ಕುಟುಂಬವನ್ನು ಸೋಲಿಸೋದು ನನ್ನ ಗುರಿ ಅಂತ ಈಶ್ವರಪ್ಪ ಹೇಳುತ್ತಿದ್ದಾರೆ.. ಹೀಗಾಗಿ, ಬಿಜೆಪಿ ಕಾರ್ಯಕರ್ತರು ಈಶ್ವರಪ್ಪರನ್ನು ಬಿಜೆಪಿ ವಿರೋಧಿ ಎಂದು ಭಾವಿಸುವುದು ಕಡಿಮೆ.. ಹೀಗಾಗಿ, ಸದಾ ಬಿಜೆಪಿ ಕಾರ್ಯಕರ್ತರ ಹೋರಾಟದಲ್ಲಿ ಮುಂದಿರುವ, ಕಾರ್ಯಕರ್ತರಿಗೆ ತೊಂದರೆಯಾದರೆ ಅವರ ಬೆಂಬಲಕ್ಕೆ ನಿಲ್ಲುವ ಈಶ್ವರಪ್ಪ ಕಡೆ ಬಿಜೆಪಿ ಕಾರ್ಯಕರ್ತರು ಹೆಚ್ಚು ಒಲವು ತೋರಿಸಿದರೂ ಅಚ್ಚರಿ ಇಲ್ಲ..

ಇದನ್ನೂ ಓದಿ; ರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ!

ಈಡಿಗ ಮತಗಳನ್ನು ನಂಬಿಕೊಂಡಿರುವ ಗೀತಾ ಶಿವರಾಜ್‌ಕುಮಾರ್‌;

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು ಬಿಟ್ಟರೆ ಈಡಿಗ ಮತಗಳು ಹೆಚ್ಚಿವೆ.. ಸೊಬರ, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಈಡಿಗ ಮತಗಳು ಹೆಚ್ಚಿವೆ.. ಹೀಗಾಗಿ ಗೀತಾ ಶಿವರಾಜ್‌ ಕುಮಾರ್‌ ಅವರು ಈಡಿಗ ಮತಗಳು, ಮುಸ್ಲಿಂ ಮತಗಳು ಹಾಗೂ ದಲಿತ ಮತಗಳನ್ನ ನಂಬಿಕೊಂಡಿದ್ದಾರೆ.. ಆದ್ರೆ ಈಡಿಗ ಸಮುದಾಯದ ಮತಗಳು ಒಂದಾಗಿ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಬೀಳುವುದು ಕಷ್ಟ ಎಂದು ಹೇಳಲಾಗುತ್ತಿದೆ.. ಯಾಕಂದ್ರೆ ಗೀತಾ ಶಿವರಾಜ್‌ಕುಮಾರ್‌ ಅವರ ಸಹೋದರ ಕುಮಾರ್‌ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ.. ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ ಕೂಡಾ ಬಿಜೆಪಿಯಲ್ಲಿದ್ದಾರೆ.. ಹೀಗಾಗಿ ಈಡಿಗ ಮತಗಳು ಹಂಚಿಕೆಯಾಗಲಿವೆ.. ಜೊತೆಗೆ ಹಿಂದುಳಿದ ಹಾಗೂ ದಲಿತ ಮತಗಳನ್ನು ಈಶ್ವರಪ್ಪ ಕೂಡಾ ಪಡೆದುಕೊಳ್ಳಲಿದ್ದಾರೆ.. ಇದು ಗೀತಾ  ಶವರಾಜ್‌ಕುಮಾರ್‌ಗೆ ಹಿನ್ನಡೆಯಾದರೂ ಅಚ್ಚರಿ ಇಲ್ಲ..

ಇದನ್ನೂ ಓದಿ; ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟವರು ಶಿವಮೊಗ್ಗದವರು!; ತಮಿಳಿನಾಡಿನಲ್ಲಿ ಕುಳಿತು ಸ್ಕೆಚ್‌!

ಇಬ್ಬರನ್ನೂ ಬಿಟ್ಟು ಈಶ್ವರಪ್ಪರನ್ನು ಗೆಲ್ಲಿಸ್ತಾರಾ..?

ರಾಘವೇಂದ್ರ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಇಬ್ಬರೂ ಮಾಜಿ ಸಿಎಂಗಳ ಮಕ್ಕಳು.. ಇಬ್ಬರಿಗೂ ಜಾತಿ ಬಲವಿದೆ.. ಆದ್ರೆ ಈಶ್ವರಪ್ಪ ಅವರಿಗೆ ಜಾತಿಬಲವಿಲ್ಲ.. ಆದ್ರೆ ಹಿಂದುತ್ವದ ಬಲವಿದೆ.. ಸಾಮಾನ್ಯ ಜನರ ಜೊತೆ ಅವರು ಬೆರೆಯುತ್ತಾ ಬಂದಿದ್ದಾರೆ.. ಹೀಗಾಗಿ, ಮತದಾರರು ಈ ಬಾರಿ ಗೀತಾ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ಇಬ್ಬರಿಗೂ ಕೈಕೊಟ್ಟು ಈಶ್ವರಪ್ಪರನ್ನು ಗೆಲ್ಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ..

ಯಡಿಯೂರಪ್ಪ ಅವರೇ ಈಶ್ವರಪ್ಪರನ್ನು ನಿಲ್ಲಿಸಿದರಾ..?

ಇನ್ನು ಸಚಿವ ಮಧು ಬಂಗಾರಪ್ಪ ಬೇರೆಯದನ್ನೇ ಹೇಳುತ್ತಿದ್ದಾರೆ.. ಯಡಿಯೂರಪ್ಪ ಅವರು ಹಿಂದುಳಿದ ಮತಗಳನ್ನು ಒಡೆದರೆ ರಾಘವೇಂದ್ರ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.. ಹೀಗಾಗಿ ಈಶ್ವರಪ್ಪರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯಡಿಯೂರಪ್ಪ ಅವರೇ ಪ್ರೇರಣೆ ಎಂದು ಆರೋಪ ಮಾಡುತ್ತಿದ್ದಾರೆ.. ಏನೇ ಆದರೂ ಕೂಡಾ ಶಿವಮೊಗ್ಗ ಲೋಕಸಭಾ ಕಣ ತ್ರಿಕೋನ ಸ್ಪರ್ಧೆ ಅನ್ನೋದಂತೂ ಸತ್ಯ..

 

 

Share Post