Loksabha; ಮೈಸೂರು ಗೆಲ್ಲಲು ʻಸಿದ್ಧʼ ಸೂತ್ರ; ʻಲಕ್ಷ್ಮಣʼನ ಗೆಲ್ಲಿಸಲು ʻರಾಮʼಬಾಣ!
ಮೈಸೂರು; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ.. ಒಂದು ಕಡೆ ರಾಜವಂಶಸ್ಥ, ಮತ್ತೊಂದು ಕಡೆ ಸಾಮಾನ್ಯ ಕಾರ್ಯಕರ್ತ… ರಾಜವಂಶಸ್ಥನಿಗೆ ಪ್ರಧಾನಿಯ ಅಭಯ… ಸಾಮಾನ್ಯ ಕಾರ್ಯಕರ್ತನಿಗೆ ಮುಖ್ಯಮಂತ್ರಿಯ ಆಸರೆ… ಈ ಮಹಾಯುದ್ಧದಲ್ಲಿ ಯಾರು ಗೆಲ್ತಾರೆ ಅನ್ನೋದೇ ಕುತೂಹಲ… ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದೊಂದು ಸವಾಲು, ಇದೊಂದು ಪ್ರತಿಷ್ಠೆ… ಆದ್ರೆ ಯದುವೀರ್ ವಿರುದ್ಧ ಲಕ್ಷ್ಮಣ್ ಅವರನ್ನು ಗೆಲ್ಲಿಸಿ ದಡ ಸೇರಿಸೋದು ಸಿದ್ದರಾಮಯ್ಯ ಅವರಿಗೆ ಅಷ್ಟು ಸುಲಭದ ದಾರಿಯಲ್ಲ… ಆದರೂ ತವರು ಗೆಲ್ಲಬೇಕೆಂಬ ತವಕ ಸಿದ್ದರಾಮಯ್ಯ ಅವರಿಗಿದೆ.. ಹೀಗಾಗಿ ಅವರು ಕೆಲವೊಂದು ʻಸಿದ್ಧʼ ಸೂತ್ರಗಳನ್ನು ರೆಡಿ ಮಾಡಿದ್ದಾರೆ… ಲಕ್ಷ್ಮಣನ ಗೆಲ್ಲಿಸಲು ʻರಾಮʼಬಾಣಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ…
ಇದನ್ನೂ ಓದಿ; ಹೆಚ್ಚು ಕಾಲ ಬದುಕಬೇಕೇ..?; ಸಿಂಪಲ್.. ಇಷ್ಟು ಮಾಡಿ ಸಾಕು..!
ಮೈಸೂರು ಯುದ್ಧಕ್ಕೆ ಸಿದ್ದರಾಮಯ್ಯ ತಾಲೀಮು..!
ಹೆಸರಿಗೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್… ಆದ್ರೆ ಇಲ್ಲಿ ಗೆಲುವು, ಸೋಲು ಎಲ್ಲವೂ ಸಿಎಂ ಸಿದ್ದರಾಮಯ್ಯ ಅವರ ಅಕೌಂಟ್‌ಗೇ ಸೇರೋದು… ಕೊಡಗು-ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅದು ಸಿದ್ದರಾಮಯ್ಯ ಗೆಲುವಾಗುತ್ತೆ.. ಸೋತರೆ ಅದು ಸಿದ್ದರಾಮಯ್ಯ ಅವರ ಸೋಲಾಗುತ್ತೆ… ಯಾಕಂದ್ರೆ ಮೈಸೂರು ಸಿದ್ದರಾಮಯ್ಯ ಅವರ ತವರು… ರಾಜ್ಯದ ಮುಖ್ಯಮಂತ್ರಿಯಾಗಿ, ಐದು ಗ್ಯಾರೆಂಟಿಗಳನ್ನು ಕೊಟ್ಟ ನಾಯಕನಾಗಿ ತವರು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳದಿದ್ದರೆ ಸಿದ್ದರಾಮಯ್ಯ ಅವರಿಗೆ ಅವಮಾನ ಆಗುವುದು ಗ್ಯಾರೆಂಟಿ… ಹೀಗಾಗಿಯೇ ಕೊಡಗು-ಮೈಸೂರು ಕ್ಷೇತ್ರವನ್ನು ಗೆಲ್ಲಲು ಸಿದ್ದರಾಮಯ್ಯ ಮೆಗಾ ಪ್ಲ್ಯಾನ್ ರೆಡಿ ಮಾಡುತ್ತಿದ್ದಾರೆ…
ಇದನ್ನೂ ಓದಿ; ಬಿಜೆಪಿ ಅಭ್ಯರ್ಥಿಗಳ ಘೋಷಣೆ; ಚಿಕ್ಕಬಳ್ಳಾಪುರಕ್ಕೆ ಸುಧಾಕರ್
ಯದುವೀರ್ ಟಾರ್ಗೆಟ್ ಆಗಬಾರದು, ಬಿಜೆಪಿ ಟಾರ್ಗೆಟ್ ಆಗಬೇಕು;
ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಮೆಗಾ ಪ್ಲ್ಯಾನ್ ಮಾಡಿದೆ.. ಡಿಸಿಎಂ ಹಾಗೂ ಸಿಎಂ ತವರು ಕ್ಷೇತ್ರಗಳಲ್ಲಿ ಇಬ್ಬರು ವಿಶೇಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ… ಈಗ ಗೆಲ್ಲಿ ನೋಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಸವಾಲು ಎಸೆದಿದೆ… ಕೊಡಗು-ಮೈಸೂರು ಕ್ಷೇತ್ರದಲ್ಲಿ ರಾಶವಂಶಸ್ಥ ಯದುವೀರ್ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ… ಈ ಇಬ್ಬರು ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿ ಮಾತನಾಡಿದಷ್ಟೂ ಕಾಂಗ್ರೆಸ್ ನಷ್ಟ ಗ್ಯಾರೆಂಟಿ… ಯಾಕಂದ್ರೆ ಮೈಸೂರಿನ ಜನಕ್ಕೆ ಮೈಸೂರು ಸಂಸ್ಥಾನ ಅಂದ್ರೆ ಅದೇನೋ ಭಕ್ತಭಾವ.. ಹೀಗಾಗಿ ರಾಜವಂಸ್ಥರನ್ನು ಟಾರ್ಗೆಟ್ ಮಾಡಿ ಮಾತನಾಡಿದರೆ ಜನ ತಿರುಗಿಬೀಳೋ ಸಾಧ್ಯತೆಯೇ ಹೆಚ್ಚಿರುತ್ತದೆ… ಅದೇ ರೀತಿ ಡಾ.ಸಿ.ಎನ್.ಮಂಜುನಾಥ್ ಕೂಡಾ ಪಕ್ಷಾತೀತವಾಗಿ ಜನರ ಪ್ರೀತಿ ಗಳಿಸಿಕೊಂಡಿದ್ದಾರೆ.. ಅವರ ವಿರುದ್ಧ ಮಾತನಾಡೋದಕ್ಕೆ ವಿಷಯಗಳೇ ಸಿಗೋದಿಲ್ಲ.. ಹೀಗಾಗಿ ಕಾಂಗ್ರೆಸ್ ನಾಯಕರು ಇಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.. ಅದ್ರಲ್ಲೂ, ಮೈಸೂರಿನ ಜನಕ್ಕೆ ರಾಜವಂಶಸ್ಥರ ಜೊತೆ ಭಾವನಾತ್ಮಕ ಸಂಬಂಧ ಇದೆ.. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರು ಪದೇ ಪದೇ ತಮ್ಮ ಸ್ಥಳೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.. ಯಾವುದೇ ಕಾರಣಕ್ಕೂ ಪ್ರಚಾರದ ವೇಳೆ ಯದುವೀರ್ ಅವರನ್ನು ಟಾರ್ಗೆಟ್ ಮಾಡಬೇಡಿ.. ನಮ್ಮ ಟಾರ್ಗೆಟ್ ಏನಿದ್ದರೂ ಬಿಜೆಪಿ ಇರಲಿ ಎಂದು ಹೇಳುತ್ತಿದ್ದಾರೆ…
ಇದನ್ನೂ ಓದಿ; ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರ ಗೆಲ್ಲುತ್ತೆ; ಸಿ.ಎಂ.ಸಿದ್ದರಾಮಯ್ಯ
ಖಾಸಗಿ ಹೋಟೆಲ್‌ನಲ್ಲಿ ಸಿದ್ದರಾಮಯ್ಯ ಸಭೆ;
ಭಾನುವಾರ ಮೈಸೂರಿನಲ್ಲಿದ್ದ ಸಿದ್ದರಾಮಯ್ಯ ಖಾಸಗಿ ಹೋಟೆಲ್‌ನಲ್ಲಿ ಕುಳಿತು ಕೊಡಗು-ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸಿದರು.. ಸ್ಥಳೀಯ ನಾಯಕರ ಜೊತೆ ಸಭೆ ನಡೆಸಿದ ಅವರು, ಯದುವೀರ್ ಅವರ ಗೆಲುವಿನ ಕುದುರೆಯನ್ನು ಕಟ್ಟಿಹಾಕಲು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು… ಇದೇ ವೇಳೆ ಯದುವೀರ್ ವಿಚಾರ ಚರ್ಚೆಗೆ ಬಂತು.. ಯದುವೀರ್ ಎಂಬ ಹೆಸರು ಇಲ್ಲಿನ ಜನಕ್ಕೆ ಎಮೋಷನಲ್ ವಿಚಾರ.. ಯದುವೀರ್ ಟಾರ್ಗೆಟ್ ಮಾಡಿದರೆ ರಾಜವಂಶಸ್ಥರನ್ನು ಟಾರ್ಗೆಟ್ ಮಾಡಿದಂತಾಗುತ್ತದೆ.. ಹೀಗಾಗಿ, ಸಿಕ್ಕಸಿಕ್ಕಲ್ಲಿ ಯದುವೀರ್ ವಿರುದ್ಧ ಹೇಳಿಕೆ ಕೊಟ್ಟರೆ ಜನ ಅದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬಹುದು… ಹೀಗಾಗಿ, ನಮ್ಮ ಟಾರ್ಗೆಟ್ ಯದುವೀರ್ ಆಗುವುದು ಬೇಡ.. ನಮ್ಮ ಟಾರ್ಗೆಟ್ ಬರೀ ಬಿಜೆಪಿ ಹಾಗೂ ಬಿಜೆಪಿ ನಾಯಕರಾಗಿರಲಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವರು ಶಿವಮೊಗ್ಗದವರು!; ತಮಿಳಿನಾಡಿನಲ್ಲಿ ಕುಳಿತು ಸ್ಕೆಚ್!
ಲಕ್ಷ್ಮಣ್ ಮೌನ ಹೋರಾಟಕ್ಕೆ ಸಜ್ಜು;
ನಿನ್ನೆಯ ತನಕ ಪ್ರಖರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಈಗ ಮೌನಕ್ಕೆ ಜಾರಿದ್ದಾರೆ.. ಸಿಎಂ ಸೂಚನೆಯ ನಂತರ ಅವರು, ಯದುವೀರ್ ಬಗ್ಗೆ ಹೆಚ್ಚು ಮಾತನಾಡದೇ ಪ್ರಚಾರ ತಂತ್ರವನ್ನು ಬದಲಿಸಿಕೊಳ್ಳಲು ಮುಂದಾಗಿದ್ದಾರೆ.. ಇನ್ನೊಂದೆಡೆ ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಿಸಿ ಮರ್ಯಾದೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಅವರಿಗಿದೆ.. ಹೀಗಾಗಿ ಅವರು ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್‌ನಲ್ಲಿ ರಾತ್ರಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದು, ಅಲ್ಲಿಯೂ ಒಂದಷ್ಟು ನಾಯಕರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.