Politics

ಕಾಂಗ್ರೆಸ್‌ ಸಚಿವರಿಗೆ ಹೈಕಮಾಂಡ್‌ ಟಾರ್ಗೆಟ್‌; ಮಕ್ಕಳು, ಸಂಬಂಧಿಕರು ಸೋತರೆ ಅಷ್ಟೇ ಕತೆ!

ಬೆಂಗಳೂರು; ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.. ಉಳಿದ ನಾಲ್ಕು ಕ್ಷೇತ್ರಗಳಿಗೆ ಈಗಲೋ ಆಗಲೋ ಅಭ್ಯರ್ಥಿಗಳು ಅಂತಿಮವಾಗಲಿದ್ದಾರೆ.. ಈಗಾಗಲೇ ಘೋಷಣೆ ಮಾಡಿದ 24 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕರ್ನಾಟಕದ ಸರ್ಕಾರದ ಹಾಲಿ ಸಚಿವರ ಮಕ್ಕಳು ಹಾಗೂ ಸಂಬಂಧಿಕರೇ ಇದ್ದಾರೆ… ಉಳಿದ ನಾಲ್ಕು ಕ್ಷೇತ್ರಗಳಿಗೆ ಘೋಷಣೆ ಮಾಡಿದರೆ ಇನ್ನೂ ಒಬ್ಬರು ಅಥವಾ ಇಬ್ಬರು ಸಚಿವರ ಮಕ್ಕಳು ಅಥವಾ ಸಂಬಂಧಿಕರು ಅಖಾಡಕ್ಕೆ ಇಳಿಯಲಿದ್ದಾರೆ… ಯುವಕರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳುತ್ತಲೇ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ಸರ್ಕಾರದ ಸಚಿವರಿಗೆ ಬೃಹತ್‌ ಟಾಸ್ಕ್‌ ಕೊಟ್ಟಿದೆ.. ಒಂದು ವೇಳೆ ತಮ್ಮ ಮಕ್ಕಳು ಅಥವಾ ಸಂಬಂಧಿಕರನ್ನು ಗೆಲ್ಲಿಸಿಕೊಂಡು ಬರದೇ ಹೋದರೆ ಅವರು ಸಚಿವ ಸ್ಥಾನವನ್ನೇ ಕಳೆದುಕೊಳ್ಳಬಹುದು..

ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; ಈಶ್ವರಪ್ಪರನ್ನು ಗೆಲ್ಲಿಸಿಬಿಡ್ತಾರಾ ಶಿವಮೊಗ್ಗದ ಜನ..?

ಸಚಿವರ ಮಕ್ಕಳು, ನಾಯಕರ ಸಂಬಂಧಿಗಳಿಗೆ ಟಿಕೆಟ್‌:

==============================
ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ ಕ್ಷೇತ್ರ) – ಸಚಿವ ಮಧು ಬಂಗಾರಪ್ಪ ಸಹೋದರಿ

ವೆಂಕಟರಮಣೇಗೌಡ (ಮಂಡ್ಯ ಕ್ಷೇತ್ರ) – ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಸಹೋದರ

ಯಶಸ್ ಪಟೇಲ್ (ಹಾಸನ ಕ್ಷೇತ್ರ) – ಮಾಜಿ ಸಂಸದ ದಿ. ಪುಟ್ಟಸ್ವಾಮಿ ಗೌಡರ ಮೊಮ್ಮಗ

ಮೃಣಾಲ್ ಹೆಬ್ಬಾಳಕರ್(ಬೆಳಗಾವಿ ಕ್ಷೇತ್ರ) – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ

ಪ್ರಿಯಾಂಕ ಜಾರಕಿಹೊಳಿ (ಚಿಕ್ಕೋಡಿ ಕ್ಷೇತ್ರ) – ಸಚಿವ ಸತೀಶ್ ಜಾರಕಿಹೊಳಿ ಪುತ್ರಿ

ಸಂಯುಕ್ತ ಪಾಟೀಲ್(ಬಾಗಲಕೋಟೆ ಕ್ಷೇತ್ರ) – ಸಚಿವ ಶಿವಾನಂದ ಪಾಟೀಲ್ ಪುತ್ರಿ

ಸಾಗರ್ ಖಂಡ್ರೆ (ಬೀದರ್ ಕ್ಷೇತ್ರ) – ಸಚಿವ ಈಶ್ವರ್ ಖಂಡ್ರೆ ಪುತ್ರ

ರಾಜಶೇಖರ್ ಹಿಟ್ನಾಳ್ (ಕೊಪ್ಪಳ ಕ್ಷೇತ್ರ) – ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ

ಸೌಮ್ಯ ರೆಡ್ಡಿ (ಬೆಂಗಳೂರು ದಕ್ಷಿಣ) – ಸಚಿವ ರಾಮಲಿಂಗಾರೆಡ್ಡಿ ಪುತ್ರಿ

ಪ್ರಭಾವತಿ ಮಲ್ಲಿಕಾರ್ಜುನ್ (ದಾವಣಗೆರೆ ಕ್ಷೇತ್ರ) – ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ

ಮನ್ಸೂರ್ ಖಾನ್ (ಬೆಂಗಳೂರು ಕೇಂದ್ರ ಕ್ಷೇತ್ರ) – ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ

ಡಾ. ರಾಧಾಕೃಷ್ಣ ದೊಡ್ಡಮನಿ (ಕಲಬುರಗಿ ಕ್ಷೇತ್ರ) – ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ

ಡಿ.ಕೆ.ಸುರೇಶ್‌ (ಬೆಂಗಳೂರು ಗ್ರಾಮಾಂತರ – ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರ

ಇವರಲ್ಲದೆ ಚಾಮರಾಜನಗರದಿಂದ ಸಚಿವ ಮಹಾದೇವಪ್ಪ ಪುತ್ರ ಸುನಿಲ್‌ ಬೋಸ್‌ ಹಾಗೂ ಕೋಲಾರದಿಂದ ಕೆ.ಹೆಚ್‌.ಮುನಿಯಪ್ಪ ಅಳಿಯನಿಗೆ ಟಿಕೆಟ್‌ ಕೊಡುವ ಸಾಧ್ಯತೆ ಇದೆ..

ಇದನ್ನೂ ಓದಿ; ಗಾಲಿ ಜನಾರ್ದನರೆಡ್ಡಿ ಬಿಜೆಪಿ ಸೇರ್ಪಡೆ; ಬಳ್ಳಾರಿ ಪ್ರವೇಶಕ್ಕೆ ಅವಕಾಶ ಸಿಗುತ್ತಾ..?

12 ಸಚಿವರಿಗೆ ಟಿಕೆಟ್‌ ನೀಡಲು ಬಯಸಿದ್ದ ಹೈಕಮಾಂಡ್‌;

ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಸಚಿವ ಸಂಪುಟದಲ್ಲಿರುವ 12 ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ತೀರ್ಮಾನ ಮಾಡಿತ್ತು.. ರಾಜ್ಯ ಕಾಂಗ್ರೆಸ್‌ ಸರ್ಕಾರ ಅಶ್ವಾಸನೆ ಕೊಟ್ಟಂತೆ ರಾಜ್ಯದಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ.. ಹೀಗಾಗಿ ಸಚಿವರೇ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿದರೆ ಗೆಲುವು ಸುಲಭವಾಗುತ್ತದೆ ಎಂವ ಲೆಕ್ಕಾಚಾರ ಕಾಂಗ್ರೆಸ್‌ ಹೈಕಮಾಂಡ್‌ ದಾಗಿತ್ತು.. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಯಾವೊಬ್ಬ ಸಚಿವನೂ ಒಪ್ಪಿಲ್ಲ. ಹೀಗಾಗಿ, ಕಾಂಗ್ರೆಸ್‌ ಹೈಕಮಾಂಡ್‌, ಸಚಿವರ ಮಕ್ಕಳು, ಸಂಬಂಧಿಕರನ್ನು ಅಖಾಡಕ್ಕಿಳಿಸಿದೆ.. ಅದೂ ಕೂಡಾ ಷರತ್ತಿನ ಮೇಲೆ ಈ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.. ನೀವು ಹೇಳಿದವರಿಗೆ ಟಿಕೆಟ್‌ ನೀಡುತ್ತಿದ್ದೇವೆ.. ಅವರನ್ನು ಗೆಲ್ಲಿಸಿಕೊಂಡು ಬರೋ ಜವಾಬ್ದಾರಿ ನಿಮ್ಮದು.. ಒಂದು ವೇಳೆ ಗೆಲ್ಲಿಸಿಕೊಂಡು ಬರದಿದ್ದರೆ, ಅದರ ಹೊಣೆ ನೀವೇ ಹೊರಬೇಕಾಗುತ್ತದೆ ಎಂದು ಖಡಕ್‌ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.. ಹೀಗಾಗಿ ಎಲ್ಲಾ ಸಚಿವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಡಾ.ಕೆ.ಸುಧಾಕರ್‌ ಪಸ್ಲ್‌ ಏನು..? ಮೈನಸ್‌ ಏನು..?

ಸಿಎಂ ಹಾಗೂ ಡಿಸಿಎಂಗೂ ಕುತ್ತಿದೆಯಾ..?;

ಸಿಎಂ ಸಿದ್ದರಾಮಯ್ಯ ತವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಅವರನ್ನೇ ಕಣಕ್ಕಿಳಿಸಲು ಮೊದಲು ತೀರ್ಮಾನ ಮಾಡಲಾಗಿತ್ತು.. ಆದ್ರೆ ಆಂತರಿಕ ಸಮೀಕ್ಷೆಯಲ್ಲಿ ಯತೀಂದ್ರ ಸ್ಪರ್ಧಿಸಿದರೆ ಸೋಲು ಗ್ಯಾರೆಂಟಿ ಎಂದು ವರದಿ ಬಂದಿತ್ತು ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಲಕ್ಷ್ಮಣ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.. ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ಗೆ ಟಿಕೆಟ್‌ ನೀಡಲಾಗಿದೆ.. ಈಗ ಎರಡೂ ಕ್ಷೇತ್ರದಲ್ಲೂ ಬಿಜೆಪಿ ವಿಶೇಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.. ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್‌.ಮಂಜುನಾಥ್‌ ಅಭ್ಯರ್ಥಿಯಾದರೆ, ಮೈಸೂರಿನಿಂದ ರಾಜವಂಶಸ್ಥ ಯದುವೀರ್‌ ಅಖಾಡದಲ್ಲಿದ್ದಾರೆ.. ಹೀಗಾಗಿ, ಎರಡೂ ಕ್ಷೇತ್ರದಲ್ಲೂ ಗೆಲ್ಲೋದು ಕಾಂಗ್ರೆಸ್‌ಗೆ ಒಂದು ಸವಾಲು.. ಹೀಗಾಗಿ ಈ ಎರಡೂ ಕ್ಷೇತ್ರದಲ್ಲಿ ಸೋತರೆ, ಇಬ್ಬರ ಹುದ್ದೆಗಳಿಗೂ ಕುತ್ತು ಬರುತ್ತದಾ ಎಂಬ ಮಾತುಗಳೂ ಕೇಳಿಬರುತ್ತಿವೆ..

ಇದನ್ನೂ ಓದಿ; Loksabha; ಮೈಸೂರು ಗೆಲ್ಲಲು ʻಸಿದ್ಧʼ ಸೂತ್ರ; ʻಲಕ್ಷ್ಮಣʼನ ಗೆಲ್ಲಿಸಲು ʻರಾಮʼಬಾಣ!

 

Share Post