BengaluruCrime

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟವರು ಶಿವಮೊಗ್ಗದವರು!; ತಮಿಳಿನಾಡಿನಲ್ಲಿ ಕುಳಿತು ಸ್ಕೆಚ್‌!

ಬೆಂಗಳೂರು; ಮಾರ್ಚ್‌ 1ರಂದು ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿತ್ತು… ಬೆಂಗಳೂರು ವೈಟ್‌ ಫೀಲ್ಡ್‌ ಬಳಿಯ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿತ್ತು.. ಮುಖಕ್ಕೆ ಮಾಸ್ಕ್‌ ಹಾಗೂ ಟೋಪಿ ಧರಿಸಿ ಬಂದಿದ್ದ ವ್ಯಕ್ತಿ ಟೈಮ್‌ ಬಾಂಬ್‌ ಇಟ್ಟು ಪರಾರಿಯಾಗಿದ್ದ.. ಈ ಕೃತ್ಯದಲ್ಲಿ ಇಬ್ಬರು ಪಾಲ್ಗೊಂಡಿದ್ದಾರೆ ಅನ್ನೋದು ಎನ್‌ಐಎ ಗುರುತಿಸಿದೆ.. ಜೊತೆಗೆ ಆ ಇಬ್ಬರು ಯಾರು ಅನ್ನೋದು ಕೂಡಾ ಎನ್‌ಐಎಗೆ ಗೊತ್ತಾಗಿದ್ದು, ಅವರಿಗಾಗಿ ತಲಾಶ್‌ ಶುರುವಾಗಿದೆ..

ತಮಿಳುನಾಡಿನಲ್ಲಿ ಕುಳಿತು ಬ್ಲಾಸ್ಟ್‌ಗೆ ಸ್ಕೆಚ್‌;

ಮಾರ್ಚ್‌ 1ರಂದು ಸ್ಫೋಟ ಸಂಭವಿಸಿದ ಮೇಲೆ ಮೊದಲು ಸಿಸಿಬಿ ಪೊಲೀಸರು ತನಿಖೆ ನಡೆಸಿದರು. ತನಿಖೆಗಾಗಿ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.. ನಂತರ ಎನ್‌ಐಎ ತನಿಖೆ ಜವಾಬ್ದಾರಿ ವಹಿಸಿಕೊಂಡಿದೆ.. ಈಗಾಗಲೇ ಎನ್‌ಐಎ ತಂಡ ಬಳ್ಳಾರಿ ಸೇರಿದಂತೆ ಹಲವು ಸ್ಥಳಗಳಲ್ಲಿ ತನಿಖೆ ನಡೆಸಿದೆ.. ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.. ಜೈಲಿನಲ್ಲಿದ್ದವರನ್ನೂ ಈಗಾಗಲೇ ವಿಚಾರಣೆ ನಡೆಸಲಾಗಿದೆ.. ಕೊನೆಗೆ ಈ ಬಾಂಬ್‌ ಸ್ಕೆಚ್‌ ಹೇಗೆ ನಡೆಯಿತು.. ಅದನ್ನು ಮಾಡಿದವರು ಯಾರು ಅನ್ನೋದನ್ನು ಎನ್‌ಐಎ ಕಂಡುಹಿಡಿದಿದೆ.. ಶಂಕಿತರು ತಮಿಳುನಾಡಿನಲ್ಲಿ ಕುಳಿತು ಬ್ಲಾಸ್ಟ್‌ಗೆ ಸ್ಕೆಚ್‌ ರೂಪಿಸಿರುವುದು ಸಾಬೀತಾಗಿದೆ.. ಶಂಕಿತ ಉಗ್ರ ತಮಿಳುನಾಡಿನಿಂದ ಬಂದ ಬಾಂಬ್‌ ಇಟ್ಟು ಪರಾರಿಯಾಗಿದ್ದಾನೆ.. ಇನ್ನು ಈ ಸ್ಫೋಟಕ್ಕೂ ಮುಂಚೆ ಅಂದರೆ ಎರಡು ತಿಂಗಳ ಹಿಂದೆಯೇ ಶಂಕಿತ ಉಗ್ರ ತಮಿಳುನಾಡಿನಲ್ಲಿದ್ದ ಅನ್ನೋದು ಎನ್‌ಐಎ ತನಿಖೆ ವೇಳೆ ಗೊತ್ತಾಗಿದೆ.. ಬಾಂಬ್‌ ಇಟ್ಟ ದಿನ ಶಂಕಿತ ವ್ಯಕ್ತಿ ಧರಿಸಿದ್ದ ಟೋಪಿಯ ಆಧಾರದ ಮೇಲೆ ಎನ್‌ಐಎ ಈ ಮಾಹಿತಿಯನ್ನು ಪತ್ತೆ ಹಚ್ಚಿದೆ.. ಈ ಟೋಪಿಯನ್ನು ತಮಿಳುನಾಡಿನ ಮಾಲ್​ವೊಂದರಲ್ಲಿ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.. ಅಲ್ಲದೆ ಟೋಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್​​ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದೆ.. ಇದನ್ನು ಡಿಎನ್​​ಎ ಪರೀಕ್ಷೆಗೆ ಕಳುಹಿಸಲಾಗಿದೆ..

ಆ ಇಬ್ಬರೂ ಕರ್ನಾಟಕದ ಶಿವಮೊಗ್ಗದವರು!;

ತಮಿಳುನಾಡಿನ ಮಾಲ್‌ನಲ್ಲಿ ಕಾಣಿಸಿಕೊಂಡಿರುವ ಇಬ್ಬರೂ ಶಿವಮೊಗ್ಗ ಮೂಲದವರು ಅನ್ನೋದು ಗೊತ್ತಾಗಿದೆ.. ಶಿವಮೊಗ್ಗೆ ಜಿಲ್ಲೆಯ ಮುಸಾವೀರ್ ಮತ್ತು ಹುಸೇನ್ ಶಬೀದ್ ಎಂಬುವವರೇ ಈ ಶಂಕಿತರು ಅನ್ನೋದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿದೆ.. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಇವರು ಎರಡು ತಿಂಗಳು ತಮಿಳುನಾಡಿನ ಲಾಡ್ಜ್​​ನಲ್ಲಿ ಉಳಿದುಕೊಂಡಿದ್ದರು ಅನ್ನೋದಕ್ಕೆ ದಾಖಲೆ ಕೂಡಾ ಇದೆ.. ಹಾಗಾದರೆ ಅವರು ತಮಿಳುನಾಡಿಗೆ ಯಾಕೆ ಹೋದರು, ತಮಿಳುನಾಡಿಗೂ ಈ ಇಬ್ಬರಿಗೂ ಏನು ಸಂಬಂಧ..? ತಮಿಳುನಾಡಿನಲ್ಲಿ ಒಂದು ಗ್ಯಾಂಗ್‌ ಕೆಲಸ ಮಾಡುತ್ತಿದೆಯಾ..? ಕೊಯಮತ್ತೂರು ಬ್ಲಾಸ್ಟ್‌ಗೂ ಇದಕ್ಕೂ ಸಂಬಂಧ ಇದೆಯಾ ಎಂಬುದರ ಬಗ್ಗೆಯೂ ತನಿಖೆ ಮುಂದುವರೆದಿದೆ..

ಬಳ್ಳಾರಿಯಲ್ಲಿ ಒಬ್ಬನನ್ನು ಅರೆಸ್ಟ್‌ ಮಾಡಿದ್ದ ಎನ್‌ಐಎ;

ಮಾರ್ಚ್‌ 1ರಂದು ಈ ಬ್ಲಾಸ್ಟ್‌ ನಡೆದಿತ್ತು.. ಇದಾಗಿ 23 ದಿನಗಳೇ ಕಳೆದಿದೆ.. ಆದ್ರೆ ಶಂಕಿತ ಆರೋಪಿ ಮಾತ್ರ ಇನ್ನೂ ಸಿಕ್ಕಿಲ್ಲ… ಇನ್ನು ಎನ್‌ಐಎ ತನಿಖೆ ಶುರು ಮಾಡಿದ ಮೇಲೆ ಸಾಕಷ್ಟು ಪ್ರಗತಿ ಕಂಡಿದೆ..  ಪ್ರಕರಣಕ್ಕೆ ಸಂಬಂಧಿಸಿ ಮಾ.13 ರಂದು ಎನ್​ಐಎ ತಂಡ ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ್ದರು. ಶಬ್ಬೀರ್ ಎಂಬಾತನನ್ನು ಎನ್​ಐಎ ಆಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದರು. ಜೊತೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿಯೂ NIA ಅಧಿಕಾರಿಗಳು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಎನ್​ಐಎಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ.

Share Post