Politics

ಚಿಕ್ಕಬಳ್ಳಾಪುರ ಲೋಕಸಭಾ; ಡಾ.ಕೆ.ಸುಧಾಕರ್‌ ಪಸ್ಲ್‌ ಏನು..? ಮೈನಸ್‌ ಏನು..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್‌ ಬಿಜೆಪಿ ಅಭ್ಯರ್ಥಿ ಅನ್ನೋದು ಅಧಿಕೃತವಾಗಿದೆ.. ಹೈಕಮಾಂಡ್‌ ಮಟ್ಟದಲ್ಲಿ ಭಾರಿ ಸರ್ಕಸ್‌ ನಡೆಸಿ ಅವರು ಟಿಕೆಟ್‌ ಗಿಟ್ಟಿಸಿಕೊಂಡು ಬಂದಿದ್ದಾರೆ.. ಟಿಕೆಟ್‌ಗಾಗಿ ಏನೆಲ್ಲಾ ಸಂಕಷ್ಟಪಟ್ಟರೋ ಅದರ ನೂರು ಪಟ್ಟು ಬೆವರು ಹರಿಸಿದರೆ ಮಾತ್ರ ಅವರಿಗೆ ಗೆಲುವಿನ ದಡ ಸೇರೋದಕ್ಕೆ ಆಗೋದು… ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯ ಸೋಲೇ ಅವರನ್ನು ಜರ್ಜರಿತರನ್ನಾಗಿ ಮಾಡಿದೆ.. ಈಗಲೂ ಅವರಿಗೆ ಆ ಸೋಲನನ್ನು ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ.. ಹೀಗಾಗಿ, ಈ ಕ್ಷಣಕ್ಕೆ ಅವರಿಗೆ ಒಂದು ಗೆಲುವು ಬೇಕಾಗಿದೆ… ಅದಕ್ಕಾಗಿ ಲೋಕಸಭಾ ಅಖಾಡಕ್ಕಿದ್ದ ಎಲ್ಲಾ ತೊಂದರೆಗಳನ್ನೂ ನಿವಾರಿಸಿಕೊಂಡು ಬಂದಿದ್ದಾರೆ.. ಈಗ ಏನಿದ್ದರೂ ನೇರ ಯುದ್ಧಕ್ಕಿಳಿಯಬೇಕಾಗಿದೆ… ಚಿಕ್ಕಬಳ್ಳಾಪುರ ಕ್ಷೇತ್ರದ ಹಿಸ್ಟರಿ ನೋಡಿದರೆ,  ಚಿಕ್ಕಬಳ್ಳಾಪುರದ ಜನರನ್ನು ಯಾವ ಕಾರಣಕ್ಕೂ ಜಡ್ಜ್‌ ಮಾಡೋದಕ್ಕೆ ಆಗೋದಿಲ್ಲ… ಅವರ ತೀರ್ಪು ಯಾವಾಗಲೂ ಜಾತ್ಯತೀತವಾಗಿರುತ್ತೆ… ಹೀಗಾಗಿ, ಸುಧಾಕರ್‌ ಒಕ್ಕಲಿಗರಾಗಿದ್ದರೂ, ಒಕ್ಕಲಿಗ ಮತಗಳು 4 ಲಕ್ಷದಷ್ಟಿದ್ದರೂ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಬೇಕಾಗಿರುವುದು ಅಗತ್ಯ ಹಾಗೂ ಅನಿವಾರ್ಯ…

ಇದನ್ನೂ ಓದಿ; Loksabha; ಮೈಸೂರು ಗೆಲ್ಲಲು ʻಸಿದ್ಧʼ ಸೂತ್ರ; ʻಲಕ್ಷ್ಮಣʼನ ಗೆಲ್ಲಿಸಲು ʻರಾಮʼಬಾಣ!

ಅಷ್ಟಕ್ಕೂ ಸುಧಾಕರ್‌ಗೆ ಇರುವ ಪ್ಲಸ್‌ ಪಾಯಿಂಟ್‌ಗಳೇನು..?

ಡಾ.ಕೆ.ಸುಧಾಕರ್‌… ಚಿಕ್ಕಬಳ್ಳಾಪುರಕ್ಕೆ ಸೀಮಿತವಾಗದೆ, ಜಿಲ್ಲೆ ಮೀರಿ ರಾಜ್ಯಾದ್ಯಂತ ಹೆಸರು ಮಾಡಿದ ರಾಜಕಾರಣಿ… ಅವಕಾಶ ಸಿಕ್ಕರೆ ಮುಖ್ಯಮಂತ್ರಿಯೂ ಆಗಿಬಿಡುತ್ತೇನೆ ಎಂದು ಹೊರಟವರು… ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ನೂರಾರು ಕೋಟಿ ರೂಪಾಯಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿ, ಚಿಕ್ಕಬಳ್ಳಾಪುರದ ಸುಧಾಕರ ಎನಿಸಿಕೊಂಡವರು.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇನೆ ಅಂತ ಅವರು ಕನಸಲ್ಲೂ ಎನಿಸಿಕೊಂಡಿರಲಿಲ್ಲ… ಆದ್ರೆ, ಒಬ್ಬ ಸಾಮಾನ್ಯ ಹುಡುಗ ಪ್ರದೀಪ್‌ ಈಶ್ವರ್‌ ವಿರುದ್ಧ ಸುಧಾಕರ್‌ 12 ಸಾವಿರಕ್ಕೂ ಹೆಚ್ಚು ಮತಗಳಿಂದ ಹೀನಾಯ ಸೋಲನುಭವಿಸಿದರು… ಇದರಿಂದಾಗಿ, ಮಂಕಾಗಿಬಿಟ್ಟಿದ್ದ ಸುಧಾಕರ್‌ ಕೆಲ ತಿಂಗಳಿಂದ ಆಕ್ಟೀವ್‌ ಆಗಿದ್ದಾರೆ… ಬಿಜೆಪಿ ಟಿಕೆಟ್‌ ಅನ್ನು ಕೂಡಾ ಗಿಟ್ಟಿಸಿಕೊಂಡಿದ್ದಾರೆ… ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿಕೊಂಡರೆ ಪರಿಸ್ಥಿತಿಗಳು ಈಗ ಸಾಕಷ್ಟು ಬದಲಾಗಿವೆ.. ಸುಧಾಕರ್‌ಗೆ ಅನುಕೂಲದ ವಾತಾವರಣಗಳು ಇವೆ.. ಆದ್ರೆ ಅದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಬೇಕಿದೆ ಅಷ್ಟೇ…

ಇದನ್ನೂ ಓದಿ; Loksbha; ಬೆಳಗಾವಿಯಲ್ಲಿ ಕಾಂಗ್ರೆಸ್ ಯುವ ಶಕ್ತಿ ಬೃಹತ್ ಬೈಕ್ ರ್ಯಾಲಿ

೧. ಡಾ.ಕೆ.ಸುಧಾಕರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತಗಳಿವೆ.. ಈ ಮತಗಳನ್ನು ಒಟ್ಟುಗೂಡಿಸಿದರೆ ಸುಧಾಕರ್‌ ಗೆಲುವು ಸುಲಭವಾಗಬಹುದು.

೨. ಸುಧಾಕರ್‌ ಅವರಿಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟ ಪ್ರಾಬಲ್ಯವಿದೆ.. ಈ ಕ್ಷೇತ್ರಗಳಲ್ಲಿ ಪ್ರತಿ ಹಳ್ಳಿಯನ್ನೂ ಅವರು ನೋಡಿದ್ದಾರೆ… ಈ ಮೂರು ಕ್ಷೇತ್ರಗಳಲ್ಲಿ ಸುಧಾಕರ್‌ಗೆ ಹೆಚ್ಚು ಲಾಭ ತಂದುಕೊಡಬಹುದು..

೩. ಜೆಡಿಎಸ್‌ ಬಲ ಕೂಡಾ ಸುಧಾಕರ್‌ಗೆ ಅನುಕೂಲ ತಂದುಕೊಡಬಹುದು.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಸಾಕಷ್ಟಿವೆ.. ಇಲ್ಲಿನ ಒಕ್ಕಲಿಗರು ಜೆಡಿಎಸ್‌ ಪರವಾಗಿದ್ದಾರೆ.. ಈಗ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿರುವುದರಿಂದ ಸುಧಾಕರ್‌ಗೆ ಈ ಬಾರಿ ಒಕ್ಕಲಿಗ ಮತಗಳು ಹೆಚ್ಚಾಗಿ ಸಿಗಬಹುದು..

೪.ಯಲಹಂಕ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರಗಳಲ್ಲಿ ಕೂಡಾ ಡಾ.ಕೆ.ಸುಧಾಕರ್‌ ಸ್ವಲ್ಪ ಸರ್ಕಸ್‌ ಮಾಡಬೇಕಿದೆ.. ಇಲ್ಲಿ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರನ್ನು, ಎಂಟಿಬಿ ನಾಗರಾಜ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲುವು ಸುಲಭವಾಗಬಹುದು..

ಇದನ್ನೂ ಓದಿ; ಹೆಚ್ಚು ಕಾಲ ಬದುಕಬೇಕೇ..?; ಸಿಂಪಲ್.. ಇಷ್ಟು ಮಾಡಿ ಸಾಕು..!

ಪ್ರದೀಪ್‌ ಈಶ್ವರ್‌ ಲೂಸ್‌ ಟಾಕ್‌ ಆಸರೆ;

ವಿಧಾನಸಭಾ ಚುನಾವಣೆ ವೇಳೆ ಪ್ರದೀಪ್‌ಈಶ್ವರ್‌ ಅವರ ಸಿನಿಮಾ ಡೈಲಾಗ್‌ಗಳು ಜನರಿಗೆ ಇಷ್ಟವಾಗಿಬಿಟ್ಟಿದ್ದರು.. ಇವರು ಏನೋ ಮಾಡುತ್ತಾರೆ ಎಂಬ ನಿರೀಕ್ಷೆ ಜನರದ್ದಾಗಿತ್ತು… ಜೊತೆಗೆ ಸುಧಾಕರ್‌ ಅವರನ್ನು ಸೋಲಿಸೋದೂ ಜನರ ಆಯ್ಕೆಯ ವಿಷಯ ವಿಷಯವಾಗಿತ್ತು.. ಹೀಗಾಗಿ ಅನಿವಾರ್ಯವಾಗಿ ಪ್ರದೀಪ್‌ ಈಶ್ವರ್‌ಗೆ ಚಿಕ್ಕಬಳ್ಳಾಪುರದ ಮತ ಹಾಕಿದ್ದರು.. ಆದ್ರೆ ಅಂದು ಇಷ್ಟವಾಗಿದ್ದ ಪ್ರದೀಪ್‌ ಈಶ್ವರ್‌ ಮಾತುಗಳು ಈಗ ಬೇಡ ಎಂಬಂತೆ ಕಾಣುತ್ತಿವೆ.. ಬರೀ ಲೂಸ್‌ ಟಾಕ್‌ ಮಾತಾಡುತ್ತಾರೆ.. ಮಾಡೋದೇನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಹೀಗಾಗಿ ಪ್ರದೀಪ್‌ ಈಶ್ವರ್‌ ಹೆಚ್ಚು ಮಾತಾಡಿದಷ್ಟೂ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್‌ಗೆ ಹೆಚ್ಚಿನ ಮತಗಳು ಬರಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅರೆಸ್ಟ್

ಡಾ.ಕೆ.ಸುಧಾಕರ್‌ ಅವರ ಮೈನಸ್‌ ಪಾಯಿಂಟ್‌ ಏನು..?

೧. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಬಿಟ್ಟರೆ ಇತರ ಕ್ಷೇತ್ರಗಳಲ್ಲಿ ಸುಧಾಕರ್‌ಗೆ ಹೆಚ್ಚಿನ ಜನ ಸಂಪರ್ಕ ಇಲ್ಲ.

೨. ಚಿಕ್ಕಬಳ್ಳಾಪುರದಲ್ಲಿ 4 ಲಕ್ಷದಷ್ಟು ಒಕ್ಕಲಿಗ ಮತಗಳಿದ್ದರೂ, ಇಲ್ಲಿನ ಒಕ್ಕಲಿಗರೂ ಯಾವತ್ತೂ ಕೂಡಾ ಜಾತಿ ರಾಜಕಾರಣ ಮಾಡಿಲ್ಲ… ಬಹುತೇಕ ಚುನಾವಣೆಗಳಲ್ಲಿ ಜಾತಿ ಮೀರಿ ಮತ ಹಾಕಿದ್ದಾರೆ.. ಹೀಗಾಗಿ, ಜಾತಿ ಮತಗಳು ಸಂಪೂರ್ಣವಾಗಿ ಸುಧಾಕರ್‌ ಅವರಿಗೆ ಸಿಗೋದು ಕಷ್ಟ..

೩. ಗೆದ್ದ ಮೇಲೆ ಸುಧಾಕರ್‌ ಅವರು ಸಾಮಾನ್ಯ ಜನರನ್ನು ಕಡೆಗಣಿಸುತ್ತಾರೆ. ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ ಎಂಬ ಅಪವಾದವಿದೆ.. ಜನ ಇದನ್ನೂ ಇನ್ನೂ ಮರೆಯದೇ ಇದ್ದರೆ ಸುಧಾಕರ್‌ಗೆ ಕಷ್ಟ  ಕಷ್ಟ..

೪. ಐದು ಲಕ್ಷಕ್ಕೂ ಮೀರಿ ಇರುವ ದಲಿತ ಮತಗಳು ಇಲ್ಲಿ ನಿರ್ಣಾಯಕವಾಗುತ್ತವೆ.. ದಲಿತರು ಕಾಂಗ್ರೆಸ್‌ ಪಕ್ಷದ ಮತ ಬ್ಯಾಂಕ್‌.. ಹೀಗಾಗಿ, ಉಚಿತ ಗ್ಯಾರೆಂಟಿಗಳು ನೀಡಿದ ಕಾರಣಕ್ಕಾಗಿ ಬಡ ದಲಿತರು ಈ ಬಾರಿ ಕಾಂಗ್ರೆಸ್‌ ಕೈಹಿಡಿದರೂ ಸುಧಾಕರ್‌ಗೆ ಸಂಕಷ್ಟ ತಂದೊಡ್ಡಬಹುದು.

೫. ರಕ್ಷಾ ರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಸುಧಾಕರ್‌ ಕೊಂಚ ಸಮಸ್ಯೆಯಾಗಬಹುದು.. ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯಕ್ಕೆ ಸೇರಿದವರು.. ಈ ಕ್ಷೇತ್ರದಲ್ಲಿ 1.80 ಲಕ್ಷಕ್ಕೂ ಅಧಿಕ ಬಲಿಜ ಸಮುದಾಯದ ಮತಗಳಿವೆ.. ಒಕ್ಕಲಿಗ ಮತಗಳು ಛಿದ್ರವಾಗಬಹುದು, ಆದ್ರೆ ಬಲಿಜ ಮತಗಳು ಒಂದಾಗುತ್ತದೆ.. ಜೊತೆಗೆ ಕೈವಾರ ಕ್ಷೇತ್ರಕ್ಕೆ ನಡೆದುಕೊಳ್ಳುವವರು ಈ ಭಾಗದಲ್ಲಿ ಸಾಕಷ್ಟು ಜನರಿದ್ದಾರೆ.. ರಕ್ಷಾ ರಾಮಯ್ಯ ಅವರ ದೊಡ್ಡಪ್ಪ ಈ ಕ್ಷೇತ್ರದ ಧರ್ಮದರ್ಶಿಯಾಗಿರುವುದರಿಂದ ಇವರ ಕುಟುಂಬದ ಜೊತೆ ಇಲ್ಲಿನ ಜನಕ್ಕೆ ಭಾವನಾತ್ಮಕ ಬಾಂಧವ್ಯ ಇದೆ.. ಇನ್ನು ಎಂಎಸ್‌ ರಾಮಯ್ಯ ಆಸ್ಪತ್ರೆ ಈ ಭಾಗದಿಂದ ಬರುವ ರೋಗಿಗಳಿಗೆ ಮೊದಲಿನಿಂದಲೂ ಡಿಸ್ಕೌಂಟ್‌ ಕೊಡುತ್ತಿದೆ.. ಇದೆಲ್ಲಾ ಚುನಾವಣೆಯಲ್ಲಿ ವರ್ಕೌಟ್‌ ಆದರೆ ಸುಧಾಕರ್‌ಗೆ ಕಷ್ಟವಾಗಬಹುದು..

ಇಬ್ಬರೇ ಒಕ್ಕಲಿಗರು ಇದುವರೆಗೆ ಗೆದ್ದಿದ್ದು;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವಾದ ಮೇಲೆ ಮೊದಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಎಂ.ವಿ.ಕೃಷ್ಣಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.. ಇದಾದ ಮೇಲೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್‌.ಬಚ್ಚೇಗೌಡರು ಗೆಲುವು ಸಾಧಿಸಿದ್ದರು. ಇವರು ಇಬ್ಬರೇ ಇದುವರೆಗೆ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಒಕ್ಕಲಿಗ ನಾಯಕರು.

1980ರಲ್ಲಿ ಆರ್ಯವೈಶ್ಯ ಸಮುದಾಯದ ಎಸ್‌.ಎನ್‌.ಪ್ರಸನ್ನ ಕುಮಾರ್‌ ಅವರು ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.. ಅವರ ಗೆಲುವಿನ ಅಂತರವನ್ನು ಇದುವರೆಗೂ ಯಾರೂ ಮುರಿಯೋದಕ್ಕೆ ಸಾಧ್ಯವಾಗಿಲ್ಲ. ಅನಂತರ 1984ರಿಂದ 1991ರವರೆಗೆ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್‌ ಸಂಸದರಾಗಿದ್ದರು. 1996ರಿಂದ 2004ರವರೆಗೆ ಈಡಿಗ ಸಮುದಾಯದ ಆರ್‌.ಎಲ್‌.ಜಾಲಪ್ಪ ಸಂಸದರಾಗಿ, ಕೇಂದ್ರ ಸಚಿವರಾಗಿದ್ದರು. 2009ರಿಂದ 2014ರವರೆಗೆ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯ್ಲಿಯವರು ಸಂಸದರಾಗಿ, ಕೇಂದ್ರ ಸಚಿವರಾಗಿದ್ದರು. ಈ ಕ್ಷೇತ್ರದಲ್ಲಿ ದೇವಾಡಿಗ ಸಮುದಾಯದ ಒಂದೇ ಒಂದು ಮತ ಇಲ್ಲದಿರುವುದು ವಿಶೇಷ.

ಯಾವ ಜಾತಿಯ ಎಷ್ಟು ಮತಗಳಿವೆ..?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಕ್ಷೇತ್ರದಲ್ಲಿ ಸುಮಾರು 4.50 ಲಕ್ಷದಷ್ಟು ಒಕ್ಕಲಿಗ ಮತಗಳಿವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 5 ಲಕ್ಷ ಮತಗಳಿವೆ.. ಬಲಿಜ ಸಮುದಾಯದ 1.80 ಲಕ್ಷ ಮತಗಳಿವೆ.. ಹೀಗಾಗಿ ಇಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ.

 

Share Post