BengaluruCrime

ರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ!

ಬೆಂಗಳೂರು; ರಾತ್ರಿ ವೇಳೆ ಮಹಿಳೆಯೊಬ್ಬರು ಮನೆಯ ಬಳಿ ಗೇಟ್‌ ತೆಗೆಯುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ತಬ್ಬಿಕೊಂಡು ಎಳೆದಾಡಿದ್ದಾನೆ. ನಂತರ ಆತ ಪರಾರಿಯಾಗಲು ಯತ್ನಿಸಿದ್ದಾರೆ.. ಕಳೆದ ಸೋಮವಾರ ಇಂತಹದ್ದೊಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡ ಸಂತ್ರಸ್ತೆ!;

ಸಂತ್ರಸ್ತ ಮಹಿಳೆ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.. ಸೋಮವಾರ ರಾತ್ರಿ ನಮ್ಮ ಮನೆಯ ಬಳಿ ಅರಿಚಿತ ವ್ಯಕ್ತಿಯೊಬ್ಬ ನನ್ನನ್ನು ಏಕಾಏಕಿ ತಬ್ಬಿಕೊಂಡಿದ್ದಾನೆ. ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಇನ್ನು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದ್ದು, ಅದರಲ್ಲಿ ಆರೋಪಿ ವ್ಯಕ್ತಿ ನನಗೆ ಕುಟುಂಬ ಇದೆ.. ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ತಪ್ಪು ಮಾಡಿದ್ದೇನೆ. ಬಿಟ್ಟುಬಿಡಿ ಎಂದು ಬೇಡಿಕೊಳ್ಳುವ ದೃಶ್ಯ ಅದರಲ್ಲಿದೆ.

ಗೇಟ್‌ ತೆರೆಯುವಷ್ಟರಲ್ಲಿ ಆತ ಬಂದು ತಬ್ಬಿಕೊಂಡ;

ಸೋಮವಾರ ರಾತ್ರಿ ನನ್ನನ್ನು ನನ್ನ ಸ್ನೇಹಿತನೊಬ್ಬ ಮನೆಯ ಬಳಿ ಬಿಟ್ಟುಹೋದ.. ನಾನು ಗೇಟ್‌ ತೆರೆಯುತ್ತಿರುವಾಗ ಅರಿಚಿತ ವ್ಯಕ್ತಿ ಬಂದು ನನ್ನನ್ನು ತಬ್ಬಿಂದು ಎಳೆದಾಡಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ನಂತರ ಆತ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ ಆಗ ಸ್ಥಳೀಯರು ಹಾಗೂ ನನ್ನ ಸ್ನೇಹಿತ ಆನನ್ನು ಹಿಡಿದರು ಎಂದು ಮತ್ತೊಂದು ಪೋಸ್ಟ್‌ ನಲ್ಲಿ ಮಹಿಳೆ ಬರೆದುಕೊಂಡಿದ್ದಾರೆ.

ಪೊಲೀಸರು ವಶಕ್ಕೆ ಪಡೆದು ಬಿಟ್ಟುಬಿಟ್ಟರು;

ನಾವು ಪೊಲೀಸರಿಗೆ ಕರೆ ಮಾಡಿ ಆತನನ್ನು ಅವರ ವಶಕ್ಕೆ ನೀಡಿದೆವು. ಆದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಕಾರಣದಿಂದ ನಾನು ದೂರು ಕೊಡಲಿಲ್ಲ.. ಹೀಗಾಗಿ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಮಹಿಳೆ ಟ್ವಟಿರ್‌ನಲ್ಲಿ ಬರೆದುಕೊಂಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.. ಇದರಿಂದಾಗಿ ನಾನು ಮಾನಸಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತೇವೆ.. ಅದರ ಬದಲು ಬಿಟ್ಟುಬಿಡುವಂತೆ ಆ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದ ನೆರೆಹೊರೆಯವರು ಹೇಳಿದರಿ. ಹೀಗಾಗಿ ನಾನು ಕೇಸ್‌ ದಾಖಲಿಸಲಿಲ್ಲ ಎಂದೂ ಕಾಎ ಹೇಳಿಕೊಂಡಿದ್ದಾರೆ.

ಪೊಲೀಸರು ಏನೂ ಮಾಡದೆ ಬಿಟ್ಟಿರುವುದು ದುರದೃಷ್ಟಕರ;

ಇನ್ನು ನಮ್ಮ ಸಮಾಜದಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿರುವ ಮಹಿಳೆ, ಪೊಲೀಸರು ಆರೋಪಿಗೆ ಏನೂ ಮಾಡದೇ ಬಿಟ್ಟಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಆತ ಮದ್ಯಪಾನ ಕೂಢಾ ಮಾಡಿರಲಿಲ್ಲ. ಜೊತೆ ಆಯ ವಯಸ್ಕನಾಗಿದ್ದ. ಏನು ಮಾಡುತ್ತಿದ್ದಾನೆ ಅನ್ನೋದು ಆತನಿಗೆ ಚೆನ್ನಾಗಿ ಗೊತ್ತಿತ್ತು.. ಬೇಕಂತಲೇ ಆತ ಹೀಗೆ ಮಾಡಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

 

Share Post