ಗಾಲಿ ಜನಾರ್ದನರೆಡ್ಡಿ ಬಿಜೆಪಿ ಸೇರ್ಪಡೆ; ಬಳ್ಳಾರಿ ಪ್ರವೇಶಕ್ಕೆ ಅವಕಾಶ ಸಿಗುತ್ತಾ..?
ಬೆಂಗಳೂರು; ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.. ದಶಕದ ನಂತರ ಅವರು ಬಿಜೆಪಿಗೆ ವಾಪಸ್ಸಾಗಿದ್ದಾರೆ.. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜನಾರ್ದನರೆಡ್ಡಿಯವರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ.. ಇದರಿಂದಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬರುವ ಸಾಧ್ಯತೆ ಇದೆ..
ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಡಾ.ಕೆ.ಸುಧಾಕರ್ ಪಸ್ಲ್ ಏನು..? ಮೈನಸ್ ಏನು..?
ಅಧಿಕೃತವಾಗಿ ಬಿಜೆಪಿ ಸೇರಿದ ಗಾಲಿ ಜನಾರ್ದನರೆಡ್ಡಿ;
ಗಾಲಿ ಜನಾರ್ದನರೆಡ್ಡಿ… ಒಂದು ಕಾಲದಲ್ಲಿ ರಾಜ್ಯ ಬಿಜೆಪಿ ಅವರ ಮುಷ್ಠಿಯಲ್ಲಿತ್ತು… ಯಡಿಯೂರಪ್ಪ ಅವರ ನೇತೃತ್ವ ಇದ್ದರೂ, ಎಲ್ಲರನ್ನೂ ಮೀರಿ ಜನಾರ್ದನರೆಡ್ಡಿ ಬಿಜೆಪಿಯನ್ನು ಆವರಿಸಿಬಿಟ್ಟಿದ್ದರು.. ಒಂದು ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಜನಾರ್ದನರೆಡ್ಡಿ ಹಣ ಹಾಗೂ ಪ್ರಾಬಲ್ಯ ಸಾಕಷ್ಟು ಅನುಕೂಲ ಮಾಡಿಕೊಟ್ಟಿತ್ತು.. ಅನಂತರ ಜನಾರ್ದನರೆಡ್ಡಿ ಕಾರಣದಿಂದಲೇ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಯ್ತು… ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನರೆಡ್ಡಿಯವರನ್ನು ಬಂಧಿಸಿದ ನಂತರ ಅವರ ರಾಜಕೀಯದಿಂದ ಮರೆಯಾಗಿದ್ದರು.. ಬಿಜೆಪಿಯಿಂದ ಉಚ್ಛಾಟನೆ ಕೂಡಾ ಮಾಡಲಾಗಿತ್ತು.. ಅದಾದ ಮೇಲೆ ಸಾಕಷ್ಟು ಪ್ರಯತ್ನಪಟ್ಟರೂ ಜನಾರ್ದರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿರಲಿಲ್ಲ.. ಈಗ ಬಿಜೆಪಿಗೆ ಜನಾರ್ದನರೆಡ್ಡಿ ಅನಿವಾರ್ಯ, ಜನಾರ್ದನರೆಡ್ಡಿಗೂ ಬಿಜೆಪಿ ಅನಿವಾರ್ಯವಾಗಿದೆ.. ಈ ಕಾರಣಕ್ಕಾಗಿ ಇಂದು ಗಾಲಿ ಜನಾರ್ದನರೆಡ್ಡಿಯವರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ..
ಇದನ್ನೂ ಓದಿ; Loksabha; ಮೈಸೂರು ಗೆಲ್ಲಲು ʻಸಿದ್ಧʼ ಸೂತ್ರ; ʻಲಕ್ಷ್ಮಣʼನ ಗೆಲ್ಲಿಸಲು ʻರಾಮʼಬಾಣ!
ದಶಕದ ನಂತರ ಬಿಜೆಪಿಗೆ ಮರಳಿದ ಜನಾರ್ದನರೆಡ್ಡಿ;
ಇತ್ತೀಚೆಗಷ್ಟೇ ಜನಾರ್ದನರೆಡ್ಡಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದರು.. ಇದೇ ವೇಳೆ ಬಿಜೆಪಿ ಹೈಕಮಾಂಡ್ ಜನಾರ್ದನರೆಡ್ಡಿ ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.. ಹಾಗೆ ನೋಡಿದರೆ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಪ್ರಾಣ ಸ್ನೇಹಿತರು.. ಈ ಹಿಂದೆ ಕೂಡಾ ಶ್ರೀರಾಮುಲು ಅವರು ಜನಾರ್ದನರೆಡ್ಡಿಯವರನ್ನು ಬಿಜೆಪಿಗೆ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದರು.. ಆದ್ರೆ ಅದು ಸಾಧ್ಯವಾಗಿರಲಿಲ್ಲ… ಆದ್ರೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಜನಾರ್ದನರೆಡ್ಡಿಯವರು ಕಲ್ಯಾಣ ಕರ್ನಾಕಟ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದರು.. ಕೊಪ್ಪಳದ ಗಂಗಾವತಿ ಕ್ಷೇತ್ರದಿಂದ ಜನಾರ್ದನರೆಡ್ಡಿ ಗೆದ್ದು ಬಂದರು.. ಜೊತೆಗೆ ಹಲವು ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಈ ಪಕ್ಷ ಕಾರಣವಾಯಿತು.. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಜನಾರ್ದನರೆಡ್ಡಿ ಪಕ್ಷದ ಅಭ್ಯರ್ಥಿಗೂ ಕಣಕ್ಕಿಳಿದರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು.. ಹೀಗಾಗಿ, ಶ್ರೀರಾಮುಲು ಅವರು ಬಿಜೆಪಿ ಹೈಕಮಾಂಡ್ಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.. ಈ ಮೂಲಕ ಜನಾರ್ದನರೆಡ್ಡಿಯವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ..
ಇದನ್ನೂ ಓದಿ; ಹೆಚ್ಚು ಕಾಲ ಬದುಕಬೇಕೇ..?; ಸಿಂಪಲ್.. ಇಷ್ಟು ಮಾಡಿ ಸಾಕು..!
ಬಳ್ಳಾರಿಗೆ ಎಂಟ್ರಿ ಕೊಡೋಕೆ ಅವಕಾಶ ಸಿಗುತ್ತಾ..?;
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿತ್ತು.. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಗೆಲ್ಲಬೇಕಾದರೆ ಜನಾರ್ದನರೆಡ್ಡಿ ಬೆಂಬಲ ಅತ್ಯಗತ್ಯ.. ಆದ್ರೆ ಬಳ್ಳಾರಿ ಅಕ್ರಮ ಗಣಿಗಾರಿಕೆ ಸಂಬಂಧ ಜನಾರ್ದನರೆಡ್ಡಿ ಬಳ್ಳಾರಿ ಜಿಲ್ಲೆಗೆ ಕಾಲಿಡುವಂತಿಲ್ಲ.. ಕೋರ್ಟ್ ಬಳ್ಳಾರಿಗೆ ಜಿಲ್ಲೆ ಎಂಟ್ರಿ ಕೊಡೋದಕ್ಕೆ ನಿರ್ಬಂಧ ಹೇರಿದೆ.. ಹೀಗಾಗಿ ಜನಾರ್ದನರೆಡ್ಡಿಯವರು ಪಕ್ಕದ ಕೊಪ್ಪಳದ ಗಂಗಾವತಿಯಲ್ಲಿ ನೆಲೆಸಿದ್ದಾರೆ.. ಅಲ್ಲಿಂದಲೇ ಬಳ್ಳಾರಿ ರಾಜಕೀಯವನ್ನು ನಿಭಾಯಿಸುತ್ತಿದ್ದಾರೆ… ಆದ್ರೆ, ಲೋಕಸಭಾ ಚುನಾವಣೆಯಲ್ಲಿ ಅವರು ನೇರವಾಗಿ ಬಳ್ಳಾರಿಗೆ ಎಂಟ್ರಿ ಕೊಟ್ಟರೆ ಬಿಜೆಪಿ ಸಾಕಷ್ಟು ಲಾಭವಾಗುತ್ತದೆ.. ಹೀಗಾಗಿ, ಕೋರ್ಟ್ ಮೂಲಕ ಬಳ್ಳಾರಿಗೆ ಹೋಗೋದಕ್ಕೆ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ..
ಇದನ್ನೂ ಓದಿ; ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರ ಗೆಲ್ಲುತ್ತೆ; ಸಿ.ಎಂ.ಸಿದ್ದರಾಮಯ್ಯ
ಬಿಜೆಪಿಯಲ್ಲಿ ವಿಲೀನವಾದ ಕೆಆರ್ಪಿಪಿ ಪಕ್ಷ;
ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಜನಾರ್ದನರೆಡ್ಡಿಯವರು ಕೆಆರ್ಪಿಪಿ ಪಕ್ಷ ಸ್ಥಾಪನೆ ಮಾಡಿದ್ದರು.. ಇದಕ್ಕೆ ಸ್ವಂತ ಸಹೋದರರೇ ವಿರೋಧ ವ್ಯಕ್ತಪಡಿಸಿದರೂ, ಜನಾರ್ದನರೆಡ್ಡಿ ಕೇಳಲಿಲ್ಲ.. ಸ್ವಂತ ಸಹೋದರ ಸೋಮಶೇಖರರೆಡ್ಡಿ ವಿರುದ್ಧವೇ ತನ್ನ ಪತ್ನಿಯನ್ನು ಜನಾರ್ದನರೆಡ್ಡಿ ಕಣಕ್ಕಿಳಿಸಿದ್ದರು.. ಅವರು ಪಕ್ಷ ಸ್ಥಾಪನೆ ಮಾಡಿದ್ದೇ ಈಗ ಜನಾರ್ದನರೆಡ್ಡಿಗೆ ಅನುಕೂಲವಾಗಿದೆ.. ಬಿಜೆಪಿಗೆ ವಾಪಸ್ಸಾಗುವ ಅವರ ಕನಸು ನನಸಾಗಿದೆ.. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ.. ವಿಜಯೇಂದ್ರ ಕೈಯಲ್ಲಿ ಪಕ್ಷ ಮುನ್ನಡೆಸೋದಕ್ಕೆ ಆಗುತ್ತಿಲ್ಲ.. ಇಂತಹ ಸಂದರ್ಭದಲ್ಲೇ ಜನಾರ್ದನರೆಡ್ಡಿ ಬಿಜೆಪಿಗೆ ವಾಪಸ್ಸಾಗಿದ್ದಾರೆ.. ಮುಂದೆ ಅವರು ಈ ಹಿಂದಿನಂತೆ ಪ್ರಾಬಲ್ಯ ಬಳಸಿ ಮತ್ತೆ ರಾಜ್ಯ ಬಿಜೆಪಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬಹುದು.. ಅದಕ್ಕೆ ಸೂಕ್ತ ಸಮಯ ಕೂಡಾ ಇದಾಗಿದೆ.