Sports

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮಹಿಳಾ ಕ್ರಿಕೆಟ್‌; ಮಹಿಳಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿದ್ದು, ಅದರಲ್ಲಿ ಸಂಪ್ರದಾಯಿಕ ಎದುರಾಳಿಯನ್ನು ಭಾರತ ತಂಡ ಬಗ್ಗುಬಡಿದಿದೆ.. ಭಾರತದ ಮಹಿಳಾ ತಂಡ ಪಾಕಿಸ್ತಾನದ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದ್ದು, ಈ ಪಂದ್ಯದಲ್ಲೂ ಕೂಡಾ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಗಮನಾರ್ಹ ಸಾಧನೆ ಮಾಡಿದ್ದಾರೆ..

ಇದನ್ನೂ ಓದಿ; ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ 21 ಹಗರಣಗಳ ಮಾಹಿತಿ ಕೊಟ್ಟ ಸಿಎಂ!

ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಪಾಕಿಸ್ತಾನ ತಂಡ 109 ರನ್‌ಗಳ ಗುರಿ ನೀಡಿತ್ತು.. ಹರ್ಮನ್‌ ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ 14.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿದೆ.. ಟಾಸ್‌ ಗೆದ್ದಿದ್ದ ಪಾಕಿಸ್ತಾನ ಮಹಿಳಾ ತಂಡ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.. ಆದ್ರೆ ಪಾಕ್‌ ತಂಡವನ್ನು ಕಟ್ಟಿ ಹಾಕುವಲ್ಲಿ ನಮ್ಮ ಬೌಲರ್‌ಗಳು ಯಶಸ್ವಿಯಾದರು.. ದೀಪ್ತಿ ನಾಲ್ಕು ಓವರ್‌ನಲ್ಲಿ 20 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದರೆ, ರೇಣುಕಾ 14 ರನ್‌ ನೀಡಿ ಎರಡು ವಿಕೆಟ್‌ ತನ್ನ ಖಾತೆಗೆ ಹಾಕಿಕೊಂಡರು.. ಇನ್ನು ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಕೂಡಾ ಉತ್ತಮ ಸಾಧನೆ ಮಾಡಿದರು.. ಶ್ರೇಯಾಂಕಾ ಪಾಟೀಲ್‌ 3.2 ಓವರ್‌ನಲ್ಲಿ 14 ರನ್‌ ನೀಡಿ 2 ವಿಕೆಟ್‌ ಪಡೆದರು.. ಪೂಜಾ ಕೂಡಾ ಎರಡು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ಪಾಕಿಸ್ತಾನ ತಂಡ 108 ರನ್‌ಗಳಿಗೆ ಆಲ್‌ಔಟ್‌ ಆಗಬೇಕಾಯಿತು..

ಇದನ್ನೂ ಓದಿ;ಗಂಡನ ಜೊತೆ ಖುಷಿಯಾಗಿ ಹನಿಮೂನ್‌ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!

ಏಷ್ಯಾ ಕಪ್‌ನಲ್ಲಿ ಪಾಕ್‌ ವಿರುದ್ಧ ಇದು ಮೊದಲ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲೇ ಗೆದ್ದ ಭಾರತ ಭರವಸೆ ಮೂಡಿಸಿದೆ..

Share Post