ಟಿವಿ ನೋಡಿದ್ದಕ್ಕೆ 30 ಮಂದಿ ಯುವಕರಿಗೆ ಗಲ್ಲುಶಿಕ್ಷೆ!; ಇದೆಂಥಾ ಕಾನೂನು..?
ಉತ್ತರ ಕೊರಿಯಾ; ಉತ್ತರ ಕೊರಿಯಾದಲ್ಲಿ ವಿಚಿತ್ರ ವಿಚಿತ್ರ ಕಾನೂನುಗಳು ಜಾರಿಯಲ್ಲಿವೆ.. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ದೇಶದ ಜನರನ್ನು ಭಯದಲ್ಲೇ ನರಳುವಂತೆ ಮಾಡಿದ್ದಾರೆ.. ಕಠಿಣ ಕಾನೂನುಗಳಿಂದಾಗಿ ಜನ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ.. ದಕ್ಷಿಣ ಕೊರಿಯಾಗೂ ಉತ್ತರ ಕೊರಿಯಾಗೂ ಹಾವು-ಮುಂಗಸಿ ಸಂಬಂಧ.. ಹೀಗಾಗಿ ದಕ್ಷಿಣ ಕೊರಿಯಾದ ಟಿವಿ ಶೋಗಳನ್ನು ನೋಡಬಾರದು ಎಂದು ಕಿಮ್ ಜಾಂಗ್ ಉನ್ ತಮ್ಮ ದೇಶದಲ್ಲಿ ನಿಷೇಧ ಹೇರಿದ್ದಾರೆ.. ಆದರೂ ದಕ್ಷಿಣ ಕೊರಿಯಾದ ಟಿವಿ ಶೋಗಳನ್ನು ನೋಡಿದರು ಎಂಬ ಕಾರಣಕ್ಕೆ 30 ಮಂದಿ ಯುವಕರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ..
ಇದನ್ನೂ ಓದಿ; Daily Horoscope; ಈ ರಾಶಿಯವರು ಇವತ್ತು ದೂರ ಪ್ರಯಾಣ ಮಾಡಲೇಬಾರದು..!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ನಮ್ಮ ಪ್ರಮುಖ ಶತ್ರು ಎಂದು ಘೋಷಣೆ ಮಾಡಿದ್ದಾರೆ.. ಈ ಬೆನ್ನಲ್ಲೇ ದಕ್ಷಿಣ ಕೊರಿಯಾಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಮಾತನಾಡಬಾರದು. ಅಲ್ಲಿನ ಟಿವಿ ಚಾಲನ್‌ಗಳನ್ನು, ಟಿವಿ ಶೋಗಳನ್ನು ನೋಡಬಾರದು ಎಂದು ಕಿಮ್ ಕಟ್ಟಪ್ಪಣೆ ಕೊಟ್ಟಿದ್ದಾರೆ.. ಇದರ ನಡುವೆ ಕೆಲ ಯುವಕರು ದಕ್ಷಿಣ ಕೊರಿಯಾದ ಟಿವಿಗಳನ್ನು ವೀಕ್ಷಿಸಿದ್ದಾರೆ ಎಂಬ ಆರೋಪ ಬಂದಿದೆ.. ಈ ಹಿನ್ನೆಲೆಯಲ್ಲಿ ಕಿಮ್ ಜಾಂಗ್ ಉನ್, ತನ್ನ ಆದೇಶ ಉಲ್ಲಂಘಿಸಿದ್ದಕ್ಕಾಗಿ ಆ ಯುವಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ..
ಇದನ್ನೂ ಓದಿ; ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ 21 ಹಗರಣಗಳ ಮಾಹಿತಿ ಕೊಟ್ಟ ಸಿಎಂ!