ಗಂಡನ ಜೊತೆ ಖುಷಿಯಾಗಿ ಹನಿಮೂನ್ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!
ಉತ್ತರಾಖಂಡ; ಆಕೆ ಮದುವೆಗೂ ಮುಂಚೆ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಳು.. ಆದ್ರೆ ಯಾವ ಕಾರಣಕ್ಕೋ ಏನೋ ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಿದ್ದಳು ಖುಷಿಯಿಂದಲೇ ತಾಳಿ ಕಟ್ಟಿಸಿಕೊಂಡಿದ್ದಳು.. ಅಷ್ಟೇ ಏಕೆ ಗಂಡನ ಜೊತೆ ಖುಷಿ ಖುಷಿಯಾಗಿ ಹನಿಮೂನ್ ಕೂಡಾ ಮುಗಿಸಿಕೊಂಡು ಬಂದಿದಳು.. ಮದುವೆಯಾಗಿ ಎರಡು ತಿಂಗಳು ಆಗಿತ್ತು ಅಷ್ಟೇ.. ಆದ್ರೆ ಅದೇನಾಯ್ತೋ ಏನೋ ಆಕೆಗೆ ಇದ್ದಕ್ಕಿದ್ದಂತೆ ಪ್ರಿಯಕರ ನೆನಪಿಗೆ ಬಂದಿದ್ದಾನೆ.. ಕೂಡಲೇ ಆಕೆ ಗಂಡನನ್ನು ಬಿಟ್ಟು ಪ್ರಿಯಕರನ ಬಳಿಗೆ ಹೋಗಿದ್ದಾಳೆ..
ಇದನ್ನೂ ಓದಿ; ಮಂಕಿ ಕ್ಯಾಪ್ ಧರಿಸಿ ಬಂದ ಚಾಕುವಿನಿಂದ ದಾಳಿ!; ಉದ್ಯಮಿ ಮನೆಯಲ್ಲಿ ನಡೆದಿದ್ದೇನು..?
ಉತ್ತರಾಖಂಡ್‌ನ ಬಾಗೇಶ್ವರ ಜಿಲ್ಲೆಯ ಗುರುಡ್ ತಹಸೀಲ್ ಎಂಬಲ್ಲಿ ಈ ಘಟನೆ ನಡೆದಿದೆ.. ಎರಡು ತಿಂಗಳ ಹಿಂದೆ ವಿಜೃಂಬಣೆಯಿಂದ ಮದುವೆ ಮಾಡಿಕೊಡಲಾಗಿತ್ತು.. ನವದಂಪತಿ ಹಲವು ದಿನಗಳ ಕಾಲ ಹನಿಮೂನ್‌ಗೂ ಹೋಗಿದ್ದರು.. ಇಬ್ಬರು ಖುಷಿಯಾಗೇ ಜೀವನ ಸಾಗಿಸುತ್ತಿದ್ದರು.. ಆದ್ರೆ ಇದ್ದಕ್ಕಿದ್ದಂತೆ ಆಕೆ ತವರು ಮನೆಗೆ ಬಂದಿದ್ದಾಳೆ.. ಎಷ್ಟು ದಿನ ಆದರೂ ವಾಪಸ್ ಗಂಡನ ಮನೆಗೆ ಹೋಗಿಲ್ಲ.. ಇದ್ರಿಂದ ಅನುಮಾನಗೊಂಡು ಯಾಕೆ ಗಂಡನ ಮನೆಗೆ ಹೋಗುತ್ತಿಲ್ಲ ಎಂದು ಕೇಳಿದಾಗ, ನನಗೆ ಪ್ರಿಯಕರ ಬೇಕು.. ಗಂಡ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾನೆ.. ಆದ್ರೆ ನಾನು ಈ ಮೊದಲೇ ಒಬ್ಬನನ್ನು ಪ್ರೀತಿಸಿದ್ದು ಆತನ ಜೊತೆಗೇ ಇರಬೇಕು ಅನಿಸುತ್ತಿದೆ ಎಂದು ಹೇಳಿದ್ದಾಳೆ.. ಇದಕ್ಕೆ ಪೋಷಕರು ಶಾಕ್ ಆಗಿದ್ದಾರೆ..
ಇದನ್ನೂ ಓದಿ; ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆ ಮೂವರ ಬಗ್ಗೆಯೇ ಕೋಪ; ಯಾರು ಆ ಮೂವರು..?
ಈ ವಿಚಾರ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.. ಪೊಲೀಸರು ಮಧ್ಯಸ್ಥಿಕೆ ವಹಿಸಿದರೂ ಆ ಮಹಿಳೆ ಹಿಡಿದ ಪಟ್ಟು ಬಿಟ್ಟಿಲ್ಲ.. ಕೊನೆಗೆ ನಿನ್ನಿಷ್ಟ ಎಂದು ಮಹಿಳೆಯ ಪೋಷಕರು ಗಂಡ ಮನೆಯವರು ಕೊಟ್ಟಿದ್ದ ಒಡವೆಗಳನ್ನು ಹಿಂತಿರುಗಿಸಿದ್ದಾರೆ.. ನಂತರ ಆಕೆ ಪ್ರಿಯಕರನ ಮನೆಗೆ ಹೋಗಿದ್ದಾಳೆ.. ಶೀಘ್ರದಲ್ಲೇ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ..