Sports

IPL – ಈ ತಂಡದ ಪರ ಆಡಲು ಇಚ್ಛಿಸುತ್ತೇನೆ : ಅಂಬಾಟಿ ರಾಯುಡು

ಮುಂಬೈ : IPL 2022 ಮೆಗಾ ಆಕ್ಷನ್‌ಗೆ ದಿನಗಣನೆ ಶುರುವಾಗಿದೆ. ಇನ್ನೇನು ೫೦ ದಿನಗಳೊಳಗೆ ಮೆಗಾ ಆಕ್ಷನ್‌ ನಡೆಯಲಿದೆ. ಈ ವೇಳೆಯಲ್ಲಿ ಅಂಬಾಟಿ ರಾಯುಡು ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

2022ರ ಐಪಿಎಲ್‌ನಲ್ಲಿ ಒಟ್ಟು ೧೦ ತಂಡಗಳು ಕಾದಾಡಲಿವೆ. ಲಕ್ನೌ ಮತ್ತು ಅಹ್ಮದಾಬಾದ್‌ ಹೊಸ ಸೇರ್ಪಡೆಯ ತಂಡಗಳಾಗಿವೆ. ಈಗಾಗಲೇ ಒಳ ಒಪ್ಪಂದದ ಜೊತೆಗೆ ಕೆಲ ಆಟಗಾರರನ್ನು ಬುಕ್‌ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು ಅಂಬಾಟಿ ರಾಯುಡು ಕಡೆ ಇನ್ನು ಕಣ್ಣಾಡಿಸಿಲ್ಲ.

ಈ ಮಧ್ಯೆ ಅಂಬಾಟಿ ರಾಯುಡು ತಮ್ಮ ಆಸೆಯೊಂದನ್ನು ಹೇಳಿಕೊಂಡಿದ್ದಾರೆ. ಐಪಿಎಲ್‌ ಹರಾಜಿನಲ್ಲಿ ಮತ್ತೊಮ್ಮೆ ನನ್ನನ್ನು ಚೆನೈ ಫ್ರಾಂಚೈಸಿ ಕೊಂಡುಕೊಳ್ಳುತ್ತಾರೆ ಎಂಬ ಭರವಸೆ ಇದೆ. ನಾನು ಚೆನೈ ತಂಡದಲ್ಲಿ ಆಡಲು ಕಾಯುತ್ತಿದ್ದೇನೆ. ನಾನು ಹರಾಜಿನಲ್ಲಿ ಲಭ್ಯವಿರುತ್ತೇನೆ. ಫ್ರಾಂಚೈಸಿಯೊಂದಿಗೆ ನಾನು ನೇರ ಸಂಪರ್ಕ ಹೊಂದಿಲ್ಲ ಆದರೆ ನನ್ನನ್ನು ಕೊಂಡುಕೊಳ್ಳುತ್ತಾರೆಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಅಂಬಾಟಿ ರಾಯುಡು ಚೆನೈ ತಂಡದಲ್ಲಿ ಉತ್ತಮವಾಗಿ ಆಡಿದ್ದರು. ಆದರಿಂದ ಅವರನ್ನು ಚೆನೈ ಫ್ರಾಂಚೈಸಿ ಖರೀದಿಸಿದರೆ ಅಚ್ಚರಿಯಿಲ್ಲ.

Share Post