InternationalSports

ಫಿಫಾ ವರ್ಲ್ಡ್‌ ಕಪ್‌ಗೆ ಮುತ್ತಿಟ್ಟ ಮೆಸ್ಸಿ; ಅರ್ಜೆಂಟೀನಾಗೆ ಪ್ರಶಸ್ತಿಯ ಗರಿ

ದೋಹಾ; ಫಿಫಾ ಫುಟ್ಬಾಲ್‌ ಫೈನಲ್‌ನಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್‌ ಮೆಸ್ಸಿ ತಮ್ಮ ಅದ್ಭುತ ಆಟದಿಂದ ತಮ್ಮ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವ ಚಾಂಪಿಯನ್‌ ಆಗಿದೆ. ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್‌ ಹೊಡೆದು ತಂಡದ ಜಯಕ್ಕೆ ಕಾರಣವಾಗಿದೆ.

ವಿಶ್ವಕಪ್ ಫುಟ್ಬಾಲ್‌ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯಗಳ ಸಾಲಿಗೆ ಈ ಫೈನಲ್‌ ಪಂದ್ಯ ಸೇರಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಅರ್ಜೆಂಟೀನಾ ಸೋಲಿಸಿದೆ. ಎರಡು ಗೋಲು ಗಳಿಸಿದ ಮೆಸ್ಸಿ ಅವರು ಮೊದಲ ಟ್ರೋಫಿಯ ಸಂಭ್ರಮ ಆಚರಿಸಿದ್ದಾರೆ.

ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2–2ರಿಂದ ಸಮಬಲ ಸಾಧಿಸಿದ್ದವು. ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಿಗೆ ಪರಿವರ್ತಿಸಿದರು.

Share Post