Politics

ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ 21 ಹಗರಣಗಳ ಮಾಹಿತಿ ಕೊಟ್ಟ ಸಿಎಂ!

ಬೆಂಗಳೂರು; ವಿಪಕ್ಷಗಳು ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣವನ್ನು ಮುಂದಿಟ್ಟುಕೊಂಡು ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.. ಇತ್ತ ಕಾಂಗ್ರೆಸ್‌ ನಾಯಕರು ಬೇರೆಯದನ್ನೇ ಹೇಳುತ್ತಿದ್ದಾರೆ.. ಮುಡಾದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದ್ದರೂ ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ..

ಇದನ್ನೂ ಓದಿ; ಗಂಡನ ಜೊತೆ ಖುಷಿಯಾಗಿ ಹನಿಮೂನ್‌ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!

ಇನ್ನು ಇಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಸುಮಾರು 21 ಹಗರಣಗಳ ಬಗ್ಗೆ ಲಿಖಿತ ರೂಪದಲ್ಲೇ ನೀಡಿದ್ದಾರೆ.. ಬಿಜೆಪಿ ಕಾಲದ ಹಗರಣ ಬಗ್ಗೆ ಸದನದಲ್ಲಿ ಓದಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಎಪಿಎಂಸಿಯಲ್ಲಿ 42.16 ಕೋಟಿ ರೂ. ಹಗರಣ, ಬೊಮ್ಮಾಯಿ ಸಿಎಂ ಆಗಿದ್ದಾಗ ಭೋವಿ ನಿಗಮದಲ್ಲಿ 87 ಕೋಟಿ ರೂ. ಹಗರಣವಾಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್​ನಲ್ಲಿ 47.10 ಕೋಟಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಬೇರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಮಂಕಿ ಕ್ಯಾಪ್‌ ಧರಿಸಿ ಬಂದ ಚಾಕುವಿನಿಂದ ದಾಳಿ!; ಉದ್ಯಮಿ ಮನೆಯಲ್ಲಿ ನಡೆದಿದ್ದೇನು..?

Share Post