BengaluruCrime

ಡ್ರೈವಿಂಗ್‌ ಕಲಿಸುವಾಗ ಯುವತಿಗೆ ಖಾಸಗಿ ಅಂಗ ಪ್ರದರ್ಶಿಸಿದ ಡ್ರೈವರ್‌!

ಬೆಂಗಳೂರು; ಯುವತಿಗೆ ಕಾರು ಡ್ರೈವಿಂಗ್‌ ಕಲಿಸುವಾಗ ಡ್ರೈವರ್‌ ಅಸಭ್ಯವಾಗಿ ವರ್ತನೆ ಮಾಡಿದ್ದು, ಈ ಬಗ್ಗೆ ಯುವತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿ ಅಣ್ಣಪ್ಪ ಎಂಬಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ..

ಇದನ್ನೂ ಓದಿ; ಗಂಡನ ಜೊತೆ ಖುಷಿಯಾಗಿ ಹನಿಮೂನ್‌ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!

ಯುವತಿಯೊಬ್ಬಳು ಕಾರು ಡ್ರೈವಿಂಗ್‌ ಕಲಿಯಲು ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದಳು. ಅಣ್ಣಪ್ಪ ಎಂಬಾತ ಈ ಯುವತಿಗೆ ಡ್ರೈವಿಂಗ್‌ ಕಲಿಸಿಕೊಡುತ್ತಿದ್ದ.. ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಫ್ಲೈಓವರ್‌ ನಲ್ಲಿ ಡ್ರೈವರ್‌ ಕಲಿಯುವಾಗ ಯುವತಿಗೆ ಅಣ್ಣಪ್ಪ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ ಎಂದು ತಿಳಿದುಬಂದಿದೆ..
ಸದ್ಯ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ..

ಇದನ್ನೂ ಓದಿ; ಮಂಕಿ ಕ್ಯಾಪ್‌ ಧರಿಸಿ ಬಂದ ಚಾಕುವಿನಿಂದ ದಾಳಿ!; ಉದ್ಯಮಿ ಮನೆಯಲ್ಲಿ ನಡೆದಿದ್ದೇನು..?

Share Post